ರಾಜಸ್ಥಾನ ನದಿಯಲ್ಲಿ ಮಗುಚಿದ ದೋಣಿ : 15 ಜನರ ರಕ್ಷಣೆ, ಓರ್ವ ಸಾವು, ಹಲವರು ನಾಪತ್ತೆ – Kannada News Now


India

ರಾಜಸ್ಥಾನ ನದಿಯಲ್ಲಿ ಮಗುಚಿದ ದೋಣಿ : 15 ಜನರ ರಕ್ಷಣೆ, ಓರ್ವ ಸಾವು, ಹಲವರು ನಾಪತ್ತೆ

ಕೋಟಾ: 30ಕ್ಕೂ ಹೆಚ್ಚು ಜನರನ್ನು ಸಾಗಿಸುತ್ತಿದ್ದ ದೋಣಿ ಮಗುಚಿರುವ ಘಟನೆ ಜಿಲ್ಲೆಯ ಖಟೋಲಿ ಪ್ರದೇಶದ ಗೋಥಾಕಲಾ ಗ್ರಾಮದ ಬಳಿಯ ಚಂಬಲ್​ ನದಿಯಲ್ಲಿ ನಡೆದಿದ್ದು, ಹದಿನೈದು ಜನರನ್ನು ರಕ್ಷಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಜನರು ದೋಣಿ ಮೂಲಕ ಕಮಲೇಶ್ವರ ಧಾಮ್ ಬುಂಡಿ ಪ್ರದೇಶಕ್ಕೆ ತೆರಳುತ್ತಿದ್ದರು. ಈ ವೇಳೆ ದೋಣಿ ಮಗುಚಿದ್ದು, ಜನರೆಲ್ಲರೂ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಸ್ಥಳೀಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ರಕ್ಷಣೆಗೆ ಮುಂದಾಗಿದ್ದಾರೆ.

ಇದುವರೆಗೆ 15 ಜನರ ರಕ್ಷಣೆ ಮಾಡಲಾಗಿದ್ದು, 14 ಜನರು ನಾಪತ್ತೆಯಾಗಿದ್ದಾರೆ. ಓರ್ವ ಘಟನೆಯಲ್ಲಿ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ ಎಂದು ತಿಳಿದು ಬಂದಿದೆ.