ತುಮಕೂರು: ಜಿಲ್ಲೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಂತ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರೋದಾಗಿ ತಿಳಿದು ಬಂದಿದೆ. ಕಾಲೇಜಿನ ಹಾಸ್ಟೆಲ್ ನಲ್ಲೇ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತುಮಕೂರಿನ ಸಿದ್ಧಾರ್ಥ ಕಾಲೇಜಿನ ಹಾಸ್ಟೆಲ್ ನಲ್ಲಿಯೇ ಪಿಯು ವ್ಯಾಸಂಗ ಮಾಡುತ್ತಿದ್ದಂತ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೇಲ್ ನಿಂದ ಹಾಸ್ಟೆಲ್ ಮಹಡಿ ಮೇಲಿನ ಕೊಠಡಿಯಲ್ಲಿ ದೀಪಿಕಾ(19) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿರಾ ತಾಲ್ಲೂಕಿನ ಕುಂಟೆಗೌಡನಹಳ್ಳಿಯ ವಿದ್ಯಾರ್ಥಿನಿ ದೀಪಿಕಾ ಸಿದ್ಧಾರ್ಥಾ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಇಂದು ಹಾಸ್ಟೆಲ್ ನಲ್ಲಿ ವೇಲ್ ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ತುಮಕೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ದೇವಾಲಯಗಳ ಅರ್ಚಕರು, ನೌಕರರಿಗೆ ಗುಡ್ ನ್ಯೂಸ್: ವೇತನ ತಾರತಮ್ಯ ನಿವಾರಣೆಗೆ ಸಮಿತಿ ರಚನೆ
‘EPFO ಖಾತೆದಾರ’ರಿಗೆ ಮಹತ್ವದ ಮಾಹಿತಿ: ಈ ಬದಲಾವಣೆಗಳಿಗೆ ‘ಕಂಪನಿ ಅನುಮತಿ’ ಅಗತ್ಯವಿಲ್ಲ