ಬೆಂಗಳೂರು: ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕು, ಅಂಜನಾಪುರ ಹೋಬಳಿ, ಭದ್ರಾಪುರ ಗ್ರಾಮದ ಸರ್ವೆ ನಂ. 19ರ ಸರ್ಕಾರಿ ಜಮೀನಿನ ಪೈಕಿ ಅದೇ ಗ್ರಾಮದ 1ನೇ ಆರೋಪಿತರಾದ ಚನ್ನಯ್ಯ ತಂದೆ ವೀರಯ್ಯ, ವಯಸ್ಸು 71 ವರ್ಷ ಇವರು 25 ಗುಂಟೆ ಜಮೀನನ್ನು ಹಾಗೂ 2ನೇ ಆರೋಪಿತರಾದ ಬಸಪ್ಪ ತಂದೆ ಲೇಟ್ ಆಯ್ಯಣ್ಣ, ವಯಸ್ಸು 90 ವರ್ಷ ಇವರು 36 ಗುಂಟೆ ಜಮೀನನ್ನು ಒತ್ತುವರಿ ಮಾಡಿರುತ್ತಾರೆ ಎಂದು ದೂರುದಾರರಾದ ತಹಶೀಲ್ದಾರ್ ಇವರಿಗೆ ಗ್ರಾಮಸ್ಥರು ನೀಡಿದ ದೂರು ಮನವಿ ಮೇರೆಗೆ ತಹಶೀಲ್ದಾರ್, ಶಿಕಾರಿಪುರ ಇವರು ನೀಡಿದ ದೂರಿನ ಅನ್ವಯ ಶಿಕಾರಿಪುರ ಟೌನ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪೂರ್ಣಗೊಳಿಸಿ ಆರೋಪಿತರ ವಿರುದ್ಧ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 192(ಎ)(1) ರಡಿಯಲ್ಲಿ ಶಿಕಾರಿಪುರ ತಾಲ್ಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ತದನಂತರ ಜೆ.ಎಂ.ಎಫ್.ಸಿ. ನ್ಯಾಯಾಲಯವು ಆರೋಪಿತರ ವಿರುದ್ಧ ಸಿ.ಸಿ. ಸಂಖ್ಯೆ: 251/2017 ರಂತೆ ದಾಖಲಿಸಿ ಭಾಗಶಃ ವಿಚಾರಣೆಯನ್ನು ಕೈಗೊಂಡು ನಂತರ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಿರುತ್ತಾರೆ.
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಸ್ವೀಕರಿಸಿ ಎಲ್.ಜಿ.ಸಿ.(ಟಿ) ಸಂಖ್ಯೆ: 99/2020 ಎಂದು ದಾಖಲಿಸಿಕೊಂಡು ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ ಆರೋಪಿತರು ಸರ್ಕಾರಿ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಆರೋಪಿತರಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು 5,000/- ರೂಪಾಯಿ ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 03 ತಿಂಗಳ ಸಾದಾ ಶಿಕ್ಷೆಯನ್ನು 02ನೇ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾದ ಪಾಟೀಲ ನಾಗಲಿಂಗನಗೌಡ ಮತ್ತು ಕಂದಾಯ ಸದಸ್ಯರಾದ ಕೆ.ಹೆಚ್. ಅಶ್ವತ್ಥ ನಾರಾಯಣಗೌಡ ರವರು ಇದ್ದ ಪೀಠವು ದಿನಾಂಕ:25.07.2024 ರಂದು ತೀರ್ಪು ನೀಡಿರುತ್ತದೆ. ಆರೋಪಿತರು ಒತ್ತುವರಿ ಮಾಡಿಕೊಂಡ ಸರ್ಕಾರಿ ಜಮೀನನ್ನು ಕೂಡಲೇ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಆದೇಶಿಸಿ, 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ತಹಶೀಲ್ದಾರ್, ಶಿಕಾರಿಪುರ ತಾಲ್ಲೂಕು ಇವರಿಗೆ ನಿರ್ದೇಶಿಸಿ ತೀರ್ಪನ್ನು ನೀಡಿರುತ್ತದೆ.
ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ತಾಲ್ಲೂಕು ಹೊಳಲೂರು ಹೋಬಳಿ, ಬಿಕ್ಕೋನಹಳ್ಳಿ ಗ್ರಾಮದ ಸರ್ವೆ ನಂ. 09ರ ಕುಂಚೇನಹಳ್ಳಿ ಮೀಸಲು ಅರಣ್ಯ ಪ್ರದೇಶದ ಒಟ್ಟು ವಿಸ್ತೀರ್ಣ 614 ಎಕರೆ 12 ಗುಂಟೆ ಅರಣ್ಯ ಪ್ರದೇಶದ ಪೈಕಿ 01 ಎಕರೆ 20 ಗುಂಟೆ ಜಮೀನನ್ನು, ಅದೇ ಗ್ರಾಮದ ಚಂದ್ರಪ್ಪ ಬಿನ್ ಸುರಹೊನ್ನೆ ತಿಮ್ಮಪ್ಪ, ಆಂದಾಜು 50 ವರ್ಷ ಎಂಬುವವರು ಒತ್ತುವರಿ ಮಾಡಿರುತ್ತಾರೆ ಎಂದು ದೂರುದಾರರಾದ ಉಪವಲಯ ಅರಣ್ಯಾಧಿಕಾರಿ, ಗೆಜೇನಹಳ್ಳಿ ಶಾಖೆ, ಶಂಕರ ವಲಯ, ಶಿವಮೊಗ್ಗ ಇವರು ಆರೋಪಿಸಿ ದೂರು ನೀಡಿದ್ದರು.
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಎಲ್.ಜಿ.ಸಿ.(ಜಿ) ಸಂಖ್ಯೆ: 1726/2019 ಎಂದು ದಾಖಲಿಸಿಕೊಂಡು ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ ಆರೋಪಿಯು ಅರಣ್ಯ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಆರೋಪಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು 10,000/- ರೂಪಾಯಿ ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 03 ತಿಂಗಳ ಸಾದಾ ಶಿಕ್ಷೆಯನ್ನು 02ನೇ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾದ ಪಾಟೀಲ ನಾಗಲಿಂಗನಗೌಡ ಮತ್ತು ಕಂದಾಯ ಸದಸ್ಯರಾದ ಕೆ.ಹೆಚ್. ಅಶ್ವತ್ಥ ನಾರಾಯಣಗೌಡ ರವರು ಇದ್ದ ಪೀಠವು ದಿ: 11.07.2024 ತೀರ್ಪು ನೀಡಿರುತ್ತದೆ. ಆರೋಪಿತರು ಒತ್ತುವರಿ ಮಾಡಿಕೊಂಡ ಅರಣ್ಯ ಜಮೀನನ್ನು ಕೂಡಲೇ ತೆರವುಗೊಳಿಸುವಂತೆ ಆದೇಶಿಸಿ, 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಉಪ ವಲಯ ಅರಣ್ಯಾಧಿಕಾರಿ, ಗೆಚ್ಚೇನಹಳ್ಳಿ ಶಾಖೆ, ಶಂಕರ ವಲಯ ಇವರಿಗೆ ನಿರ್ದೇಶಿಸಿ ತೀರ್ಪನ್ನು ನೀಡಿರುತ್ತದೆ
ಮೈಸೂರು ಜಿಲ್ಲೆ, ತಿ.ನರಸೀಪುರ ತಾಲ್ಲೂಕು, ಮೂಗೂರು ಹೋಬಳಿ, ಮೂಗೂರು ಗ್ರಾಮದ ಸರ್ವೆ ನಂ. 189ರ ಸರ್ಕಾರಿ ಕಟ್ಟೆ ಜಮೀನನ್ನು ವಿಸ್ತೀರ್ಣ 3-16 ಎಕರೆ ಪೈಕಿ 1-24 ಎಕರೆ ಸರ್ಕಾರಿ ಕಟ್ಟೆ ಜಮೀನಿನ ಬಾಜುದಾರರಾದ 1ನೇ ಆರೋಪಿತರಾದ ಮಹದೇವಪ್ಪ ಬಿನ್ ಲೇಟ್ ಸಣ್ಣಪ್ಪ ಹಾಗೂ 2ನೇ ಆರೋಪಿತರಾದ ಕುಳ್ಳಪ್ಪನ ಬಿನ್ ಲೇಟ್ ಸಣ್ಣಪ್ಪ ಕುರುಬೂರು ಗ್ರಾಮ ಇವರು ಸರ್ಕಾರಿ ಕಟ್ಟೆ ಜಮೀನನ್ನು ಈ ಹಿಂದೆ ಒತ್ತುವರಿ ಮಾಡಿದ್ದು, ಸದರಿ ಒತ್ತುವರಿಯನ್ನು ತೆರವುಗೊಳಿಸಿದ ನಂತರವೂ ಸಹ ಆಪಾದಿತರು ಪುನಃ ಸರ್ಕಾರಿ ಕಟ್ಟೆ ಜಮೀನನ್ನು ಒತ್ತುವರಿ ಮಾಡಿರುತ್ತಾರೆ ಎಂದು ತೀ.ನರಸೀಪುರ ತಾಲ್ಲೂಕು ತಹಶೀಲ್ದಾರ್ ಇವರಿಗೆ ಗ್ರಾಮಸ್ಥರು ನೀಡಿದ ದೂರು ಮನವಿ ಮೇರೆಗೆ ದೂರುದಾರರಾದ ರಾಜಸ್ವ ನೀರೀಕ್ಷಕರ ಇವರು ನೀಡಿದ ದೂರಿನ ಅನ್ವಯ ಟಿ. ನರಸೀಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪೂರ್ಣಗೊಳಿಸಿ ಆರೋಪಿತರ ವಿರುದ್ಧ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 192(ಎ) ಹಾಗೂ ಭಾರತೀಯ ದಂಡ ಸಂಹಿತೆ ಕಲಂ 447 ರಡಿಯಲ್ಲಿ ತಿ. ನರಸೀಪುರ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ದೋμÁರೋಪಣಾ ಪತ್ರವನ್ನು ಸಲ್ಲಿಸಿದ್ದರು. ತದನಂತರ ಜಿ.ಎಂ.ಎಫ್.ಸಿ. ನ್ಯಾಯಾಲಯವು ಆರೋಪಿತರ ವಿರುದ್ಧ ಸಿ.ಸಿ. ಸಂಖ್ಯೆ: 463/2014 ರಂತೆ ದಾಖಲಿಸಿ ಭಾಗಶಃ ವಿಚಾರಣೆಯನ್ನು ಕೈಗೊಂಡು ನಂತರ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಿರುತ್ತಾರೆ.
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ಸ್ವೀಕರಿಸಿ ಎಲ್.ಜಿ.ಸಿ(ಟಿ) ಸಂಖ್ಯೆ : 164/2021 ಎಂದು ದಾಖಲಿಸಿಕೊಂಡು ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ 2ನೇ ಆರೋಪಿಯು ಮೃತರಾಗಿದ್ದು ಅವರ ವಿರುದ್ಧದ ವಿಚಾರಣೆ abate ಆಗಿರುತ್ತದೆ. 1ನೇ ಆರೋಪಿತರು ಸರ್ಕಾರಿ ಕಟ್ಟೆ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಆರೋಪಿತರಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು 5,000/- ರೂಪಾಯಿ ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 03 ತಿಂಗಳ ಸಾದಾ ಶಿಕ್ಷೆಯನ್ನು ಭಾ.ದಂ.ಸಂಹಿತೆ ಕಲಂ 447ರ ಅಪರಾಧಕ್ಕೆ ಸಂಬಂಧಿಸಿದಂತೆ ರೂ. 500/- ದಂಡವನ್ನು ದಂಡ ಪಾವತಿಸಲು ತಪ್ಪಿದ್ದಲ್ಲಿ 07 ದಿನಗಳ ಸಾದಾ ಕಾರಾವಾಸ ಸಜೆಯನ್ನು 02ನೇ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾದ ಶ್ರೀ ಪಾಟೀಲ ನಾಗಲಿಂಗನಗೌಡ ಮತ್ತು ಕಂದಾಯ ಸದಸ್ಯರಾದ ಕೆ.ಹೆಚ್. ಅಶ್ವತ್ಥ ನಾರಾಯಣಗೌಡ ರವರು ಇದ್ದ ಪೀಠವು ದಿನಾಂಕ: 30.07.2024 ರಂದು ತೀರ್ಪು ನೀಡಿರುತ್ತದೆ. ಆರೋಪಿತರು ಒತ್ತುವರಿ ಮಾಡಿಕೊಂಡ ಸರ್ಕಾರಿ ಕಟ್ಟೆ ಜಮೀನನ್ನು ಕೂಡಲೇ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಆದೇಶಿಸಿ, 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ತಹಶೀಲ್ದಾರ್, ತಿ. ನರಸೀಪುರ ತಾಲ್ಲೂಕು ಇವರಿಗೆ ನಿರ್ದೇಶಿಸಿ ತೀರ್ಪನ್ನು ನೀಡಿರುತ್ತದೆ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಸರ್ಕಾರಿ ಅಭಿಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.