ಮೈಸೂರು: ಅರಸೀಕೆರೆ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ನಡೆಯಲಿರುವ ಪ್ಲಾಟ್‌ಫಾರ್ಮ್ ಶೆಲ್ಟರ್ ಕಾಮಗಾರಿಯ ಸಲುವಾಗಿ, ಕೆಲವು ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂಬುದಾಗಿ ಮೈಸೂರಿನ ನೈರುತ್ಯ ರೈಲ್ವೆ ವಿಭಾಗವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನವೆಂಬರ್ 9 ರಿಂದ ಡಿಸೆಂಬರ್ 13 ರವರೆಗೆ ರೈಲು ಸಂಖ್ಯೆ 16214 ಎಸ್.ಎಸ್.ಎಸ್. ಹುಬ್ಬಳ್ಳಿ – ಅರಸೀಕೆರೆ ಎಕ್ಸ್‌ಪ್ರೆಸ್ ರೈಲು ಬೀರೂರು ಮತ್ತು ಅರಸೀಕೆರೆ ನಡುವೆ ರದ್ದಾಗಲಿದ್ದು, ಈ ರೈಲು ಬೀರೂರು ನಿಲ್ದಾಣದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿವೆ.
ಅದೇ ರೀತಿ, ನವೆಂಬರ್ 10 ರಿಂದ ಡಿಸೆಂಬರ್ 14 ರವರೆಗೆ ಸಂಚರಿಸುವ ರೈಲು ಸಂಖ್ಯೆ 16213 ಅರಸೀಕೆರೆ – ಎಸ್.ಎಸ್.ಎಸ್. ಹುಬ್ಬಳ್ಳಿ ಎಕ್ಸ್‌ಪ್ರೆಸ್ ಸೇವೆಯು ಅರಸೀಕೆರೆ ಮತ್ತು ಬೀರೂರು ನಡುವೆ ರದ್ದಾಗಲಿದೆ; ಈ ರೈಲು ಅರಸೀಕೆರೆಗೆ ಬದಲು ಬೀರೂರು ನಿಲ್ದಾಣದಿಂದಲೇ ತನ್ನ ನಿಗದಿತ ಸಮಯದಲ್ಲಿ ಹೊರಡಲಿವೆ.
ಇದರ ಜೊತೆಗೆ, ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್ ರೈಲು ಕೂಡ ನವೆಂಬರ್ 10 ರಿಂದ ಡಿಸೆಂಬರ್ 14 ರವರೆಗೆ ಅರಸೀಕೆರೆ ಮತ್ತು ಹಾಸನ ನಡುವೆ ರದ್ದಾಗಲಿದೆ, ಮತ್ತು ಈ ಪ್ಯಾಸೆಂಜರ್ ರೈಲು ಅರಸೀಕೆರೆ ಬದಲಾಗಿ ಹಾಸನದಿಂದಲೇ ತನ್ನ ಸಂಚಾರವನ್ನು ಆರಂಭಿಸಲಿದೆ.
BIG NEWS: ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿಗೆ ‘ಬಾಲಾಪರಾಧಿ’ ಎನ್ನುವಂತಿಲ್ಲ: ಮಕ್ಕಳ ರಕ್ಷಣಾ ನಿರ್ದೇಶನಾಲಯ
BREAKING: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರದ ತಡೆ: ಪರಿಸರವಾದಿಗಳ ಹೋರಾಟಕ್ಕೆ ಗೆಲುವು








