ಮಂಡ್ಯ.:- 2025-26ನೇ ಸಾಲಿನ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಡಿಸೆಂಬರ್ 21 ರಿಂದ 24 ರವರೆಗೆ (ಗ್ರಾಮೀಣ ಪ್ರದೇಶದಲ್ಲಿ 3 ದಿನಗಳು & ನಗರ ಪ್ರದೇಶದಲ್ಲಿ 4 ದಿನಗಳು) ಹಮ್ಮಿಕೊಳ್ಳಲಾಗಿದೆ.
2025ನೇ ಸಾಲಿನ ಪಲ್ಸ್ ಪೋಲಿಯೋ ಕಾರ್ಯಕ್ರಮದ ಸೂಕ್ಷ್ಮ ಕ್ರಿಯಾ ಯೋಜನೆಯ ಅನುಸಾರ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 0-5 ವರ್ಷದೊಳಪಟ್ಟ ಒಟ್ಟು 1,16,724 ಮಕ್ಕಳಿಗೆ ಲಸಿಕೆ ನೀಡಬೇಕಾಗಿದ್ದು, ಶೇ. 100 ರಷ್ಟು ಸಾಧನೆ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಒಟ್ಟು 723 ಪೋಲಿಯೋ ಬೂತ್‌ಗಳು, 1446 ತಂಡಗಳು, 2892 ಲಸಿಕಾ ಸಿಬ್ಬಂದಿಗಳು, 120 ವಾಹನಗಳನ್ನು ಹಾಗೂ 146 ಮೇಲ್ವಿಚಾರಕರುಗಳನ್ನು ನಿಯೋಜಿಸಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಸದರಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಉದ್ಘಾಟನೆಯನ್ನು ಡಿಸೆಂಬರ್ 21 ರ ಬೆಳಿಗ್ಗೆ 8.00 ಕ್ಕೆ “ಮಂಡ್ಯ ನಗರದ ಕಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ” ಜಿಲ್ಲಾ ಆಡಳಿತ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








