Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Income Tax Saving Tips : ಲಕ್ಷಗಟ್ಟಲೆ ಸಂಪಾದಿಸಿದರೂ ಶೂನ್ಯ ತೆರಿಗೆ : ಇವರಿಗೆ ಒಂದೂ ರೂಪಾಯಿ ತೆರಿಗೆ ಇರಲ್ಲ.!

​ಹೊರ್ಮುಜ್ ಜಲಸಂಧಿ ಬಳಿ ಉದ್ವಿಗ್ನತೆ: ಇರಾನ್‌ನ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕ; ಕ್ಯೂಶ್ಮ್ ದ್ವೀಪದ ಮೇಲೆ ದಾಳಿ!

BIG NEWS : ರಾಜ್ಯದ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ ಪ್ರಕ್ರಿಯೆಗೆ ಸರ್ಕಾರ ಮಹತ್ವದ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Rain Alert : ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಇಬ್ಬರು ಬಲಿ : ಇನ್ನೂ 3 ದಿನ ಭಾರೀ ಮಳೆ ಮುನ್ಸೂಚನೆ.!
KARNATAKA

Rain Alert : ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಇಬ್ಬರು ಬಲಿ : ಇನ್ನೂ 3 ದಿನ ಭಾರೀ ಮಳೆ ಮುನ್ಸೂಚನೆ.!

By kannadanewsnow57

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಗುಡುಗು ಸಹಿತ ಸುರಿದ ಮಳೆಗೆ ಇಬ್ಬರು ಬಲಿಯಾಗಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ.
ಸೋಮವಾರ ರಾಜ್ಯದ ಕೊಪ್ಪಳ, ಗದಗ, ರಾಯಚೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಪ್ರಕೃತಿ ವಿಕೋಪಕ್ಕೆ ಇಬ್ಬರು ಮೃತಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಿ. ಬೆಂಚಮಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ದೇವರಾಯನಗೌಡ ಪಾಟೀಲ (50) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಅಡಿಕೆ ತೋಟದ ಮನೆಗೆ ಹಾಕಿದ್ದ ಹಂಚುಗಳು ಹಾರಿ ಹೋಗಿವೆ. ಇದನ್ನು ಕಂಡು ಗಾಬರಿಗೊಂಡ ಆರ್. ಲೋಕೇಶ (52) ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ರಾಯಚೂರು ಜಿಲ್ಲೆಯ ಹಳೆ ಕೆರೆ ಎಂಬಲ್ಲಿ ಸಿಡಿಲು ಬಡಿದು 8 ಕುರಿಗಳು ಹಾಗೂ 3 ಕುರಿಮರಿಗಳು ಮೃತಪಟ್ಟಿವೆ. ಗದಗ ಜಿಲ್ಲೆಯ ಮುಂಡರಗಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಖಾಸಗಿ ಕಂಪನಿಯ ಮೊಬೈಲ್ ಟವರ್ ಕಂಬ ಮುರಿದು ಬಿದ್ದಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಸಾವಿರಾರು ಅಡಿಕೆ ಮರಗಳು ನೆಲಸಮವಾಗಿವೆ.

ಕಳೆದ ಕೆಲವು ದಿನಗಳಿಂದ ದಾಖಲೆ ಮಟ್ಟದ ತಾಪಮಾನದಿಂದ ಬೆಂದಿರುವ ಬೆಂಗಳೂರಿಗೆ ಹವಾಮಾನ ಇಲಾಖೆ ಸಮಾಧಾನದ ಸುದ್ದಿ ನೀಡಿದೆ. ಏಪ್ರಿಲ್ 28 ರಿಂದ ಮೇ 1 ರವರೆಗೆ ನಗರದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಳೆಯ ಸಮಯದಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ಇದೆ. ಮಳೆಯ ಮುನ್ಸೂಚನೆ ಇದ್ದರೂ ನಗರದಲ್ಲಿ ಬಿಸಿಲಿನ ತಾಪ ಮುಂದುವರಿದಿದೆ. ಭಾನುವಾರ ನಗರದ ಗರಿಷ್ಠ ತಾಪಮಾನ 36.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 38.2 ಡಿಗ್ರಿ ಮತ್ತು ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ 36.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇರುವುದರಿಂದ ನಗರದ ಉಷ್ಣಾಂಶದಲ್ಲಿ ತುಸು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Rain Alert: Two killed in Varuna's roar in the state: Heavy rain forecast for 3 more days!
Share. Facebook Twitter LinkedIn WhatsApp Email

Related Posts

Income Tax Saving Tips : ಲಕ್ಷಗಟ್ಟಲೆ ಸಂಪಾದಿಸಿದರೂ ಶೂನ್ಯ ತೆರಿಗೆ : ಇವರಿಗೆ ಒಂದೂ ರೂಪಾಯಿ ತೆರಿಗೆ ಇರಲ್ಲ.!

3 Mins Read

BIG NEWS : ರಾಜ್ಯದ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ ಪ್ರಕ್ರಿಯೆಗೆ ಸರ್ಕಾರ ಮಹತ್ವದ ಆದೇಶ

1 Min Read

JOB ALERT : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3,395 ಸಿವಿಲ್ `ಕಾನ್ಸ್ ಟೇಬಲ್’ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | Police Recruitment

2 Mins Read
Recent News

Income Tax Saving Tips : ಲಕ್ಷಗಟ್ಟಲೆ ಸಂಪಾದಿಸಿದರೂ ಶೂನ್ಯ ತೆರಿಗೆ : ಇವರಿಗೆ ಒಂದೂ ರೂಪಾಯಿ ತೆರಿಗೆ ಇರಲ್ಲ.!

​ಹೊರ್ಮುಜ್ ಜಲಸಂಧಿ ಬಳಿ ಉದ್ವಿಗ್ನತೆ: ಇರಾನ್‌ನ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕ; ಕ್ಯೂಶ್ಮ್ ದ್ವೀಪದ ಮೇಲೆ ದಾಳಿ!

BIG NEWS : ರಾಜ್ಯದ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ ಪ್ರಕ್ರಿಯೆಗೆ ಸರ್ಕಾರ ಮಹತ್ವದ ಆದೇಶ

ಕಾಕ್ರೋಚ್ ಜನತಾ ಪಾರ್ಟಿ’ಯಿಂದ ದೆಹಲಿಯಲ್ಲಿ ಮೊದಲ ಪ್ರತಿಭಟನೆ:’ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ’ ಪಟ್ಟಿ ಬಿಡುಗಡೆ !

State News
KARNATAKA

Income Tax Saving Tips : ಲಕ್ಷಗಟ್ಟಲೆ ಸಂಪಾದಿಸಿದರೂ ಶೂನ್ಯ ತೆರಿಗೆ : ಇವರಿಗೆ ಒಂದೂ ರೂಪಾಯಿ ತೆರಿಗೆ ಇರಲ್ಲ.!

By kannadanewsnow57 KARNATAKA 3 Mins Read

ಹೆಚ್ಚು ಆದಾಯ ಗಳಿಸಿದರೆ ಅನಿವಾರ್ಯವಾಗಿ ಹೆಚ್ಚಿನ ಆದಾಯ ತೆರಿಗೆ (Income Tax) ಪಾವತಿಸಬೇಕೆಂಬುದು ಅನೇಕರ ನಂಬಿಕೆ. ಆದರೆ ಆದಾಯ ತೆರಿಗೆ…

BIG NEWS : ರಾಜ್ಯದ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ ಪ್ರಕ್ರಿಯೆಗೆ ಸರ್ಕಾರ ಮಹತ್ವದ ಆದೇಶ

JOB ALERT : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3,395 ಸಿವಿಲ್ `ಕಾನ್ಸ್ ಟೇಬಲ್’ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | Police Recruitment

Rain Alert : ಕರ್ನಾಟಕಕ್ಕೆ ಮುಂಗಾರು ಪ್ರವೇಶ : ರಾಜ್ಯಾದ್ಯಂತ ಮುಂದಿನ 7 ದಿನ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.