ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಅರ್ಜೆಂಟೀನಾದ ಸೂಪರ್ ಸ್ಟಾರ್ ಪುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ( Argentina superstar Lionel Messi ) ಅವರು, 2022 ರ ಕತಾರ್ ವಿಶ್ವಕಪ್ ( 2022 Qatar World Cup ) ತಮ್ಮ ಕೊನೆಯ ವಿಶ್ವಕಪ್ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಪುಟ್ಬಾಲ್ ಆಟಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ.

ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, “ಖಂಡಿತವಾಗಿಯೂ ಇದು ನನ್ನ ಕೊನೆಯ ವಿಶ್ವಕಪ್. ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ”ಎಂದು ಮೆಸ್ಸಿ ಹೇಳಿಕೊಂಡಿದ್ದಾರೆ.

https://twitter.com/FabrizioRomano/status/1578037155318099971

ನಾನು ವಿಶ್ವಕಪ್ ವರೆಗಿನ ದಿನಗಳನ್ನು ಎಣಿಸುತ್ತಿದ್ದೇನೆ. ಸತ್ಯವೆಂದರೇ ಸ್ವಲ್ಪ ಆತಂಕವಿದೆ. ಆದರೇ ಅಲ್ಲಿ ಏನೇ ಆಗಲಿ ಇದು ನನ್ನ ಕೊನೆಯ ಪಂದ್ಯವಾಗಿದೆ. ಆ ಪಂದ್ಯಾವಳಿಗಾಗಿ ನಾನು ಕಾಯುತ್ತಿದ್ದೇನೆ. ಉತ್ತಮ ಆಟವನ್ನು ಆಡೋದಕ್ಕೆ ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಅಂದಹಾಗೇ, ಕಳೆದ ವರ್ಷ ನಡೆದ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು ಮಣಿಸಿದ ಮೆಸ್ಸಿ ಕೊಪಾ ಅಮೆರಿಕವನ್ನು ಗೆದ್ದಿದ್ದರು. ಮೆಸ್ಸಿ 2014 ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ್ದರು. ಆದರೆ ಜರ್ಮನಿ ವಿರುದ್ಧ ಸೋತರು.

Share.
Exit mobile version