ರಾಯಚೂರು:9ನೇ ಮತ್ತು 7ನೇ ತರಗತಿ ವಿದ್ಯಾರ್ಥಿಗಳ ನಡುವೆ ಸೋಮವಾರ ಜ.01 ರಂದು ಗಲಾಟೆ ನಡೆದಿದ್ದು ಓದುತ್ತಿರುವ ಖಾಸಗಿ ಶಾಲೆಯ ಮುಖ್ಯ ಶಿಕ್ಷಕರಿಗೆ ರಾಯಚೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ನೋಟಿಸ್ ನೀಡಿದ್ದಾರೆ.
ಗಲಾಟೆಗೆ ಕಾರಣ ಏನು ?ಮಾರಕಾಸ್ತ್ರ ಬಳಸಿದ್ದಾರಾ ? ಈ ಬಗ್ಗೆ 24 ಗಂಟೆಗಳ ಒಳಗಡೆ ಲಿಖಿತ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.ಮಧ್ಯೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ತಂಡ ಪ್ರಕರಣದ ತನಿಖೆ ನಡೆಸಲು ಮುಂದಾಗಿದೆ. ವಿದ್ಯಾರ್ಥಿಗಳು ಓದುತ್ತಿರುವ ಖಾಸಗಿ ಶಾಲೆಗೆ ಭೇಟಿ ನೀಡಿ, ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಯಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸದ್ಯ ಇಬ್ಬರು ವಿದ್ಯಾರ್ಥಿಗಳು ಬಾಲ ಮಂದಿರದಲ್ಲಿದ್ದಾರೆ.