ಬೆಂಗಳೂರು: ಮಾಜಿ ಬಿಗ್ ಬಾಸ್ ರಜತ್ ಮಚ್ಚು ಹಿಡಿದು ರೀಲ್ಸ್ ಮಾಡಿ ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ಅವರ ಪತ್ನಿ ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿದಂತ ವೀಡಿಯೋ ವೈರಲ್ ಆಗಿದೆ. ಇವರಿಗೆ ರೂಲ್ಸ್ ಅಪ್ಲೈ ಆಗಲ್ವ ಅಂತ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಮಚ್ಚು ಹಿಡಿದು ರೀಲ್ಸ್ ಮಾಡಿದಂತ ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಪೊಲೀಸ್ ವಶದಲ್ಲಿದ್ದಾರೆ. ಕೋರ್ಟ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಬಸವೇಶ್ವರ ನಗರದ ಪೊಲೀಸರ ವಶಕ್ಕೆ ನೀಡಿದೆ.
ಇಂದು ಮಾಜಿ ಬಿಗ್ ಬಾಸ್ ಪತ್ನಿ ಅಕ್ಷಿತಾ ಅವರು ತಮ್ಮ ಪತಿ ರಜತ್ ನೋಡೋದಕ್ಕೆ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಸ್ಕೂಟಿಯಲ್ಲಿ ಆಗಮಿಸಿದ್ದರು. ಹೀಗೆ ಆಗಮಿಸಿದ್ದು ಹೆಲ್ಮೆಟ್ ಧರಿಸಲೇ ಆಗಿತ್ತು.
ಇದೀಗ ಮಾಜಿ ಬಿಗ್ ಬಾಸ್ ರಜತ್ ಪತ್ನಿ ಅಕ್ಷಿತಾ ಅವರು ಬೈಕ್ ನಲ್ಲಿ ಹೆಲ್ಮೆಟ್ ಇಲ್ಲದೇ ಪೊಲೀಸ್ ಠಾಣೆಗೆ ಬಂದಿರುವಂತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದಂತ ನೆಟ್ಟಿಗರು ಅಲ್ಲ ಸ್ವಾಮಿ ಇವರಿಗೆ ರೂಲ್ಸ್ ಅನ್ವಯ ಆಗೋದಿಲ್ವ ಅಂತ ಪ್ರಶ್ನಿಸಿದ್ದಾರೆ. ಅಲ್ಲದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಚಾರ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆ ‘PSI ಕಿಶೋರ್’ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ ಆರೋಪದಡಿ ‘FIR’ ದಾಖಲು
ಒಳಮೀಸಲಾತಿ: ನ್ಯಾ.ನಾಗಮೋಹನ್ ದಾಸ್ ಆಯೋಗದ ಮಧ್ಯಂತರ ವರದಿ ಅಂಗೀಕರಿಸಿದ ‘ರಾಜ್ಯ ಸಚಿವ ಸಂಪುಟ’
BREAKING NEWS: ಏಪ್ರಿಲ್.2ರಂದು 384 KAS ಹುದ್ದೆಗಳ ನೇಮಕಾತಿಗೆ ‘ಮುಖ್ಯ ಪರೀಕ್ಷೆ’: KPSC ಮಾಹಿತಿ | KAS Main Exam