ಬೆಂಗಳೂರು: ಇಂದು ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಇದೇ ವೇಳೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಬಿಜೆಪಿ, ಜೆಡಿಎಸ್ ವಿರುದ್ಧ ಆಪರೇಷನ್ ಬಾಂಬ್ ಆರೋಪ ಮಾಡಿದ್ದಾರೆ.
ಈ ಕುರಿತಂತೆ ಬೆಂಗಳೂರಿನ ಹಿಲ್ಟನ್ ಹೋಟೆಲ್ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ನಮ್ಮ 42 ಶಾಸಕರನ್ನು ಬಿಜೆಪಿ, ಜೆಡಿಎಸ್ ನವರು ಸಂಪರ್ಕಿಸಿ, ಆಪರೇಷನ್ ಮಾಡೋ ಪ್ರಯತ್ನ ನಡೆಸಿದ್ದಾರೆ. ಅವರಿಗೆ ರಾಜಕೀಯದ ಬಗ್ಗೆ ಬೇಸಿಕ್ ಕಾಮನ್ ಸೆನ್ಸ್ ಇಲ್ಲ ಎಂಬುದಾಗಿ ವಾಗ್ಧಾಳಿ ನಡೆಸಿದರು.
ಹಣ ಇದೆ ಎಂದು ಕುದುರೆ ವ್ಯಾಪರ ಮಾಡ್ತಿದ್ದಾರೆ. ಹೆದರಿಸಿ, ಬೆದರಿಸಿ ಚುನಾವಣೆ ಮಾಡೋದು ಸರಿಯಲ್ಲ ಎಂಬುದಾಗಿ ಕಿಡಿಕಾರಿದರು.
ಶ್ಯಾಮನೂರು ಅವರಿಗೆ ಬಿಎಸ್ ಯಡಿಯೂರಪ್ಪ, ಹೆಚ್.ಡಿ ಕುಮಾರಸ್ವಾಮಿ ಕರೆ ಮಾಡಿದ್ದಾರೆ. ನೆಂಟಸ್ತನ ಬೇರೆ, ಬೀಗರ ತನ ಬೇರೆ, ರಾಜಕೀಯವೇ ಬೇರೆ. ರಾಜಕೀಯದಲ್ಲಿ ಯಾವುದು ಕೂಡ ಶಾಶ್ವತವಲ್ಲ ಎಂಬುದಾಗಿ ಗುಡುಗಿದರು.
‘ಉದ್ಯೋಗ’ ಕಳೆದುಕೊಳ್ಳುವ ಭೀತಿಯಿಂದ ‘ಪೇಟಿಎಂ ಉದ್ಯೋಗಿ’ ಆತ್ಮಹತ್ಯೆಗೆ ಶರಣು | Paytm Employee