ನವದೆಹಲಿ : ಕಾಂಗ್ರೆಸ್’ನ 2024ರ ಲೋಕಸಭಾ ಚುನಾವಣಾ ಪ್ರಣಾಳಿಕೆ ‘ನ್ಯಾಯ್ ಪತ್ರ’ದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ಮುಸ್ಲಿಂ ಲೀಗ್ ಮುದ್ರೆ’ ವ್ಯಂಗ್ಯದ ನಂತ್ರ, ರಾಹುಲ್ ಗಾಂಧಿ ಬುಧವಾರ ಯಾವುದೇ ವೇದಿಕೆಯಲ್ಲಿ ಸುಳ್ಳು ಹೇಳಿಕೆಗಳನ್ನ ನೀಡಿದರೂ ಇತಿಹಾಸ ಬದಲಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
2024 ರ ಲೋಕಸಭಾ ಚುನಾವಣೆ ಎರಡು ಸಿದ್ಧಾಂತಗಳ ನಡುವಿನ ಯುದ್ಧ ಎಂದು ಹೇಳಿದ ರಾಹುಲ್ ಗಾಂಧಿ, ಕಾಂಗ್ರೆಸ್ ಯಾವಾಗಲೂ ದೇಶವನ್ನ ಒಂದುಗೂಡಿಸಿದೆ, ಆದರೆ “ಇನ್ನೊಂದು ಬದಿ” ಯಾವಾಗಲೂ ಭಾರತದ ಜನರನ್ನು ವಿಭಜಿಸಿದೆ ಎಂದು ಹೇಳಿದ್ದಾರೆ.
ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ರಾಹುಲ್ ಗಾಂಧಿ, “ಈ ಚುನಾವಣೆ ಎರಡು ಸಿದ್ಧಾಂತಗಳ ನಡುವಿನ ಯುದ್ಧವಾಗಿದೆ! ಒಂದು ಕಡೆ ಯಾವಾಗಲೂ ಭಾರತವನ್ನ ಒಂದುಗೂಡಿಸುವ ಕಾಂಗ್ರೆಸ್ ಇದ್ದರೆ, ಮತ್ತೊಂದೆಡೆ ಯಾವಾಗಲೂ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿರುವವರು” ಎಂದು ಅವರು ಹೇಳಿದರು.
ದೇಶದ ವಿಭಜನೆಯನ್ನ ಬಯಸಿದ ಮತ್ತು ಅವುಗಳನ್ನ ಬಲಪಡಿಸಿದ ಶಕ್ತಿಗಳೊಂದಿಗೆ ಯಾರು ಕೈಜೋಡಿಸಿದರು ಮತ್ತು ದೇಶದ ಏಕತೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ಗಾಂಧಿ ಹೇಳಿದರು.
ಷೇರುಪೇಟೆಯಲ್ಲಿ ಜಾಕ್ ಪಟ್ ; ವಿಶ್ವದ 3ನೇ ಅತಿದೊಡ್ಡ ವಿಮಾನಯಾನ ಸಂಸ್ಥೆ ಪಟ್ಟಕ್ಕೇರಿದ ‘ಇಂಡಿಗೊ’
ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಮೊದಲೇ ಗೊತ್ತಿದ್ದರೆ ಅವರಿಗೆ ಟಿಕೆಟ್ ನೀಡುತ್ತಿದ್ದೆವು : ಮಾಜಿ ಸಚಿವ ವಿನಯ್ ಕುಲಕರ್ಣಿ
BREAKING : ಲೋಕಸಭಾ ಚುನಾವಣೆ 2024 : ಬಿಜೆಪಿ ಅಭ್ಯರ್ಥಿಗಳ 10ನೇ ಪಟ್ಟಿ ಬಿಡುಗಡೆ, ಇಲ್ಲಿದೆ ಲಿಸ್ಟ್