ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ. ಉತ್ತರ ಭಾರತಕ್ಕೆ ಬೆಣ್ಣೆ, ದಕ್ಷಿಣ ಭಾರತಕ್ಕೆ ಸುಣ್ಣ ನೀಡುವಂತ ನಿಲುವು ತಳೆಯಲಾಗಿದೆ. ಇಂತಹ ಬಿಜೆಪಿ ಸರ್ಕಾರದ ಮಹಾಮೋಸಕ್ಕೆ ಅಂತ್ಯ ಹಾಡಿ ಎಂಬುದಾಗಿ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.
ಇಂದು ಎಕ್ಸ್ ಮಾಡಿರುವಂತ ಅವರು, ದೇಶದ ಆದಾಯಕ್ಕೆ ಅತಿಹೆಚ್ಚು ಕೊಡುಗೆ ನೀಡುವ ಕರ್ನಾಟಕವು ಕೇಂದ್ರಕ್ಕೆ ಸಲ್ಲಿಸುವ 100 ರೂಪಾಯಿ ತೆರಿಗೆಯಲ್ಲಿ ನಮಗೆ ಮರಳಿ ಬರುವುದು ಕೇವಲ 13 ರೂಪಾಯಿ ಮಾತ್ರ! ಕನ್ನಡಿಗರ ಮೇಲಿನ ಈ ಅನ್ಯಾಯವನ್ನು ಎಲ್ಲಿಯವರೆಗೆ ಸಹಿಸಬೇಕು? ಕನ್ನಡಿಗರ ಮೇಲೆ ಈ ಮಲತಾಯಿ ಧೋರಣೆ ಏತಕ್ಕಾಗಿ? ಎಂದು ಪ್ರಶ್ನಿಸಿದ್ದಾರೆ.
ಉತ್ತರಕ್ಕೆ ಬೆಣ್ಣೆ ದಕ್ಷಿಣಕ್ಕೆ ಸುಣ್ಣ ನೀಡುವ ಬಿಜೆಪಿ ಸರ್ಕಾರದ ಈ ಮಹಾಮೋಸಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ. ಬಿಜೆಪಿ ಸೋಲಿಸೋಣ. ಕನ್ನಡಿಗರ ಮೇಲಿನ ಅನ್ಯಾಯಕ್ಕೆ ಅಂತ್ಯ ಹಾಡೋಣ. #BJPChombuSarkara #loksabha2024 #VoteForCongress ಎಂಬುದಾಗಿ ಹ್ಯಾಶ್ ಟ್ಯಾಗ್ ಮೂಲಕ ಒತ್ತಾಯಿಸಿದ್ದಾರೆ.
ದೇಶದ ಆದಾಯಕ್ಕೆ ಅತಿಹೆಚ್ಚು ಕೊಡುಗೆ ನೀಡುವ ಕರ್ನಾಟಕವು ಕೇಂದ್ರಕ್ಕೆ ಸಲ್ಲಿಸುವ 100 ರೂಪಾಯಿ ತೆರಿಗೆಯಲ್ಲಿ ನಮಗೆ ಮರಳಿ ಬರುವುದು ಕೇವಲ 13 ರೂಪಾಯಿ ಮಾತ್ರ!
ಕನ್ನಡಿಗರ ಮೇಲಿನ ಈ ಅನ್ಯಾಯವನ್ನು ಎಲ್ಲಿಯವರೆಗೆ ಸಹಿಸಬೇಕು? ಕನ್ನಡಿಗರ ಮೇಲೆ ಈ ಮಲತಾಯಿ ಧೋರಣೆ ಏತಕ್ಕಾಗಿ?
ಉತ್ತರಕ್ಕೆ ಬೆಣ್ಣೆ ದಕ್ಷಿಣಕ್ಕೆ ಸುಣ್ಣ ನೀಡುವ ಬಿಜೆಪಿ ಸರ್ಕಾರದ ಈ… pic.twitter.com/EhQ7flLsHp
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 21, 2024
ಕರ್ನಾಟಕಕ್ಕೆ ಪ್ರಧಾನಿ ಮೋದಿ ಚೊಂಬು ಕೊಟ್ಟಿದ್ದಾರೆ: ಕೇಂದ್ರ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ!
‘ಮೋದಿ’ಯವರ ಖಾಲಿ ಚೊಂಬು ‘ದೇವೇಗೌಡ’ರಿಗೆ ‘ಅಕ್ಷಯ ಪಾತ್ರೆ’ಯಂತೆ ಕಾಣಿಸಿದ್ದು ಹೇಗೆ: CM ಸಿದ್ದರಾಮಯ್ಯ ಪ್ರಶ್ನೆ