ಉಡುಪಿ: ಇಂದು ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ್ದಾರೆ. ಅದರಲ್ಲೂ ಆರ್ ಅಶೋಕ್ ವಿಪಕ್ಷ ನಾಯಕರಾಗಲು ಅಯೋಗ್ಯ, ನಾಲಾಯಕ್. ಅವರನ್ನು ಕಿತ್ತಾಕಿ ಎಂಬುದಾಗಿಯೂ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಂಗಳೂರಲ್ಲಿ ನಡೆದ ಪಬ್ ಮೇಲಿನ ದಾಳಿಯನ್ನು ನಡೆಸಿದ್ದು ಬಜರಂಗದಳದವರು ಅಲ್ಲ. ಶ್ರೀರಾಮಸೇನೆಯವರು ಎಂದರು. ಪಬ್ ಮೇಲೆ ದಾಳಿ ಮಾಡಿದಂತ ಶ್ರೀರಾಮಸೇನೆಯ ಕಾರ್ಯಕರ್ತರ ಮೇಲೆ ಯಾವುದೇ ಗೂಂಡಾ ಕೇಸ್ ಹಾಕಿರಲಿಲ್ಲ. ಆದರೇ ಮೊದಲ ಬಾರಿಗೆ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿದ್ದೇ ಆರ್.ಅಶೋಕ್. ಕಾಂಗ್ರೆಸ್ ಪಕ್ಷದವರು ಈವರೆಗೆ ಬಜರಂಗದಳದವರ ಮೇಲೆ ಗೂಂಡಾ ಆಕ್ಟ್ ಹಾಕಿಲ್ಲ ಎಂದರು.
ಆರ್.ಅಶೋಕ್ ಗೃಹ ಸಚಿವರಾಗಿದ್ದಂತ ಸಂದರ್ಭದಲ್ಲಿ ಪಿಎಪ್ಐ ಗಲಾಟೆ ನಡೆದಿತ್ತು. ಆ ಸಂದರ್ಭದಲ್ಲಿ ಅವರು ಕೇಂದ್ರಕ್ಕೆ ಒಂದೇ ಒಂದು ಪತ್ರವನ್ನು ಬರೆಯಲಿಲ್ಲ. ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇ ಆರ್ ಅಶೋಕ್ ಅವರು ಹಿಂದೂ ಕಾರ್ಯಕರ್ತರಿಗೆ ನೀಡಿದ ಕೊಡುಗೆಯಾಗಿದೆ ಎಂಬುದಾಗಿ ಕಿಡಿಕಾರಿದರು.
ಆರ್ ಅಶೋಕ್ ವಿಪಕ್ಷ ನಾಯಕರಾಗಿರಲು ಅಯೋಗ್ಯ, ನಾಲಾಯಕ್. ಅವರನ್ನು ಆ ಸ್ಥಾನದಿಂದ ಕೆಳಗೆ ಇಳಿಸುವಂತೆ ಬಿಜೆಪಿ ನಾಯಕರಲ್ಲಿ ಇದೇ ಸಂದರ್ಭದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
BREAKING: ‘ಅಯ್ಯೋ ತಗಡೇ’ ಎಂದ ‘ನಟ ದರ್ಶನ್’ ವಿರುದ್ಧ ‘ಮತ್ತೆರಡು ದೂರು’ ದಾಖಲು
ಬೆಂಗಳೂರು : ಕಾರು ವಿಚಾರವಾಗಿ ಸಹೋದರರ ನಡುವೆ ಗಲಾಟೆ : ಪೆಟ್ರೋಲ್ ಹಾಕಿ ತಮ್ಮನ ಕೊಲೆಗೈದ ಅಣ್ಣ