ಚಂಡಿಗಢ: ಪಂಜಾಬ್ನ ಕಪುರ್ತಲಾ ಜಿಲ್ಲೆಯ ಫಗ್ವಾರಾ ಪಟ್ಟಣದ ದರ್ವೇಶ್ ಪಿಂಡ್ ಬಳಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕನ ಮನೆಯ ಮೇಲೆ ಗುರುವಾರ ಮುಂಜಾನೆ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹೇಳಿರುವ ಪೊಲೀಸರು, ಎಎಪಿಯ ಡ್ರಗ್ಸ್ ವಿರುದ್ಧದ ಅಭಿಯಾನದ (ಯುದ್ಧ್ ನಾಶಿಯಾನ್ ವಿರುಧ್) ಫಗ್ವಾರಾ ಸಂಯೋಜಕರಾಗಿರುವ ದಲ್ಜಿತ್ ಸಿಂಗ್ ರಾಜು ಅವರ ಮನೆಯ ಮೇಲೆ ಮುಂಜಾನೆ 1.30 ರ ಸುಮಾರಿಗೆ ಸುಮಾರು 23 ಸುತ್ತು ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ
STORY | Punjab: Shots fired at house of AAP leader, no one injured
Two motorcycle-borne men opened fire at the house of a ruling AAP leader near Darvesh Pind village on the Phagwara-Jandiala road early Thursday, police said. No one was injured in the incident.
Phagwara… pic.twitter.com/Yx49uqq5O8
— Press Trust of India (@PTI_News) November 27, 2025








