Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕ-ಇರಾನ್ ಯುದ್ಧದ ಬಿಸಿ: ಭಾರತಕ್ಕೆ ತೈಲ, ಗ್ಯಾಸ್ ಹೊತ್ತ 10 ವಿದೇಶಿ ಹಡಗುಗಳು ಜಲಸ್ತಂಭನ!

31/03/2026 10:00 AM

ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಆಡಿಯೋ ಲೀಕ್? : 35 ಮಂದಿಗೆ ನ್ಯಾಯಾಲಯದಿಂದ ಸಮನ್ಸ್

31/03/2026 9:58 AM

ALERT : ಮಕ್ಕಳಿಗೆ `ಡೈಪರ್’ ಬಳಸುವುದು ಸುರಕ್ಷಿತವೇ? ಪೋಷಕರು ತಿಳಿಯಲೇಬೇಕಾದ ವಿಷಯಗಳಿವು.!

31/03/2026 9:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಆಡಿಯೋ ಲೀಕ್? : 35 ಮಂದಿಗೆ ನ್ಯಾಯಾಲಯದಿಂದ ಸಮನ್ಸ್
KARNATAKA

ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಆಡಿಯೋ ಲೀಕ್? : 35 ಮಂದಿಗೆ ನ್ಯಾಯಾಲಯದಿಂದ ಸಮನ್ಸ್

By kannadanewsnow5731/03/2026 9:58 AM

ತುಮಕೂರು: ಮಂಕಿಬಾತ್ಗಳಿಂದ ಫೇಮಸ್ ಆಗಿರುವ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ನನ್ನ ಆಡಿಯೋ/ವಿಡಿಯೋ ಶೇರಿಂಗ್ ಮಾಡದಂತೆ ನ್ಯಾಯಾಲಯದ ಮೊರೆ ಹೋಗಿದ್ದು, ಜಿಲ್ಲಾ ನ್ಯಾಯಾಲಯ 35 ಮಂದಿಗೆ ಸಮನ್ಸ್ ಜಾರಿಗೊಳಿಸಿದೆ.

ತುಮಕೂರು ಜಿಲ್ಲೆಯಲ್ಲಿ ಪಬ್ಲಿಕ್ ಟಿವಿ ವರದಿಗಾರನಾಗಿ ಕೆಲಸ ಮಾಡುತ್ತಿರುವ ಮಂಜುನಾಥ್ ತಾಳಮಕ್ಕಿ ಅಲಿಯಾಸ್ ಮಂಜುನಾಥ ಪುರಸಯ್ಯ ನಾಯ್ಕ್ ಫೆ.27ರಂದು ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಮಾ.2 ಮತ್ತು 3ರಂದು ವಿಚಾರಣೆ ನಡೆಸಿರುವ ಘನ ನ್ಯಾಯಾಲಯ ಸಮನ್ಸ್ ನೀಡಿದೆ.

ಪ್ರಕರಣದ ಹಿನ್ನೆಲೆ: ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ ತಾಳಮಕ್ಕಿ ಅವರ ಆಡಿಯೋ ಚಿಕ್ಕಬಳ್ಳಾಪುರ ಜಿಲ್ಲೆಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಕ್ಯಾತ್ಸಂದ್ರ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿದೆ.

ಮಂಜುನಾಥ್ ತಾಳಮಕ್ಕಿ ನೀಡಿರುವ ದೂರಿನಂತೆ ಝೀಕನ್ನಡ ನ್ಯೂಸ್ ನ ಜಿ.ಎನ್.ಮಂಜುನಾಥ್ ಹಾಗೂ ಸಹಚರರು ಗುಂಪುಗೂಡಿ ನನ್ನ ಧ್ವನಿ ಹೋಲಿಕೆ ಇರುವ ಎಐನ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದು. ಮಂಜುನಾಥ್ ಹಾಗೂ ಸಹಚರರಿಗೆ ನನ್ನ ಹಳೆಯ ಮತ್ತು ಹೊಸ ವಿಡಿಯೋ/ಆಡಿಯೋವನ್ನು ಶೇರ್ ಮಾಡದಂತೆ ಆದೇಶವನ್ನು ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ, ಪ್ರಜಾವಾಣಿ, ವಾರ್ತಾಭಾರತಿ, ಪ್ರಜಾಕಹಳೆ ಸೇರಿದಂತೆ ಸಂಪಾದಕರುಗಳಿಗೆ ಹಾಗೂ ವರದಿಗಾರರಿಗೆ ಸಮನ್ಸ್ ನೀಡಿರುವ ನ್ಯಾಯಾಲಯ ಏ.2ರಂದು ವಿಚಾರಣೆ ಹಾಜರಾಗುವಂತೆ ತಿಳಿಸಿದೆ.

ಆಡಿಯೋದಲ್ಲಿ ಏನಿದೆ..? ನ್ಯಾಯಾಲಯ ನೀಡಿರುವ ಸಮನ್ಸ್ ನಲ್ಲಿ ಲಗತ್ತಿಸಿರುವ ದಾಖಲೆಗಳಲ್ಲಿ ಚಿಕ್ಕಬಳ್ಳಾಪುರದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಡಿಯೋದಲ್ಲಿ ಮಂಜುನಾಥ್ ತಾಳಮಕ್ಕಿ ‘ರಾಸಲೀಲೆ ಡೀಲ್’ ಎಂದು ಕಾಣುವ ಥಂಬ್ ನೈಲ್ ಇದೆ.

ಮೂಲಗಳ ಪ್ರಕಾರ ರಾಜಕಾರಣಿಯೊಬ್ಬರ ರಾಸಲೀಲೆ ಸಂಬಂಧ ಮಾತುಕತೆ ನಡೆಸಿರುವ ಆಡಿಯೋ ಎನ್ನಲಾಗಿದ್ದು, ಇದರೊಂದಿಗೆ ಇನ್ನಷ್ಟು ಆಡಿಯೋಗಳು ಪ್ರತಿವಾದಿಗಳ ಬಳಿ ಇವೆ ಎನ್ನಲಾಗುತ್ತಿದೆ.

ಸದರಿ ಆಡಿಯೋಗಳು ಲೀಕ್ ಆದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಮಾನಸಿಕವಾಗಿಯೂ ತೊಂದರೆ ಆಗುತ್ತದೆ ಆದ್ದರಿಂದ ಆಡಿಯೋ ಶೇರ್ ಮಾಡದಂತೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಆಶ್ರಯಿಸಿದ್ದಾರೆ.

ಈ ಹಿಂದೆ ಝೀ ಕನ್ನಡ ವರದಿಗಾರ ಜಿ.ಎನ್.ಮಂಜುನಾಥ್ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜಾಮೀನು ಪಡೆದು ಹೊರಬಂದಿರುವ ಮಂಜುನಾಥ್ ತಾಳಮಕ್ಕಿ, ಮಾನಸಿಕ ಅಸ್ವಸ್ಥತೆ ಚಿಕಿತ್ಸೆ ಪಡೆಯುತ್ತಿರುವುದಾಗಿ ನ್ಯಾಯಾಲಯಕ್ಕೆ ವೈದ್ಯರ ಪ್ರಮಾಣ ಪತ್ರ ಸಲ್ಲಿಸಿದ್ದರು.
ಸದರಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಪಬ್ಲಿಕ್ ಟಿವಿ ವರದಿಗಾರ ತಾಳಮಕ್ಕಿ ಅವರ ಹೊಸ ಅಥವಾ ಹಳೆಯ ಯಾವುದೇ ಆಡಿಯೋ/ವಿಡಿಯೋವನ್ನು ‘ಶೇರಿಂಗ್‘ ಮಾಡದಂತೆ ನ್ಯಾಯಾಲಯದಲ್ಲಿ ದಾವೆ ಹೂಡಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಪ್ರತಿವಾದಿಗಳ್ಯಾರು..?
ಜಿ.ಎನ್.ಮಂಜುನಾಥ್(ಝೀ ಕನ್ನಡ), ಅಶ್ವತ್ಥನಾರಾಯಣ.ಎಲ್, ಪ್ರಜಾವಾಣಿ, ವಾರ್ತಾಭಾರತಿ, ಕನ್ನಡ ಪ್ರಭ, ಪ್ರಗತಿ ಟಿವಿ, ಸುವರ್ಣ ನ್ಯೂಸ್, ಬಿಟಿವಿ, ಸೇರಿದಂತೆ 17 ಸಂಪಾದಕರುಗಳು, ಯಶಸ್.ಕೆ.ಪಿ(ಪ್ರಜಾಟಿವಿ), ಯೋಗೀಶ್ ಟಿ(ಗ್ಯಾರೆಂಟಿ.ಟಿ.ವಿ), ಕುಮಾರಸ್ವಾಮಿ ಹೆಚ್.ಬಿ( ಪಬ್ಲಿಕ್ ಟಿವಿ ಕ್ಯಾಮೆರಾಮನ್), ರಘು.ಎ.ಎನ್( ಸಂಪಾದಕ, ಪ್ರಜಾಕಹಳೆ) ಶಂಕರಪ್ಪ ಹೆಚ್.ಎನ್( ವರದಿಗಾರ ಸಾಕ್ಷಿ, ಸಂಜೆಸಮಾಚಾರ್), ವಿಠ್ಠಲ ಕುಮಾರ ಹೆಚ್( ವರದಿಗಾರ ನ್ಯೂಸ್ 18), ಶಾಂತಿನಾಥ್ ಜೈನ್( ಈಟಿವಿ ಭಾರತ್), ಜಯಣ್ಣ ಹೆಚ್( ಬೆಳಗೆರೆ ನ್ಯೂಸ್), ಹರೀಶ್ ಕೆ( ಸಂಪಾದಕರು ಪ್ರಜಾಯೋಗ), ಮಾರುತಿ ಪ್ರಸಾದ್ ಕೆ.ಟಿ(ವರದಿಗಾರ, ಶ್ರೀಟಿವಿ). ಮಹಾಂತೇಶ್ ಕುಮಾರ್( ಸುವರ್ಣ ನ್ಯೂಸ್), ಮಹೇಶ್ ಎನ್.ಎ( ರಾಜ್ ನ್ಯೂಸ್), ಸಿ.ವಿಜಯ್(ಎಕ್ಸ್ ಟಿವಿ9 ಕ್ಯಾಮೆರಾಮನ್), ಮಧು.ಆರ್.ಎಲ್(ವರದಿಗಾರ ಫಸ್ಟ್ ನ್ಯೂಸ್), ಚಂದನ್ ಡಿ.ಎನ್( ವರದಿಗಾರ ಈ ದಿನ.ಕಾಂ.) ಮಧು.ಎಸ್.ಕೆ.(ವರದಿಗಾರ, ಕರ್ನಾಟಕಟಿವಿ)

ಮಂಜುನಾಥ್ ತಾಳಮಕ್ಕಿ ಅವರು ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಹೂಡಿರುವ ಪ್ರಕರಣ ಸಂಖ್ಯೆ 286/2026ರಲ್ಲಿ ನ್ಯಾಯಾಲಯ ನೀಡಿರುವ ಸಮನ್ಸ್ ದಾಖಲೆಗಳಲ್ಲಿ ಮೇಲ್ನೋಟಕ್ಕೆ ಕಾಣುವಂತೆ ಸಾಮಾಜಿಕ ಜಾಲತಾಣದಲ್ಲಿ ತಾಳಮಕ್ಕಿ ಅವರ ಆಡಿಯೋ ವೈರಲ್ ಆಗಿದ್ದು, ಎರಡು ಆಡಿಯೋ ತುಣುಕುಗಳಿಗೆ ಸಂಬಂಧಿಸಿದಂತೆ ಥಂಬ್ ನೈಲ್ ಇರುವ ದಾಖಲೆ ನೀಡಿದ್ದು, ಅದರ ಶೀರ್ಷಿಕೆಗಳು ಆಸಕ್ತಿದಾಯಕವಾಗಿದ್ದು, ಆಡಿಯೋದಲ್ಲಿ ಏನಿದೆ ಎನ್ನುವುದು ಗೊತ್ತಾಗಬೇಕಿದೆ.

Public TV reporter Manjunath Talamakki audio leak?: Court summons 35 people
Share. Facebook Twitter LinkedIn WhatsApp Email

Related Posts

ALERT : ಮಕ್ಕಳಿಗೆ `ಡೈಪರ್’ ಬಳಸುವುದು ಸುರಕ್ಷಿತವೇ? ಪೋಷಕರು ತಿಳಿಯಲೇಬೇಕಾದ ವಿಷಯಗಳಿವು.!

31/03/2026 9:49 AM2 Mins Read

ರಾಜ್ಯದಲ್ಲಿ `ಆಟೋ ಎಲ್‌ಪಿಜಿ’ ಕೊರತೆ ಇಲ್ಲ : ಸರ್ಕಾರದಿಂದ ಮಹತ್ವದ ಪ್ರಕಟಣೆ ! ​

31/03/2026 9:11 AM1 Min Read

ALERT : `ಇನ್ವರ್ಟರ್ ಬ್ಯಾಟರಿ’ಗೆ ಸಾಮಾನ್ಯ ನೀರು ಹಾಕುತ್ತಿದ್ದೀರಾ? ಎಚ್ಚರ! ಬ್ಯಾಟರಿ ಬಾಳಿಕೆ ಹೆಚ್ಚಿಸಲು ಇಲ್ಲಿದೆ ಉಪಯುಕ್ತ ಮಾಹಿತಿ

31/03/2026 9:07 AM2 Mins Read
Recent News

ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕ-ಇರಾನ್ ಯುದ್ಧದ ಬಿಸಿ: ಭಾರತಕ್ಕೆ ತೈಲ, ಗ್ಯಾಸ್ ಹೊತ್ತ 10 ವಿದೇಶಿ ಹಡಗುಗಳು ಜಲಸ್ತಂಭನ!

31/03/2026 10:00 AM

ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಆಡಿಯೋ ಲೀಕ್? : 35 ಮಂದಿಗೆ ನ್ಯಾಯಾಲಯದಿಂದ ಸಮನ್ಸ್

31/03/2026 9:58 AM

ALERT : ಮಕ್ಕಳಿಗೆ `ಡೈಪರ್’ ಬಳಸುವುದು ಸುರಕ್ಷಿತವೇ? ಪೋಷಕರು ತಿಳಿಯಲೇಬೇಕಾದ ವಿಷಯಗಳಿವು.!

31/03/2026 9:49 AM

ಇನ್ಫ್ಲುಯೆನ್ಸರ್‌ಗಳಿಗೆ ಐಟಿ ಇಲಾಖೆ ಶಾಕ್: ಇನ್ಮುಂದೆ ಕಂಟೆಂಟ್ ಪಬ್ಲಿಷರ್ ನಿಯಮ ಅನ್ವಯ; ತಪ್ಪು ಮಾಹಿತಿಗೆ ಬೀಳಲಿದೆ ‘ಟೇಕ್‌ಡೌನ್’ ನೋಟಿಸ್!

31/03/2026 9:37 AM
State News
KARNATAKA

ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಆಡಿಯೋ ಲೀಕ್? : 35 ಮಂದಿಗೆ ನ್ಯಾಯಾಲಯದಿಂದ ಸಮನ್ಸ್

By kannadanewsnow5731/03/2026 9:58 AM KARNATAKA 2 Mins Read

ತುಮಕೂರು: ಮಂಕಿಬಾತ್ಗಳಿಂದ ಫೇಮಸ್ ಆಗಿರುವ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ನನ್ನ ಆಡಿಯೋ/ವಿಡಿಯೋ ಶೇರಿಂಗ್ ಮಾಡದಂತೆ ನ್ಯಾಯಾಲಯದ ಮೊರೆ…

ALERT : ಮಕ್ಕಳಿಗೆ `ಡೈಪರ್’ ಬಳಸುವುದು ಸುರಕ್ಷಿತವೇ? ಪೋಷಕರು ತಿಳಿಯಲೇಬೇಕಾದ ವಿಷಯಗಳಿವು.!

31/03/2026 9:49 AM

ರಾಜ್ಯದಲ್ಲಿ `ಆಟೋ ಎಲ್‌ಪಿಜಿ’ ಕೊರತೆ ಇಲ್ಲ : ಸರ್ಕಾರದಿಂದ ಮಹತ್ವದ ಪ್ರಕಟಣೆ ! ​

31/03/2026 9:11 AM

ALERT : `ಇನ್ವರ್ಟರ್ ಬ್ಯಾಟರಿ’ಗೆ ಸಾಮಾನ್ಯ ನೀರು ಹಾಕುತ್ತಿದ್ದೀರಾ? ಎಚ್ಚರ! ಬ್ಯಾಟರಿ ಬಾಳಿಕೆ ಹೆಚ್ಚಿಸಲು ಇಲ್ಲಿದೆ ಉಪಯುಕ್ತ ಮಾಹಿತಿ

31/03/2026 9:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.