ಕಲಬುರಗಿ: ಇಡೀ ರಾಜ್ಯವನ್ನೇ ಬೆಚ್ಚು ಬೀಳಿಸಿದ ಜಿಲ್ಲೆಯ ಚಿತ್ತಾಪುರ-ಸೇಡಂ ಕ್ಷೇತ್ರದಲ್ಲಿನ ಕಾಗಿಣಾ ನದಿಯಲ್ಲಿನ ಅದರಲ್ಲೂ ಭಾಗೋಡಿ ಮತ್ತಿತರ ಪ್ರದೇಶದಲ್ಲಿನ ಅಕ್ರಮ ಮರಳುಗಾರಿಕೆ ತನಿಖೆಗೆ ಶುಕ್ರವಾರ ಆಗಮಿಸಿರುವ ಬಳ್ಳಾರಿಯ ಹಿರಿಯ ಭೂ ವಿಜ್ಞಾನಿಗಳ ತಂಡದ ತನಿಖೆಯ ಹಾದಿಯನ್ನು ತಪ್ಪಿಸಲು ವ್ಯವಸ್ಥಿತ ಸಂಚು ನಡೆದಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆಗ್ರಹಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಕಾಗಿಣಾ ನದಿಯಲ್ಲಿ ಕೇವಲ ೪೦ ಎಕರೆ ಪ್ರದೇಶದಲ್ಲಿ ಕಾನೂನು ರೀತಿಯಲ್ಲಿ ಸಾರ್ವಜನಿಕರಿಗೆ ಮರಳು ಒದಗಿಸಬೇಕಾದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಯಮಿತ (ಕೆಆರ್‌ಡಿಎಲ್- ಹಿಂದಿನ ಲ್ಯಾಂಡ್ ಆರ್ಮಿ) ಮರಳು ಪೂರೈಕೆಂಯು ಖಾಸಗಿ ಒಡೆತನ ವ್ಯಕ್ತಿಗಳಿಗೆ ಒಪ್ಪಿಸಿದ್ದರಿಂದ ೪೦ ಎಕರೆ ಬದಲು ೨೫೦-೩೦೦ ಎಕರೆ ನದಿಯಲ್ಲಿ ಮರಳುಗಾರಿಕೆ ಮಾಡಿ ಕಳೆದ ನಾಲ್ಕು ವರ್ಷಗಳಲ್ಲಿ ೩೦-ರಿಂದ ೪೦ ಲಕ್ಷ ಟನ್ ಮರಳುಗಾರಿಕೆ ಮಾಡಿ ಸರ್ಕಾರಕ್ಕೆ ಯಾವುದೇ ರಾಜಧನ ಕಟ್ಟದೇ ರಾಜ್ಯಕ್ಕೆ ಸರ್ಕಾರಕ್ಕೆ ಕೋಟ್ಯಾಂತರ ರೂ ವಂಚಿಸಲಾಗಿದೆ. ಒಟ್ಟಾರೆ ೩೦೦ ರಿಂದ ೪೦೦ ಕೋ.ರೂ ಮೊತ್ತದಷ್ಟು ಅಕ್ರಮ ಮರಳುಗಾರಿಕೆ ದಂಧೆ ನಡೆದಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಣೆ ನೀಡಿದ್ದಾರೆ.
ಚಿತ್ತಾಪುರ ಕ್ಷೇತ್ರದ ನದಿಯಲ್ಲಿನ ಭಾಗೋಡಿ ಮತ್ತಿತರ ಪ್ರದೇಶದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆದ ವಿರುದ್ಧ ಬಿಜೆಪಿ ಹಾಗೂ ಇತರರು ಜತೆಗೆ ಸಾರ್ವಜನಿಕರು ಧ್ವನಿ ಎತ್ತಿ ಆಕ್ರೋಶ ಹೊರ ಹಾಕಿದ ನಂತರ ತನಿಖೆಗೆ ವಹಿಸಲಾಗಿದೆ. ಆದರೆ ತನಿಖೆಗೆ ಆಗಮಿಸಿರುವ ಬಳ್ಳಾರಿಯ ಹಿರಿಯ ಭೂ ವಿಜ್ಞಾನಿಗಳಾದ ಪ್ರವೀಣ ಜೋಶಿ, ಮಂಜೂನಾಥ ಅವರನ್ನೊಳಗೊಂಡ ತಂಡ ಭಾಗೋಡಿಗೆ ಹೋದಾಗ ಖಾಸಗಿ ಪಟ್ಟಾ ಭೂಮಿಯಲ್ಲಿನ ಮರಳುಗಾರಿಕೆಯನ್ನು ಮಾತ್ರ ತೋರಿಸಲಾಗಿದೆ. ಆದರೆ ಕೆಆರ್‌ಡಿಎಲ್ ರಾಶಿ ಗಟ್ಟಲೇ ಗುಡ್ಡೆ ಹಾಕಿರುವ ಮರಳುಗಾರಿಕೆ ಹೋಗದಂತೆ ದಾರಿಯನ್ನು ವಿರೂಪಗೊಳಿಸಲಾಗಿದೆ. ಈ ಮೂಲಕ ಕೆಆರ್‌ಡಿಎಲ್‌ನ ಅಕ್ರಮ ಮರಳುಗಾರಿಕೆ ಮುಚ್ಚಿ ಹಾಕಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಕೆಆರ್‌ಡಿಎಲ್ ಗುಡ್ಡೆ-ಗುಡ್ಡೆಯಾಗಿ ಹಾಕಿದ ಪ್ರದೇಶಕ್ಕೆ ಹೋಗದಂತೆ ಬೀಗ ಜಡೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಒಟ್ಟಾರೆ ಕಾಗಿಣಾ ನದಿಯಲ್ಲಿನ ಅಕ್ರಮ ಅದರಲ್ಲೂ ಕೆಆರ್‌ಡಿಎಲ್ ಹೆಸರಿನಲ್ಲಿ ನಡೆದಿರುವ ಖಾಸಗಿ ವ್ಯಕ್ತಿಗಳ ಮರಳುಗಾರಿಕೆ ದಂಧೆ ಬಯಲಿಗೆ ಬಾರದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ತೇಲ್ಕೂರ ಗಂಭೀರವಾಗಿ ಆರೋಪಿಸಿದ್ದಾರೆ.
ಪೊಲೀಸ್ ರಕ್ಷಣೆ ನೀಡಿ- ಮಾಧ್ಯಮದವರ ಸಮ್ಮುಖದಲ್ಲಿ ತನಿಖೆ ನಡೆಸಿ: ೩೦೦-೪೦೦ ಕೋ.ರೂ ಅಕ್ರಮದ ಕಾಗಿಣಾ ನದಿಯಲ್ಲಿನ ಅಕ್ರಮ ಮರಳುಗಾರಿಕೆ ದಂಧೆಯ ತನಿಖೆಗೆ ಆಗಮಿಸಿರುವ ಬಳ್ಳಾರಿಯ ಹಿರಿಯ ವಿಜ್ಞಾನಿಗಳ ತಂಡಕ್ಕೆ ಜಿಲ್ಲಾಡಳಿತ ಅದರಲ್ಲೂ ಜಿಲ್ಲಾಧಿಕಾರಿಗಳು ಶನಿವಾರ ಮೇ ೧೭ರಂದು ದಿನವಾದರೂ ಸೂಕ್ತ ಪೊಲೀಸ್ ರಕ್ಷಣೆ ನೀಡಿ ಜತೆಗೆ ಮಾಧ್ಯಮದವರ ಸಮ್ಮುಖದಲ್ಲಿ ತನಿಖೆ ನಡೆದು ಸತ್ಯಾಸತ್ಯತೆ ಹೊರ ತರಲು ಕ್ರಮ ಕೈಗೊಳ್ಳಬೇಕು. ತಂಡಕ್ಕೆ ಪಟ್ಟಾ ಭೂಮಿಯಲ್ಲಿನ ಮರಳುಗಾರಿಕೆ ತೋರಿಸಿ ೭-೮ ಕೋ.ರೂ ದಂಡ ಹಾಕಲಾಗಿದೆ ಎಂದು ತೋರಿಸಿ ಕೆಆರ್‌ಡಿಎಲ್‌ನ ಬ್ರಹ್ಮಾಂಡ ಮರಳುಗಾರಿಕೆ ಭೃಷ್ಟಾಚಾರ ಮುಚ್ಚಿ ಹಾಕಲು ಎಲ್ಲ ಕಡೆಯಿಂದ ನಡೆಯುತ್ತಿದೆ. ಆದ್ದರಿಂದ ಹೀಗಾಗಲು ಬಿಜೆಪಿ ಅವಕಾಶ ಮಾಡಿಕೊಡೊದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ರಮ ಮರಳುಗಾರಿಕೆ ಸಂಬAಧವಾಗಿ ಯಾರ ಮೇಲೂ ಕ್ರಮ ಕೈಗೊಳ್ಳದೇ ಪಟ್ಟಾ ಭೂಮಿಯಲ್ಲಿನ ಮರಳುಗಾರಿಕೆಗ ದಂಡ ಹಾಕಲಾಗಿ ಜತೆಗೆ ಕೆಲವರ ಹೆಸರಿಗೆ ಮಾತ್ರ ಕ್ರಮ ಕೈಗೊಳ್ಳಲಾಗಿದೆ ಎಂದು ಇಡೀ ಅಕ್ರಮ ಮರಳು ದಂಧೆ ಮುಚ್ಚಿ ಹಾಕಲಾಗುತ್ತಿದೆ. ಹೀಗಾಗಿ ಇದೆಲ್ಲ ಸಂಪೂರ್ಣ ಬೇರು ಸಮೇತ ಅಕ್ರಮ ಬಯಲಿಗೆ ಬರಬೇಕಾದರೆ
ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯೇ ಸೂಕ್ತ ಏನಿಸುತ್ತಿದೆ. ಆದ್ದರಿಂದ ಸರ್ಕಾರ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂಬುದೇ ತಮ್ಮ ಆಗ್ರಹವಾಗಿದೆ ಎಂದಿದ್ದಾರೆ.
ಭಾಗೋಡಿ ಚಲೋ-ಕಾಗಿಣಾ ಬಚಾವೋ: ಅಕ್ರಮ ಮರಳುಗಾರಿಕೆಯಿಂದ ನಲುಗಿರುವ ಕಾಗಿಣಾ ನದಿ ಉಳಿಸುವ ನಿಟ್ಟಿನಲ್ಲಿ ಭಾಗೋಡಿ ಚಲೋ- ಕಾಗಿಣಾ ಬಚಾವೋ ಆಂದೋಲನ ಹಮ್ಮಿಕೊಳ್ಳಲಾಗುವುದು. ಆದ್ದರಿಂದ ಈಗ ಮಳೆ ಬಂದು ನದಿಯಲ್ಲಿ ನೀರು ನಿಲ್ಲುವ ಮುಂಚೆ ಕೆಆರ್‌ಡಿಎಲ್‌ನ ಅಕ್ರಮ ಮರಳು ದಂಧೆ ತನಿಖೆಯಾಗಿ ತಪ್ಪಿತಸ್ಥ ಎಲ್ಲ ವಿರುದ್ಧ ಕಠಿಣ ಕ್ರಮವಾಗಿ ಸರ್ಕಾರಕ್ಕೆ ಕೋಟ್ಯಾಂತರ ರೂ ರಾಜಧನ ಸಂಗ್ರಹವಾಗಬೇಕು. ಇದು ತಮ್ಮ ಸ್ಪಷ್ಠ ನಿಲುವು ಹಾಗೂ ಆಗ್ರಹವಾಗಿದೆ. ಅದಲ್ಲದೇ ರಾಶಿ- ರಾಶಿಯಾಗಿ ಸಂಗ್ರಹಿಸಿಡಲಾದ ಮರಳು ರಾತೋ ರಾತ್ರಿ ಸಾಗಾಣಿಕೆ ಮಾಡುವ ಎಲ್ಲ ಮುನ್ಸೂಚನೆಗಳಿವೆ. ಹೀಗಾಗಿ ಜಿಲ್ಲಾಡಳಿತ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ತೇಲ್ಕೂರ ಆಗ್ರಹಿಸಿದ್ದಾರೆ.
ಪಾಕ್ ಭಯೋತ್ಪಾದನೆ ಸಾಭೀತಿಗೆ ಮುಂದಾದ ಭಾರತ: ಸರ್ವಪಕ್ಷ ನಿಯೋಗ ಕಳುಹಿಸಲು ನಿರ್ಧಾರ | Pakistan Terrorism
ನಿಮ್ಮ ಮೊಬೈಲ್ ಫೋನಿನ `ಬ್ಯಾಕ್ ಕವರ್’ ಬಣ್ಣ ಬದಲಾಗಲು ಕಾರಣ ಏನು ಗೊತ್ತಾ?
ಭಜರಂಗಿ ಖ್ಯಾತಿಯ ನಟಿ ರುಕ್ಮಿಣಿ ವಿಜಯ್ ಕುಮಾರ್ ಬ್ಯಾಗ್, ಡೈಮಂಡ್ ರಿಂಗ್ ಕದ್ದಿದ್ದ ಕ್ಯಾಬ್ ಚಾಲಕ ಅರೆಸ್ಟ್