ಬೆಂಗಳೂರು: ರಾಜ್ಯಾಧ್ಯಂತ ಇಂದು ಪಲ್ಸ್ ಪೋಲಿಯೋ ಅಭಿಯಾನ ನಡೆಯಿತು. 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಲಾಯಿತು. ಇಂದಿನ ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿಯಾಗಿದ್ದು ಬರೋಬ್ಬರಿ 60,41,483 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಮಾರ್ಚ್.3ರ ಇಂದು ನಡೆದಂತ ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿಯಾಗಿ ನಡೆದಿದೆ. 62,85,880 ಟಾರ್ಗೆಟ್ ಹೊಂದಲಾಗಿತ್ತು. ಇದರಲ್ಲಿ 60,41,483 ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಮೊದಲ ದಿನವೇ ಹಾಕಲಾಗಿದೆ ಎಂದಿದೆ.
ವಿಜಯಪುರ ಜಿಲ್ಲೆಯಲ್ಲಿ 1,43,654 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ 1,06,789, ಚಿಕ್ಕಮಗಳೂರು 75,089, ಬೆಂಗಳೂರು ಗ್ರಾಮಾಂತರ 1,00,050, ಶಿವಮೊಗ್ಗ 1,17,957 ಮಕ್ಕಳು ಸೇರಿದಂತೆ 60,41,483 ಮಕ್ಕಳಿಗೆ ಇಂದು ಪಲ್ಸ್ ಪೋಲಿಯೋ ಹನಿಯನ್ನು ಹಾಕಲಾಗಿದೆ. ಶೇ.96ರಷ್ಟು ಟಾರ್ಗೆಟ್ ಮೊದಲ ದಿನವೇ ರೀಚ್ ಆಗಿದೆ ಎಂದು ತಿಳಿಸಿದೆ.
ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ 100% ನನಗೆ ಸಿಗುತ್ತೆ: ಸುಮಲತಾ ಅಂಬರೀಶ್ ವಿಶ್ವಾಸ!