ಬೆಂಗಳೂರು : ರಾಜ್ಯದ ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಹಲವು ಸೌಲಭ್ಯಗಳು ಸಿಗುತ್ತಿದ್ದು, ಸಾರ್ವಜನಿಕರಿಗೆ ಸಿಗುವ ಆರೋಗ್ಯ ಸೇವೆಗಳ ಪ್ಯಾಕೇಜ್ಗಳ ವಿವರಗಳು ಕೆಳಗಿನಂತಿವೆ.
ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ಸಿಗುವ ಸೌಲಭ್ಯಗಳು ಹೀಗಿವೆ
ಗರ್ಭಿಣಿ, ಬಾಣಂತಿ ಮತ್ತು ನವಜಾತ ಶಿಶು ಆರೈಕೆ
ಮಕ್ಕಳ ಆರೋಗ್ಯ ಮತ್ತು ಚುಚ್ಚು ಮದ್ದು ಸೇವೆಗಳು
ಬಾಲ್ಯಾವಸ್ಥೆ ಮತ್ತು ಹದಿಹರೆಯದವರ ಆರೋಗ್ಯ ಆರೈಕೆ ಸೇವೆಗಳು
ಕುಟುಂಬ ಯೋಜನೆ, ಗರ್ಭನಿರೋಧಕ ಸೇವೆಗಳು ಮತ್ತು ಇತರೆ ಸಂತಾನೋತ್ಪತ್ತಿ ಆರೋಗ್ಯ ಆರೈಕೆ ಸೇವೆಗಳು
ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿರ್ವಹಣೆ
ತುರ್ತು ವೈದ್ಯಕೀಯ ಸೇವೆಗಳು.
ಮಾನಸಿಕ ಆರೋಗ್ಯ ಖಾಯಿಲೆಗಳ ತಪಾಸಣೆ ಮತ್ತು ನಿರ್ವಹಣೆ
ಸಾಮಾನ್ಯ ಸಾಂಕ್ರಾಮಿಕ ರೋಗಗಳ ನಿರ್ವಹಣೆ ಮತ್ತು ಸಣ್ಣಪುಟ್ಟ ಖಾಯಿಲೆಗಳು ಮತ್ತು ತೀವ್ರತೆರನಾದ ಸಾಮಾನ್ಯ ರೋಗಗಳಿಗೆ ಹೊರ ರೋಗಿ ಆರೈಕೆ
ಪ್ರತಿಬಂಧಕ ಕ್ರಮಗಳು, ಅಸಾಂಕ್ರಾಮಿಕ ರೋಗಗಳ ತಪಾಸಣೆ, ನಿಯಂತ್ರಣ ಮತ್ತು ನಿರ್ವಹಣೆ
ಸಾಮಾನ್ಯ ನೇತ್ರದೋಷಗಳು ಮತ್ತು ಇಎನ್ಟಿ ಸಮಸ್ಯೆಗಳಿಗೆ ಆರೈಕೆ
ಬಾಯಿ ಆರೋಗ್ಯ ಆರೈಕೆ