ಅಯೋಧ್ಯೆ: ಧಾರ್ಮಿಕ ಪ್ರವಾಸೋದ್ಯಮ ಹೆಚ್ಚಳದ ಎಫೆಕ್ಟ್ ಎನ್ನುವಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಳೆದ ಐದು ವರ್ಷಗಳಲ್ಲಿ ಸರ್ಕಾರಕ್ಕೆ 400 ಕೋಟಿ ತೆರಿಗೆಯನ್ನು ಪಾವತಿಸಿದೆ.
ಈ ಬಗ್ಗೆ ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರೈ ಅವರು ಮಾಹಿತಿ ಹಂಚಿಕೊಂಡಿದ್ದು, ಫೆಬ್ರವರಿ.2, 2020ರಿಂದ ಫೆಬ್ರವರಿ.5, 2025ರವರೆಗೆ ಐದು ವರ್ಷಗಳಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿಂದ 400 ಕೋಟಿ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದ್ದಾಗಿ ತಿಳಿಸಿದ್ದಾರೆ.
400 ಕೋಟಿ ತೆರಿಗೆಯಲ್ಲಿ 270 ಕೋಟಿ ಸರಕು ಮತ್ತು ಸೇವಾ ತೆರಿಗೆ ಆಗಿದ್ದರೇ, ಉಳಿದ 130 ಕೋಟಿ ವಿವಿಧ ವರ್ಗಗಳ ಅಡಿಯ ತೆರಿಗೆ ಆಗಿದೆ. ಟ್ರಸ್ಟ್ ಆರ್ಥಿಕ ದಾಖಲೆಗಳನ್ನು ಸಿಎಜಿಯಿಂದ ಕಾಲ ಕಾಲಕ್ಕೆ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂಬುದಾಗಿ ಹೇಳಿದ್ದಾರೆ.
ದಿನೇ ದಿನೇ ಅಯೋಧ್ಯೆಗೆ ಬರುತ್ತಿರುವ ಭಕ್ತರು ಮತ್ತು ಪ್ರವಾಸಿಗರ ಸಂಖ್ಯೆ ಹತ್ತುಪಟ್ಟು ಹೆಚ್ಚಾಗಿದೆ. ಇದೊಂದು ಬೃಹತ್ ಧಾರ್ಮಿಕ ಪ್ರವಾಸಿ ಕೇಂದ್ರವಾಗಿಯೂ ಮಾರ್ಪಟ್ಟಿರೋದೇ ಇಷ್ಟೊಂದು ಆದಾಯದ ಜೊತೆಗೆ ತೆರಿಗೆ ಪಾವತಿಗೆ ಕಾರಣವಾಗಿದೆ.
ಇನ್ಮುಂದೆ ಭಾರತದೊಳಗೆ ಬರಲು, ಹೋಗಲು ನಕಲಿ ಪಾಸ್ ಪೋರ್ಟ್ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ದಂಡ ಫಿಕ್ಸ್
BIG NEWS: `ಇ ಖಾತಾ’ ಇಲ್ಲದೆ ಆಸ್ತಿ ನೋಂದಣಿ ಇಲ್ಲ: ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ.!