ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ತಮಿಳುನಾಡಿನ ವೆಲಂಕಣಿಯಲ್ಲಿ ನಡೆಯಲಿರುವ ಹಬ್ಬದ ಪ್ರಯುಕ್ತ & ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ವಾಸ್ಕೋ-ಡ-ಗಾಮಾ ಮತ್ತು ತಮಿಳುನಾಡಿನ ವೆಲಂಕಣಿ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ.
ರೈಲು ಸಂಖ್ಯೆ 07361/07362 ವಾಸ್ಕೋ-ಡ-ಗಾಮಾ ಮತ್ತು ವೆಲಂಕಣಿ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಎರಡು ದಿಕ್ಕಿನಲ್ಲಿ ಒಟ್ಟು 3 ಟ್ರಿಪ್ ಓಡಿಸಲಾಗುತ್ತಿದೆ.
ರೈಲು ಸಂಖ್ಯೆ 07361 ಆಗಸ್ಟ್ 27 ಮತ್ತು ಸೆಪ್ಟೆಂಬರ್ 2 & 6 ರಂದು ವಾಸ್ಕೋ-ಡ-ಗಾಮಾ ನಿಲ್ದಾಣದಿಂದ ರಾತ್ರಿ 09:55 ಗಂಟೆಗೆ ಹೊರಟು, ಮೂರನೇ ದಿನ ಮಧ್ಯರಾತ್ರಿ 01:30 ಗಂಟೆಗೆ ವೆಲಂಕಣಿ ನಿಲ್ದಾಣವನ್ನು ತಲುಪಲಿದೆ.
ಅದೇ ರೀತಿ ರೈಲು ಸಂಖ್ಯೆ 07362 ಆಗಸ್ಟ್ 29, ಸೆಪ್ಟೆಂಬರ್ 4 ಮತ್ತು 8 ರಂದು ರಾತ್ರಿ 11:55 ಗಂಟೆಗೆ ವೆಲಂಕಣಿ ನಿಲ್ದಾಣದಿಂದ ಹೊರಟು, ಮೂರನೇ ದಿನ ಮಧ್ಯರಾತ್ರಿ 12:15 ಗಂಟೆಗೆ ವಾಸ್ಕೋ-ಡ-ಗಾಮಾ ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಎರಡು ಮಾರ್ಗದಲ್ಲಿ ಮಡಗಾಂವ್, ಸ್ಯಾನ್ವೋರ್ಡಮ್, ಕುಲೆಂ, ಕ್ಯಾಸಲ್ ರಾಕ್, ಲೋಂಡಾ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಎಸ್ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಕೃಷ್ಣರಾಜಪುರಂ, ವೈಟ್ಫೀಲ್ಡ್, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ತಂಜಾವೂರು, ತಿರುವರೂರ್ ಮತ್ತು ನಾಗಪಟ್ಟಣಂ ಈ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
ಈ ವಿಶೇಷ ರೈಲುಗಳು ಎರಡು ಎಸಿ ಟು ಟೈಯರ್, ನಾಲ್ಕು ಎಸಿ ತ್ರಿ ಟೈಯರ್, ಹತ್ತು ಸ್ಲೀಪರ್ ಕ್ಲಾಸ್, ಎರಡು ಸಾಮಾನ್ಯ ದ್ವಿತೀಯ ದರ್ಜೆ ಮತ್ತು ಎರಡು ಎಸ್ಎಲ್ಆರ್/ಡಿ ಸೇರಿದಂತೆ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ.
ಮುಂಗಡ ಬುಕಿಂಗ್ ಮತ್ತು ಇತರ ಮಾಹಿತಿಗಾಗಿ, ಪ್ರಯಾಣಿಕರು www.enquiry.indianrail.gov.in ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ 139 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ರಾಜ್ಯದ ‘ಕಟ್ಟಡ ಕಾರ್ಮಿಕ’ರಿಗೆ ಗುಡ್ ನ್ಯೂಸ್: ನಿಮಗಾಗಿ ‘ಅಂಬೇಡ್ಕರ್ ಸೇವಾ ಕೇಂದ್ರ’ ಆರಂಭ
RBI ನಿಂದ ಮಹತ್ವದ ತೀರ್ಮಾನ: ಈಗ ನಿಮ್ಮ ಚೆಕ್ ಅನ್ನು ಶೀಘ್ರದಲ್ಲೇ ಬ್ಯಾಂಕಿನಿಂದ ಕ್ಲೀಯರ್…!
ಶುಭ ದಿನ, ಗಳಿಗೆ, ನಕ್ಷೆತ್ರ ನೋಡಿ ಕುಮಾರಸ್ವಾಮಿ ಸಹೋದರನ ಆಸ್ತಿ ದಾಖಲೆ ಬಿಡುಗಡೆ: ಡಿಸಿಎಂ ಡಿ.ಕೆ ಶಿವಕುಮಾರ್