ಬೆಂಗಳೂರು : ಇನ್ನೂ ಪಾಕ್‌ ಪರ ಘೋಷಣೆ ಪ್ರಕರಣ ಹಸಿಹಸಿಯಾಗಿರುವಾಗಲೇ ಸಂಸದ ನಾಸಿರ್ ಹುಸೇನ್‌ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಹೌದು ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಜೊತೆಗೆ ಶಿವಾಜಿನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಇಸ್ತಿಯಾಕ್ ಪೈಲ್ವಾನ್ ಅಹ್ಮದ್ ಇರುವ ಫೋಟೋ ವೈರಲ್​ ಆಗಿದೆ.

ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ‘ಕಾಂಗ್ರೆಸ್’ ಸೇರ್ಪಡೆ ವಿಚಾರ : ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು?

ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಹುಸೇನ್ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಈ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಇದೀಗ ರೌಡಿಶೀಟರ್ ನೊಂದಿಗೆ ಫೋಟೋ ತೆಗೆಸಿಕೊಂಡಿರುವ ಚಿತ್ರ ವೈರಲಾಗಿದ್ದು ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

ಸಿಎಂ, ಡಿಸಿಎಂಗೆ ಇ-ಮೇಲ್ ‘ಬಾಂಬ್ ಬೆದರಿಕೆ’ ಕೇಸ್ : ಬೆಂಗಳೂರು ನಗರದ ಜನನಿಬೀಡ ಪ್ರದೇಶಗಳಲ್ಲಿ ‘ಹೈ ಅಲರ್ಟ್’

ಫೋಟೋದಲ್ಲಿ ರೌಡಿಶೀಟರ್​ ಇಸ್ತಿಯಾಕ್​ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರಿ​​ಗೆ ಹೂಗುಚ್ಛ ನೀಡಿ ಶುಭ ಕೋರುತ್ತಿದ್ದಾರೆ. ಇನ್ನು ರೌಡಿಶೀಟರ್​ ಇಸ್ತಿಯಾಕ್ 1993ರಂದಲೂ ಆಕ್ಟೀವ್ ಆಗಿದ್ದು, ಈತನ ವಿರುದ್ಧ ಸಾಲು ಸಾಲು ಕೊಲೆ, ಕೊಲೆ ಯತ್ನ, ಬೆದರಿಕೆ ಸೇರಿದಂತೆ ಹಲವಾರು ಪ್ರಕರಣಗಳಿವೆ.

ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದ ರಾಜ್ಯ ಸರ್ಕಾರ: ಸನಾತನ ಧರ್ಮಕ್ಕೆ ಸೂಕ್ತ ವಿವರಣೆ, ಪೆರಿಯಾರ್ ಕೃತಿಗಳ ಅಳವಡಿಕೆ

2019 ರ ಜುಲೈ 30 ರಂದು ಇಸ್ತಿಯಾಕ್ ಬಂಧನವಾಗಿತ್ತು. ಶಿವಾಜಿನಗರ ಮಾಜಿ ಕಾರ್ಪೋರೇಟರ್ ಫರೀದಾ ಪತಿ ಇಸ್ತಿಯಾಕ್ ಅಹ್ಮದ್. 2019 ರಲ್ಲಿ ಕಾಂಗ್ರೆಸ್ ಕಚೇರಿಯಲ್ಲೂ ಇಸ್ತಿಯಾಕ್ ಅಹ್ಮದ್ ಕಾಣಿಸಿಕೊಂಡಿದ್ದ. ರಾಜ್ಯ ಉಸ್ತುವಾರಿ ವೇಣುಗೋಪಾಲ್ ಕೂಡ ಭೇಟಿಯಾಗಿದ್ದ. ಈ ವೇಳೆ ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ 2023 ರಲ್ಲಿ ಹಾಲಿ ಶಿವಾಜಿನಗರ ಶಾಸಕ ರಿಸ್ವಾನ್ ಹರ್ಷದ್ ಜೊತೆ ಕೂಡ ಕಾಣಿಸಿಕೊಂಡಿದ್ದ. ಈ ಹಿಂದೆ ಶಾಸಕ ರಿಸ್ವಾನ್ ಹರ್ಷದ್ ಗೆ ಇಸ್ತಿಯಾಕ್ ಸಿಹಿ ತಿನ್ನಿಸೋ ಪೋಟೋ ವೈರಲ್ ಆಗಿತ್ತು.

Share.
Exit mobile version