ಬೆಂಗಳೂರು: ವಿವಿಧ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಈ ಕೆಳಕಂಡ ರೈಲುಗಳ ಸಂಚಾರ ಭಾಗಶಃ ರದ್ದುಗೊಳಿಸಿರುವುದಾಗಿ ನೈರುತ್ಯ ರೈಲ್ವೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
A) ಅಸನ್ಸೋಲ್ ವಿಭಾಗದಲ್ಲಿ ಪಾದಚಾರಿ ಮೇಲ್ಸೇತುವೆ (ಫೂಟ್ ಓವರ್ ಬ್ರಿಡ್ಜ್) ಕಾಮಗಾರಿ ನಡೆಯುತ್ತಿರುವುದರಿಂದ, ಫೆಬ್ರವರಿ 28, 2025 ರಂದು ವಾಸ್ಕೋ-ಡ-ಗಾಮಾ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17321 ವಾಸ್ಕೋ-ಡ-ಗಾಮಾ–ಜಸಿದಿಃ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಜಸಿದಿಃ ನಿಲ್ದಾಣದ ಬದಲಿಗೆ ಮಧುಪುರದಲ್ಲಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ. ಮಧುಪುರ ಮತ್ತು ಜಸಿದಿಃ ನಿಲ್ದಾಣಗಳ ನಡುವಿನ ಪ್ರಯಾಣವನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ಪೂರ್ವ ರೈಲ್ವೆಯು ತಿಳಿಸಿದೆ.
B) ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದ ಐಲ್ಯಾಂಡ್ ಪ್ಲಾಟ್ಫಾರ್ಮ್ 12 ಮತ್ತು 13ರ ವಿಸ್ತರಣೆಗಾಗಿ ಟ್ರಾಫಿಕ್ ಮತ್ತು ಪವರ್ ಬ್ಲಾಕ್ಗಳ ಕಾರಣದಿಂದಾಗಿ, ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ಮಧ್ಯ ರೈಲ್ವೆಯು ಸೂಚಿಸಿದೆ. ವಿವರಗಳು ಈ ಕೆಳಗಿನಂತಿವೆ:
1. ಮಾರ್ಚ್ 1, 2025 ರಂದು ಹೊಸಪೇಟೆಯಿಂದ ಹೊರಡುವ ರೈಲು ಸಂಖ್ಯೆ 11140 ಹೊಸಪೇಟೆ–ಸಿಎಸ್ಎಂಟಿ ಮುಂಬೈ ಡೈಲಿ ಎಕ್ಸ್ ಪ್ರೆಸ್ ರೈಲು ಮುಂಬೈ ಬದಲಿಗೆ ಪುಣೆಯವರೆಗೂ ಮಾತ್ರ ಸಂಚರಿಸಲಿದೆ. ಪುಣೆ ಮತ್ತು ಸಿಎಸ್ಎಂಟಿ ಮುಂಬೈ ನಡುವಿನ ಪ್ರಯಾಣ ರದ್ದಾಗಿದೆ.
2. ಮಾರ್ಚ್ 2, 2025 ರಂದು ರೈಲು ಸಂಖ್ಯೆ 11301 ಸಿಎಸ್ಎಂಟಿ ಮುಂಬೈ–ಕೆಎಸ್ಆರ್ ಬೆಂಗಳೂರು ಉದ್ಯಾನ ಎಕ್ಸ್ ಪ್ರೆಸ್ ರೈಲು ಸಿಎಸ್ಎಂಟಿ ಮುಂಬೈ ಬದಲಿಗೆ ಪುಣೆಯಿಂದ ಪ್ರಾರಂಭವಾಗಲಿದೆ. ಸಿಎಸ್ಎಂಟಿ ಮುಂಬೈ ಮತ್ತು ಪುಣೆ ನಡುವಿನ ಪ್ರಯಾಣ ರದ್ದಾಗಿದೆ.
BREAKING: ಕರ್ನಾಟಕದ ‘ಹೋಟೆಲ್’ಗಳಲ್ಲಿ ಇಡ್ಲಿ ತಯಾರಿಕೆಗೆ ‘ಪ್ಲಾಸ್ಟಿಕ್ ಬಳಕೆ’ ನಿಷೇಧ: ಸಚಿವ ದಿನೇಶ್ ಗುಂಡೂರಾವ್
BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ನೋಂದಣಿ ಕುರಿತು ಇಲ್ಲಿದೆ ಮಾಹಿತಿ