ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದೂ ಒತ್ತಾಯಿಸುತ್ತಾರೆ. ಮಾನ್ಯ ಆರ್ ಅಶೋಕ್ ಅವರೇ ಸ್ವತಃ ಅಕ್ರಮ ಭೂ ವಂಚನೆ ಕೇಸಿಗೆ ಫಿಟ್ಟಾಗಿ ಹೈಕೋರ್ಟ್ ಮೆಟ್ಚಿಲೇರಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡ ಮಾನ್ಯ ಸತ್ಯವಂತ ನೀತಿವಂತ ಅಶೋಕ್ ಅವರೇ… ನೀವು ಮೊದಲು ರಾಜೀನಾಮೆ ಕೊಡಿ ಎಂಬುದಾಗಿ ಸಚಿವ ಕೃಷ್ಣಬೈರೇಗೌಡ ಆಗ್ರಹಿಸಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಬಿಜೆಪಿಯ ಆಷಾಢಭೂತಿತನಕ್ಕೆ ಮತ್ತೊಂದು ಉದಾಹರಣೆ ಸಂಪೂರ್ಣ ಸರ್ಕಾರೀ ಒಡೆತನದಲ್ಲಿದ್ದ ಲೊಟ್ಟೆಗೊಲ್ಲಹಳ್ಳಿ (ಡಾಲರ್ಸ್ ಕಾಲೋನಿ ಪಕ್ಕ) ಜಮೀನನ್ನು ಅಕ್ರಮವಾಗಿ ಬಿಡಿಗಾಸಿಗೆ ಖರೀದಿಸಿ, ಅಕ್ರಮವಾಗಿ ಸಂಬಂಧಪಡದ ವ್ಯಕ್ತಿಯಿಂದ ಅರ್ಜಿ ಕೊಡಿಸಿ, ಯಡಿಯೂರಪ್ಪನವರಿಂದ ಡೀನೋಟಿಫಿಕೇಷನ್ ಮೂಲ ಮಾಲೀಕರಿಗೆ ಮಾಡಿಸಿ, ಅಕ್ರಮವಾಗಿ ಖಾತೆ ಮಾಡಿಸಿಕೊಂಡ ಆರ್.ಅಶೋಕ್, ಸಿಕ್ಕಿ ಹಾಕಿಕೊಂಡು ಎಫ್‌ಐಆರ್ ಆದಾಗ ಯಾವ ರಾಜೀನಾಮೆಯನ್ನೂ ನೀಡಲಿಲ್ಲ ಎಂದಿದ್ದಾರೆ.
ಹೈಕೋರ್ಟ್ ಮೆಟ್ಟಿಲೇರಿದಾಗ ಇದ್ದಕ್ಕಿದ್ದಂತೆ ತನ್ನದಲ್ಲದ ಸರ್ಕಾರಿ ಜಮೀನನ್ನೇ ಬಿಡಿಎಗೆ ದಾನಪತ್ರ ಮಾಡಿ ಕೊಟ್ಟರು. ಈಗ ಸ್ವಂತ ಜಮೀನಿಗೆ ಕಾನೂನು ಪ್ರಕಾರ ಸೈಟು ಪರಿಹಾರ ಪಡೆದುಕೊಂಡಿದ್ದ ಪಾರ್ವತಮ್ಮನವರು, ಕ್ಷುಲ್ಲಕ ರಾಜಕೀಯಕ್ಕೆ ಬೇಸತ್ತು ಮುಡಾಗೆ ವಾಪಸ್ ಕೊಟ್ಟಾಗ ಇದೇ ಆರ್.ಅಶೋಕ್ ಕದ್ದ ಮಾಲಿನ ಉದಾಹರಣೆ ಕೊಡುತ್ತಾರೆ ಎಂದು ಹೇಳಿದ್ದಾರೆ.
ಮುಂದುವರೆದು ಸಿಎಂ ಸಿದ್ದರಾಮಯ್ಯನವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದೂ ಒತ್ತಾಯಿಸುತ್ತಾರೆ. ಮಾನ್ಯ ಆರ್ ಅಶೋಕ್ ಅವರೇ ಸ್ವತಃ ಅಕ್ರಮ ಭೂ ವಂಚನೆ ಕೇಸಿಗೆ ಫಿಟ್ಟಾಗಿ ಹೈಕೋರ್ಟ್ ಮೆಟ್ಚಿಲೇರಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡ ಮಾನ್ಯ ಸತ್ಯವಂತ ನೀತಿವಂತ ಅಶೋಕ್ ಅವರೇ… ಮೊದಲು ನೀವು ತಮ್ಮ ವಿಪಕ್ಷ ನಾಯಕ ಸ್ಥಾನಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೀಗೆ ಮಾಡುವುದರಿಂದಲಾದರೂ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ಅಲ್ಪ ಮಟ್ಟಿಗಿನ ನೈತಿಕತೆ ಉಳಿಸಿಕೊಳ್ಳಿ ಎಂದು ಪತ್ರಿಕಾಗೋಷ್ಠಿಯಲ್ಲಿ ಆರ್ ಅಶೋಕ್ ವಂಚನೆ ಪ್ರಕರಣವನ್ನು ಎಳೆಎಳೆಯಾಗಿ ಬಿಡಿಸಿಟ್ಟು ವಿಪಕ್ಷ ನಾಯಕರನ್ನು ಸಚಿವ ಕೃಷ್ಣ ಭೈರೇಗೌಡ ಜಾಡಿಸಿದ್ದಾರೆ.
‘ಬೆಸ್ಕಾಂ ಗ್ರಾಹಕ’ರ ಗಮನಕ್ಕೆ: ಅ.5, 6ರಂದು ‘ಆನ್ ಲೈನ್ ಸೇವೆ’ ಅಲಭ್ಯ | BESCOM Service
ಗಮನಿಸಿ : ಆಧಾರ್ ಕಾರ್ಡ್‌ನಲ್ಲಿ `ವಿಳಾಸ’ವನ್ನು ಎಷ್ಟು ಬಾರಿ ಬದಲಾಯಿಸಬಹುದು! ಇಲ್ಲಿದೆ ಮಾಹಿತಿ
‘ಬಿಯರ್’ ಪ್ರಿಯರಿಗೆ ಗುಡ್ ನ್ಯೂಸ್..! ‘ಅಧ್ಯಯನ’ದಿಂದ ಸೂಪರ್ ಸಂಗತಿ ಬಹಿರಂಗ