ರಾಜಸ್ಥಾನ: ಜೈಪುರದಲ್ಲಿ ನಡೆಯುತ್ತಿದ್ದ ಕ್ಯಾಸಿನೊ ಮದ್ಯದ ಡ್ಯಾನ್ಸ್ ಪಾರ್ಟಿ ಮೇಲೆ ಪೊಲೀಸ್​ ದಾಳಿ ನಡೆಸಿದೆ. ಈ ವೇಳೆ 3 ಹುಡುಗಿಯರು ಸೇರಿದಂತೆ 84 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಕರ್ನಾಟಕದ ಮೂವರು ಅಧಿಕಾರಿಗಳು ಸಹ ಸೇರಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ಈ ಫಾರ್ಮ್‌ಹೌಸ್ ಬುಕ್ ಮಾಡಿರುವುದು ಬೆಳಕಿಗೆ ಬಂದಿದೆ. ಅದರ ಮೇಲೆ ಪೊಲೀಸರು ರಾತ್ರಿ 2 ಗಂಟೆಗೆ ದಾಳಿ ನಡೆಸಿದ್ದು, ಕಾರ್ಯಕ್ರಮದ ಆಯೋಜಕರು ಸೇರಿದಂತೆ 84 ಜನರನ್ನು ಬಂಧಿಸಿದ್ದಾರೆ. ಇದಲ್ಲದೇ 13 ನೃತ್ಯ ಹುಡುಗಿಯರೂ ಸಿಕ್ಕಿಬಿದ್ದಿದ್ದಾರೆ. ಇವರನ್ನೆಲ್ಲಾ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಲು ಹೊರಗಿನಿಂದ ಕರೆಸಲಾಗಿತ್ತು. ಅಲ್ಲಿದ್ದವರಿಂದ 23 ಲಕ್ಷ 71 ಸಾವಿರ ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು, ಮದ್ಯದ ಬಾಟಲಿಗಳು, ಹುಕ್ಕಾ, ಪ್ಲೇಯಿಂಗ್ ಕಾರ್ಡ್‌ಗಳು, 14 ಐಷಾರಾಮಿ ಕಾರುಗಳು ಮತ್ತು 1 ಟ್ರಕ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಬಂಧಿತರಾದವರಲ್ಲಿ ಕರ್ನಾಟಕ ಪೊಲೀಸ್ ಇನ್ಸ್‌ಪೆಕ್ಟರ್, ಬೆಂಗಳೂರಿನ ತಹಸೀಲ್ದಾರ್ ಮತ್ತು ಕಾಲೇಜು ಪ್ರಾಧ್ಯಾಪಕರು ಸೇರಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಕ್ರೈಂ ಬ್ರಾಂಚ್ ತಂಡ ದಾಳಿ ನಡೆಸಿದೆ ಎಂದು ಎಸಿಪಿ ಲಂಬಾ ತಿಳಿಸಿದ್ದಾರೆ.

ದೆಹಲಿಯ ನಿವಾಸಿ ನರೇಶ್ ಮಲ್ಹೋತ್ರಾ ಈ ಅಪರಾಧದ ಮಾಸ್ಟರ್ ಮೈಂಡ್ ಆಗಿದ್ದು, ಅವರ ಮಗ ಕೂಡ ಈ ಅಪರಾಧದಲ್ಲಿ ಭಾಗಿಯಾಗಿದ್ದಾನೆ. ನರೇಶ್ ಈ ಪಾರ್ಟಿ ಆಯೋಜಿಸಿದ್ದರು. ಇವರ ವಿರುದ್ಧ ಪ್ರಕರಣ ದಾಖಲಾಗಿದೆ.

Big Breaking News : ಯುಪಿಐ ಸೇವೆಗಳ ಮೇಲೆ ಯಾವುದೇ ಶುಲ್ಕವಿಲ್ಲ, ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ UPI Payment Charges

BIGG NEWS : ಉತ್ತರ ಕರ್ನಾಟಕಕ್ಕೆ ನ್ಯಾಷನಲ್ ಲಾ ಕಾಲೇಜು : ಸಿಎಂ ಬಸವರಾಜ ಬೊಮ್ಮಾಯಿ

ಟೋಲ್ ಶುಲ್ಕ ಪಾವತಿಸಲು ಕೇಳಿದ್ಕೆ ಮಹಿಳಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ… ವಿಡಿಯೋ

Share.
Exit mobile version