ಭೋಪಾಲ್: ಟೋಲ್ ಶುಲ್ಕ ಪಾವತಿಸದೆ ಹೋಗಲು ಬಿಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಟೋಲ್‌ನ ಮಹಿಳಾ ಉದ್ಯೋಗಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ಶನಿವಾರ ನಡೆದಿದೆ. ಇದರ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲಿ, ವ್ಯಕ್ತಿ ಕೋಪದಿಂದ ಮಹಿಳಾ ಸಿಬ್ಬಂದಿ ಕಡೆಗೆ ನಡೆದುಕೊಂಡು ಹೋಗಿ ಆಕೆಯ ಮುಖಕ್ಕೆ ಕಪಾಳಮೋಕ್ಷ ಮಾಡುತ್ತಾನೆ. ಇಷ್ಟಕ್ಕೆ ಬಿಡದ ಮಹಿಳಾ ಸಿಬ್ಬಂದಿ ತನ್ನ ಪಾದರಕ್ಷೆಗಳಿಂದ ಅವನಿಗೆ ಬಾರಿಸಿದ್ದಾಳೆ. ನಂತ್ರ, ವ್ಯಕ್ತಿಯೂ ಕೂಡ ಹೊಡೆಯಲು ಮುಂದಾಗುವುದನ್ನು ನೋಡಬಹುದು.

ರಾಜಗಢ-ಭೋಪಾಲ್ ರಸ್ತೆಯಲ್ಲಿರುವ ಕಚ್ನಾರಿಯಾ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ರಾಜ್‌ಕುಮಾರ್ ಗುರ್ಜರ್ ಎಂಬುವರ ಕಾರು ಫಾಸ್ಟ್‌ಟ್ಯಾಗ್-ಎಲೆಕ್ಟ್ರಾನಿಕ್ ಟೋಲ್ ಪಾವತಿ ವ್ಯವಸ್ಥೆ ಇಲ್ಲದೇ ಇದ್ದು, ತಾವು ಸ್ಥಳೀಯರಾಗಿದ್ದು, ಟೋಲ್ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಬೇಕು ಎಂದು ಪ್ರತಿಪಾದಿಸಿದರು. ಆದರೆ ಅದನ್ನು ಸಾಬೀತುಪಡಿಸಲು ಅವರ ಬಳಿ ಯಾವುದೇ ದಾಖಲೆ ಇರಲಿಲ್ಲ. ಈ ವೇಳೆ ಈ ಘಟನೆ ನಡೆದಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳಾ ಸಿಬ್ಬಂದಿ, ಏಳು ಮಹಿಳಾ ಉದ್ಯೋಗಿಗಳಿರುವ ಈ ಟೋಲ್‌ಗೆ ಕಾವಲುಗಾರರಿಲ್ಲ. ಈ ಪ್ರಕರಣ ಸಂಬಂಧ ದೂರು ನೀಡಿದ್ದರೂ ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎಂದು ಆರೋಪಿಸಿದ್ದಾರೆ.

Big Breaking News : ಯುಪಿಐ ಸೇವೆಗಳ ಮೇಲೆ ಯಾವುದೇ ಶುಲ್ಕವಿಲ್ಲ, ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ UPI Payment Charges

BIG BREAKING NEWS: ಬಿಹಾರ ಸಿಎಂ ನಿತೀಶ್ ಕುಮಾರ್ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ

Good News: ಖಾದ್ಯ ತೈಲ ದರ ಭಾರಿ ಇಳಿಕೆ ಸಾಧ್ಯತೆ

Share.
Exit mobile version