ನವದೆಹಲಿ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮಿಸಿದ್ದು, ಅವರ ವಿಮಾನ ಪಾಲಂ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಕಪ್ಪು ಸೂಟ್ ಮತ್ತು ಬೂಟುಗಳನ್ನ ಧರಿಸಿದ್ದ ಪುಟಿನ್, ವಿಮಾನದಿಂದ ಇಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಅಚ್ಚರಿಯಾದರು.
ರಷ್ಯಾದ ಅಧ್ಯಕ್ಷರು ವಿಮಾನದಿಂದ ಇಳಿದ ತಕ್ಷಣ, ಪ್ರಧಾನಿ ಮೋದಿ ಅವರಿಗೆ ಹೃತ್ಪೂರ್ವಕವಾಗಿ ಕೈಕುಲುಕಿ ನಂತರ ಅವರನ್ನ ಅಪ್ಪಿಕೊಂಡರು. ಶಿಷ್ಟಾಚಾರವನ್ನು ಮುರಿದು ಪ್ರಧಾನಿ ಮೋದಿ ಅವರನ್ನ ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದರು. ಪ್ರಧಾನಿ ಮೋದಿ ಅವರ ಈ ನಡೆ ರಷ್ಯಾವನ್ನು ಅಚ್ಚರಿಗೊಳಿಸಿತು.
ರಷ್ಯಾದ ಅಧ್ಯಕ್ಷೀಯ ಅರಮನೆಯಾದ ಕ್ರೆಮ್ಲಿನ್ ಹೇಳಿಕೆ ಬಿಡುಗಡೆ ಮಾಡಿದ್ದು, ಅಧ್ಯಕ್ಷ ಪುಟಿನ್ ಅವರನ್ನು ಸ್ವಾಗತಿಸಲು ಪ್ರಧಾನಿ ಮೋದಿ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿರುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ ಎಂದು ಹೇಳಿದೆ.
ಇದಾದ ನಂತರ, ಪ್ರಧಾನಿ ಮೋದಿ ಮತ್ತು ಪುಟಿನ್ ಒಂದೇ ವಾಹನದಲ್ಲಿ ಪ್ರಧಾನಿ ನಿವಾಸಕ್ಕೆ ತೆರಳಿದರು. ಇಬ್ಬರೂ ನಾಯಕರು ಒಂದೇ ಟೊಯೋಟಾ ಎಸ್‌ಯುವಿಯಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿರುವುದು ಕಂಡುಬಂದಿದೆ.
‘ಪುಟಿನ್’ ತಂಗಲಿರುವ ದೆಹಲಿ ಹೋಟೆಲ್ ಹೇಗಿದೆ.? ಒಂದು ರಾತ್ರಿ ಬಾಡಿಗೆಗೆ ನೀವೊಂದು ಕಾರು ಖರೀದಿಸ್ಬೋದು!
ರಷ್ಯಾ ಅಧ್ಯಕ್ಷ ‘ಪುಟಿನ್-ಮೋದಿ’ ಜೊತೆ ಜೊತೆಗೆ ಸಾಗಿದ ‘ಕಾರು’ ಯಾವುದು.? ಅದರ ವೈಶಿಷ್ಟ್ಯವೇನು ಗೊತ್ತಾ?
SHOCKING : 120,000 ಮನೆಯ ‘ಭದ್ರತಾ ಕ್ಯಾಮೆರಾ’ಗಳು ಹ್ಯಾಕ್ ; ‘ಅಡಲ್ಟ್ ಸೈಟ್’ನಲ್ಲಿ ಖಾಸಗಿ ವೀಡಿಯೋಗಳು ಮಾರಾಟ








