ಶಿವಮೊಗ್ಗ: ಸಾಗರ ತಾಲ್ಲೂಕು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಪುತ್ರಿಯನ್ನು ನೋಡೋದಕ್ಕೆ ಬೆಲ್ಜಿಯಂಗೆ ತೆರಳಿದ್ದಾರೆ. ಆದ್ರೇ ಶಾಸಕರ ತನು, ಮನ ಮಾತ್ರ ತಾಲ್ಲೂಕಿನ ಜನತೆಗಾಗಿ ಮಿಡಿಯುತ್ತಿದೆ. ಈ ಕಾರಣಕ್ಕಾಗಿಯೇ ಸಾಗರ ತಾಲ್ಲೂಕಿನಲ್ಲಿ ಮಳೆಹಾನಿಯಿಂದ ಜನತೆಗೆ ಉಂಟಾಗುತ್ತಿರುವಂತ ತೊಂದರೆ ನಿವಾರಿಸುವಂತೆ ವಿದೇಶದಿಂದಲೇ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಡ್ಡಿದ್ದಾರೆ.
ಇಂದು ಸಾಗರ ತಾಲ್ಲೂಕು ಆಡಳಿತದ ಎಲ್ಲಾ ಅಧಿಕಾರಿಗಳೊಂದಿಗೆ ಬೆಲ್ಜಿಯಂನಿಂದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ವೀಡಿಯೋ ಕಾನ್ಫೆರೆನ್ಸ್ ಮೂಲಕ ಸಭೆಯನ್ನು ನಡೆಸಿದರು. ಸಾಗರ ತಾಲ್ಲೂಕಿನಲ್ಲಿ ಭಾರೀ ಮಳೆಯ ಕಾರಣ ಮನೆಗಳು ಬಿದ್ದಿದ್ದರೇ, ಕೆಲವೆಡೆ ರಸ್ತೆ ಕಿತ್ತೋಗಿದೆ. ಮತ್ತೆ ಕೆಲವೆಡೆ ನೆರೆ ಆವರಿಸಿದೆ. ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.
ಸಾಗರ-ಹೊಸನಗರ ಕ್ಷೇತ್ರದಲ್ಲಿ ಮಳೆಹಾನಿ ಕುರಿತು ಬೆಲ್ಜಿಯಂ ದೇಶದಿಂದ ಸಾಗರ ವಿಧಾನಸಭಾ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಜೂಮ್ ಮೀಟಿಂಗ್ ನಲ್ಲಿ ಮಾತನಾಡಿ, ಕ್ಷೇತ್ರದ ಮಳೆಹಾನಿ ಪರಿಹಾರ ನೀಡಲು ವಿದೇಶದಲ್ಲಿದ್ದರೂ 24*7 ಜನಸೇವೆಗೆ ಮುಡಿಪಾಗಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೀಗ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಜನರ ಮೇಲಿನ ಕಾಳಜಿಗೆ ಅಪಾರ ಮೆಚ್ಚುಗೆಗೊ ಕಾರಣವಾಗಿದೆ.
ಇನ್ನೂ ಇಂದಿನ ವೀಡಿಯೋ ಕಾನ್ಫೆರೆನ್ಸ್ ನಲ್ಲಿ ಅವರು, ಮಳೆಯಿಂದ ಕ್ಷೇತ್ರದ ಜನತೆಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಈ ವೇಳೆಯಲ್ಲಿ ಶಾಸಕರಿಗೆ ಹಾನಿಗೊಳಗಾದ ಎಲ್ಲರಿಗೂ ಸೂಕ್ತ ರೀತಿಯ ಪರಿಹಾರ ನೀಡಲಾಗಿದೆ ಎಂದ ಸಾಗರ ತಹಶಿಲ್ದಾರರಾದ ಚಂದ್ರಶೇಖರ ನಾಯ್ಕ ಮತ್ತು ಸಾಗರ ನಗರಸಭಾ ಕಮೀಷನರ್ ಎಚ್.ಕೆ. ನಾಗಪ್ಪ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಕಡೆ ಹೆಚ್ಚಿನ ಗಮನ ನೀಡಲಾಗಿದ್ದು, ಹಾನಿಗೊಳಗಾದ ಪ್ರತಿಯೊಂದು ಕಡೆ ನಿಗಾ ವಹಿಸಲು ಪಿಡಿಓಗಳಿಗೆ ಹೇಳಲಾಗಿದೆ ಅಂತ ಸಾಗರ ತಾಲ್ಲೂಕು ಪಂಚಾಯ್ತಿ ಇಓ ಗುರುಕೃಷ್ಣ ಶೆಣೈ ಮಾಹಿತಿ ನೀಡಿದರು.
ಗ್ರಾಮೀಣ ಭಾಗದ ಕುಡಿಯುವ ನೀರು ಮತ್ತು ನೈರ್ನಲ್ಯದ ಬಗ್ಗೆ ಗಮನವಿಟ್ಡು ಜನತೆಗೆ ತೊಂದರೆ ಆಗದಂತೆ ಕೆಲಸ ಮಾಡಲಾಗಿದೆ ಅಂತ ಶಾಸಕರಿಗೆ ಇಂಜಿನಿಯರ್ ಭರತ್ ಸ್ಪಷ್ಟ ಪಡಿಸಿದರು.
ಇನ್ನೂ ರಸ್ತೆಗಳು ಮಳೆಯಿಂದ ಹಾನಿಗೊಳಗಾದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮತ್ತು ಸಾಗರ ತಾಲ್ಲೂಕು ಕಚೇರಿ ಮೇಲ್ಚಾವಣಿಗೆ ಟೆಂಡರ್ ಕತೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂಬುದಾಗಿ ಲೋಕೋಪಯೋಗಿ ಇಂಜಿನಿಯರ್ ಮಂಜುನಾಥ ಅವರು ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗಮನಕ್ಕೆ ತಂದರು.
ಮಳೆಯಿಂದ ಶಾಲೆಗಳಿಗೆ ಹಾನಿಯಾಗಿದ್ದು, ಅವುಗಳಲ್ಲಿ ಪಾಠ ಮಾಡಲು ಸಾಧ್ಯವಾಗದೇ ಇದ್ದರೆ ಅಂತಹ ಸ್ಥಳದಲ್ಲಿ ಮುಖ್ಯಶಿಕ್ಷಕರು ತೀರ್ಮಾನ ಕೈಗೊಳ್ಳಲು ಸೂಚಿಸಲಾಗಿದೆ ಅಂತ ಬಿಇಓ ಪರಶುರಾಮ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕ್ಷೇತ್ರದಲ್ಲಿ ಭಾರೀ ಮಳೆಯಾಗುತ್ತಿರುವುದರ ನಡುವೆ, ಕೆಲಸ ಮಾಡುತ್ತಿರುವ ಮೆಸ್ಕಾಂ ಲೈನ್’ಮನ್ ಗಳ ಪರಿಶ್ರಮವನ್ನು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಳೆಹಾನಿ ಪ್ರದೇಶಗಳಿಗೆ ಕೂಡಲೇ ಅಧಿಕಾರಿಗಳು ಭೇಟಿ ನೀಡಬೇಕು. ಮನೆ ಕುಸಿತಗೊಂಡರೇ ತಕ್ಷಣವೇ ಪರಿಹಾರವನ್ನು ನೀಡಬೇಕು. ಕಂದಾಯ ಅಧಿಕಾರಿಗಳು ಮಳೆಯಿಂದ ಹಾನಿಯಾದಂತ ವರದಿಯನ್ನು ಸರ್ಕಾರಕ್ಕೆ ಸಕಾಲದಲ್ಲಿ ಸಲ್ಲಿಸಿ, ಸೂಕ್ತ ಪರಿಹಾರ ಸಿಗುವಂತೆ ಮಾಡಲು ಕ್ರಮವಹಿಸಬೇಕು. ಹಾನಿಗೂ ಮುನ್ನವೇ ಸೂಕ್ತ ಮುಂಜಾಗ್ರತೆಯನ್ನು ವಹಿಸೋದಕ್ಕೂ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
‘ರೈಲ್ವೆ ಪ್ರಯಾಣಿಕ’ರ ಗಮನಕ್ಕೆ: ಈ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ, ರದ್ದು | South Western Railway
BREAKING : ಅಸಹಜ ಲೈಂಗಿಕ ದೌರ್ಜನ್ಯ ಕೇಸ್ : 2ನೇ ಪ್ರಕರಣದಲ್ಲೂ ಸೂರಜ್ ರೇವಣ್ಣಗೆ ಜಾಮೀನು ಮಂಜೂರು!