ಕೊಪ್ಪಳ: ಕನ್ನಡ ಮಾತಾಡಿ ಎಂದಿದ್ದಕ್ಕೆ ಟಿಕೆಟ್ ಕಲೆಕ್ಟರ್ ಒಬ್ಬರು ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದಂತ ಘಟನೆ ಮೈಸೂರು ಟು ಕೊಪ್ಪಳ ರೈಲಿನಲ್ಲಿ ನಡೆದಿದೆ.
ಏಪ್ರಿಲ್.24ರಂದು ಮೈಸೂರಿನಿಂದ ಕೊಪ್ಪಳಕ್ಕೆ ಪ್ರಯಾಣಿಕರೊಬ್ಬರು ಸಂಚರಿಸುತ್ತಿದ್ದರು. ಬೆಂಗಳೂರಿನ ಯಲಹಂಕ ತಲುಪಿದಾಗ ಟಿಕೆಟ್ ತಪಾಸಣೆಗೆ ರೈಲಿನಲ್ಲಿ ಕಲೆಕ್ಟರ್ ಬಂದಿದ್ದಾರೆ.
ಕೊಪ್ಪಳ ಮೂಲದ ಪ್ರಯಾಣಿಕ ಮೊಹಮ್ಮದ್ ಭಾಷಾ ಟಿಕೆಟ್ ಕಲೆಕ್ಟರ್ ಗೆ ಕನ್ನಡ ಮಾತನಾಡು ಎಂಬುದಾಗಿ ಆಗ್ರಹಿಸಿದ್ದಾರೆ. ಆಗ ಟಿಕೆಟ್ ಕಲೆಕ್ಟರ್ ಕನ್ನಡ ಬರಲ್ಲ ಎಂದಿದ್ದಾನೆ. ಕರ್ನಾಟಕದಲ್ಲಿ ಇದ್ದೀರಿ. ಕನ್ನಡ ಕಲಿಯೋದಕ್ಕೆ ಆಗಲ್ವ ಅಂತ ಹೇಳಿದ್ದಕ್ಕೆ ರೊಚ್ಚಿಗೆದ್ದಂತ ಟಿಕೆಟ್ ಕಲೆಕ್ಟರ್ ಮೊಹಮ್ಮದ್ ಭಾಷಾ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಅಂದಹಾಗೇ ಮೈಸೂರಿಗೆ ಮೊಹಮ್ಮದ್ ಭಾಷಾ ಕೆಲಸದ ನಿಮಿತ್ತ ತೆರಳಿ, ಏಪ್ರಿಲ್.24ರಂದು ಕೊಪ್ಪಳಕ್ಕೆ ವಾಪಾಸ್ ಆಗುವಾಗ ಈ ಘಟನೆ ನಡೆದಿದೆ. ಘಟನೆಯನ್ನು ವೀಡಿಯೋ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ.