ಬೆಂಗಳೂರು: ಮೈಸೂರಿನ ಪ್ರಸಿದ್ಧ ದಸರಾ ಮಹೋತ್ಸವದ ಸಮಯದಲ್ಲಿ ಪ್ರಯಾಣಿಕರ ನಿರೀಕ್ಷಿತ ದಟ್ಟಣೆಯನ್ನು ತೆರವುಗೊಳಿಸಲು, ರೈಲು ಸಂಖ್ಯೆ 17301/17302 ಮೈಸೂರು-ಬೆಳಗಾವಿ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲುಗಳಿಗೆ ಈ ಕೆಳಗಿನ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ನೀಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ತಾತ್ಕಾಲಿಕ ನಿಲುಗಡೆಗಳ ವಿವರಗಳು ಈ ಕೆಳಗಿನಂತಿವೆ:
ಅಕ್ಟೋಬರ್ 9 ರಿಂದ ಅಕ್ಟೋಬರ್ 13, 2024 ರವರೆಗೆ ಮೈಸೂರಿನಿಂದ ಪ್ರಾರಂಭವಾಗುವ, ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಡೈಲಿ ಎಕ್ಸ್ ಪ್ರೆಸ್ ರೈಲು ಬೆಳಗುಳ (9:43/9:44 PM), ಸಾಗರಕಟ್ಟೆ (9:56/9:57 PM) , ಹೊಸ ಅಗ್ರಹಾರ (10:29/10:30 PM), ಅಕ್ಕಿಹೆಬ್ಬಾಳು (10:37/10:38 PM), ಬೀರಹಳ್ಳಿ ಹಾಲ್ಟ್ (10:43/10:44 PM) ಮತ್ತು ಮಾವಿನಕೆರೆ (11:09/11:10 PM) ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಯನ್ನು ಹೊಂದಿರುತ್ತದೆ.
ಅಕ್ಟೋಬರ್ 11, 2024 ರಂದು ಬೆಳಗಾವಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಮಾವಿನಕೆರೆ (3:22/3:23 AM), ಬೀರಹಳ್ಳಿ ಹಾಲ್ಟ್ (4:02/4:03 AM), ಅಕ್ಕಿಹೆಬ್ಬಾಳು (4:09/4:10 AM), ಹೊಸ ಅಗ್ರಹಾರ (4:18/4:19 AM), ಸಾಗರಕಟ್ಟೆ (4:45/4:46 AM) ಮತ್ತು ಬೆಳಗುಳ (4:59/5:00 AM) ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಯನ್ನು ಹೊಂದಿರುತ್ತದೆ.
ದಸರಾ ಉತ್ಸವದಲ್ಲಿ ಭಾಗವಹಿಸುವ ಪ್ರಯಾಣಿಕರಿಗೆ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಈ ಹೆಚ್ಚುವರಿ ನಿಲುಗಡೆಗಳನ್ನು ಒದಗಿಸಲಾಗಿದೆ ಎಂಬುದಾಗಿ ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಅನಧಿಕೃತವಾಗಿ ‘ಕೊಳವೆ ಬಾವಿ’ ಕೊರೆಯುವವರೇ ಹುಷಾರ್.!: BBMPಯಿಂದ ‘FIR’ ದಾಖಲು