ಬೆಂಗಳೂರು: 20 ವರ್ಷದ ಬಳಿಕ ಫಲ ನೀಡಿದ ರಾಮಫಲ ವೃಕ್ಷಕ್ಕೆ ಭಕ್ತರು ಪೂಜೆ, ಪುನಸ್ಕಾರ ಮಾಡಿದ್ದಾರೆ. ರಾಮಮಂದಿರದಲ್ಲಿ ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಾಳೆ ನೇರವೇರಲಿದ್ದು, ಈ ಹೊತ್ತಿನಲ್ಲಿ 20 ವರ್ಷದ ಬಳಿಕ ಫಲ ನೀಡಿದ ರಾಮಫಲ ವೃಕ್ಷ ಮರದಲ್ಲಿ ಹಣ್ಣು ಬಿಟ್ಟಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಚಾಮರಾಜನಗರದ ಸುರೇಶ್ ಋಗ್ವೇದಿ ಎಂಬವರ ಮನೆಯ ಆವರಣದಲ್ಲಿ ಎರಡು ದಶಕಗಳ ಹಿಂದೆ ರಾಮಫಲ ಗಿಡ ನೆಡಲಾಗಿತ್ತು. ಆದರೆ, ಫಲ ಕೊಟ್ಟಿರಲಿಲ್ಲ ಎನ್ನಲಾಗಿದ್ದು, ಈಗ ಅದು ಫಲ ನೀಡಿದೆ.