ಬೆಂಗಳೂರು: ನಗರದ ಪರಪ್ಪನ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯದ ಬಗ್ಗೆ ಸುದ್ದಿಯಾಗಿ ಕೆಲ ದಿನಗಳವರೆಗೆ ಅಷ್ಟೇ ಬಂದ್ ಆದರೇ, ಮತ್ತೆ ಅದೇ ಪ್ರಕ್ರಿಯೆ ನಡೆಯುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಸಜಾ ಬಂಧಿಯೊಬ್ಬರ ಕೈದಿಯ ಪತ್ನಿ, ಜೈಲಿನೊಳಗೆ ಭೇಟಿ ನೀಡಿ, ಅವರೊಂದಿಗೆ ಪೋಟೋ ತೆಗೆಸಿಕೊಂಡಿರುವಂತ ಪೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆಗಾಗ ಹಿರಿಯ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿ ಇದಕ್ಕೆ ಬ್ರೇಕ್ ಹಾಕಲಾಗಿತ್ತು. ಇದರ ನಡುವೆಯೂ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ಮುಂದುವರೆದಿದೆ.
ಹೌದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥಅಯ ಮುಂದುವರೆದಿದೆ. ಸಜಾ ಕೈದಿಯೊಬ್ಬನ ಪತ್ನಿ ರಾಜಾರೋಷವಾಗಿ ಜೈಲಿನೊಳಗೆ ಎಂಟ್ರಿಕೊಟ್ಟಿದ್ದಾರೆ. ಇದಷ್ಟೇ ಅಲ್ಲದೇ ಜೈಲಿನಲ್ಲಿ ಭೇಟಿ ಮಾಡಿ ಪೋಟೋವನ್ನು ಸಜಾಬಂಧಿಯೊಂದಿಗೆ ತೆಗೆಸಿಕೊಂಡು ಶೇರ್ ಮಾಡಿದ್ದಾರೆ.
ಮಾರಪ್ಪ ಎಂಬಾತನ ಕೊಲೆ ಕೇಸ್ ನಲ್ಲಿ ಜೈಲನ್ನು ಸೇರಿರುವಂತ ಸಜಾಬಂಧಿ ಇವರಾಗಿದ್ದಾರೆ. ರಫೀಕ್ ಮತ್ತು ಸಾದಿಕ್ ಅಹಮ್ಮದ್ ಎಂಬುವರು ಜೈಲು ಸೇರಿದ್ದರು. ಇದೀಗ ಸಾದಿಕ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದಂತ ಆರೋಪ ಕೇಳಿ ಬಂದಿದೆ.
ಐದಾರು ಬಾರಿ ಜೈಲಿನ ಒಳಗೆ ಪತ್ನಿಯನ್ನು ಸಾದಿಕ್ ಕರೆಸಿಕೊಂಡಿರೋದಾಗಿ ಹೇಳಲಾಗುತ್ತಿದೆ. ಜೈಲಿನ ಒಳಗಡೆ ಪತಿ-ಪತ್ನಿ ಚೇರ್ ಮೇಲೆ ಕುಳಿತಿರುವ ಪೋಟೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ಹಿಟ್ ಅಂಡ್ ರನ್, ಬ್ಲ್ಯಾಕ್ ಮೇಲ್ ಮಾಡುವುದಲ್ಲ, ದಾಖಲೆ ಸಹಿತ ಬಹಿರಂಗ ಚರ್ಚೆಗೆ ಬನ್ನಿ: HDKಗೆ ಡಿಕೆಶಿ ಸವಾಲ್
BREAKING : ಬೆಂಗಳೂರಲ್ಲಿ ಸುರಂಗ ಮಾರ್ಗ ನಿರ್ಮಾಣ ವಿಚಾರ : ರಾಜ್ಯ ಸರ್ಕಾರ & ‘GBA’ ಗೆ ಹೈಕೋರ್ಟ್ ನೋಟಿಸ್ ಜಾರಿ








