ಉತ್ತರಕನ್ನಡ : ಲೋಕಸಭೆ ಚುನಾವಣೆ ಸಮಿತಿಸುತ್ತಂತೆ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿದ್ದು ಸಹಜವಾಗಿ ಪಕ್ಷಾಂತರ ಪರ್ವ ನಡೆಯುತ್ತಿದೆ ಇದೇ ವೇಳೆ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಸಿಎಂ, ಡಿಸಿಎಂಗೆ ಇ-ಮೇಲ್ ‘ಬಾಂಬ್ ಬೆದರಿಕೆ’ ಕೇಸ್ : ಬೆಂಗಳೂರು ನಗರದ ಜನನಿಬೀಡ ಪ್ರದೇಶಗಳಲ್ಲಿ ‘ಹೈ ಅಲರ್ಟ್’

ಈ ವಿಷಯದ ಕುರಿತಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಕುರಿತು ನನ್ನ ಜೊತೆ ಮಾತನಾಡಿಲ್ಲ. ರಾಜಕೀಯ ಎಂದರೆ ನಿಂತ ನೀರಲ್ಲ ಯಾವಾಗಲೂ ಸದಾ ಹರಿಯುತ್ತಲೇ ಇರುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದ ರಾಜ್ಯ ಸರ್ಕಾರ: ಸನಾತನ ಧರ್ಮಕ್ಕೆ ಸೂಕ್ತ ವಿವರಣೆ, ಪೆರಿಯಾರ್ ಕೃತಿಗಳ ಅಳವಡಿಕೆ

ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ವಿಚಾರ ವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ರಾಜಕೀಯ ನಿಂತ ನೀರಲ್ಲ. ಹೆಬ್ಬಾರ್ ಪಕ್ಷ ಸೇರ್ಪಡೆ ಬಗ್ಗೆ ನನ್ನ ಜೊತೆ ಮಾತನಾಡಿಲ್ಲ. ಹೆಬ್ಬಾರ್ ಸೇರುವುದಾದರೆ ಸ್ಥಳೀಯರ ನಿರ್ಣಯವನ್ನು ಕೇಳುತ್ತೇವೆ ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸಿದ್ದರಾಮಯ್ಯ ತಿಳಿಸಿದರು.

WATCH VIDEO: ದೇಶದ ಮೊದಲ ಅಂಡರ್ ವಾಟರ್ ಸುರಂಗದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಯಾಣಿಸಿದ ಪ್ರಧಾನಿ ಮೋದಿ

ಇದಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಪೋಟಕ ವಾದಂತಹ ಹೇಳಿಕೆಯನ್ನು ನೀಡಿದ್ದು ಶಿವರಾಮ್ ಹೆಬ್ಬಾರ್ ಅಷ್ಟೇ ಅಲ್ಲದೆ ಇನ್ನೂ ಅನೇಕರು ಶೀಘ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ ಈ ನೆಲೆಯಲ್ಲಿ ಶಿವರಾಮ್ ಹೆಬ್ಬಾರ್ ಬಹುತೇಕ ಕಾಂಗ್ರೆಸ್ ಸೇರ್ಪಡೆಯಾಗುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ತಿಳಿದುಬಂದಿದೆ.

Share.
Exit mobile version