ನವದೆಹಲಿ: ಲೋಕಸಭಾ ಚುನಾವಣೆಗೆ ( Lok Sabha Election 2024) ದಿನಾಂಕ ಪ್ರಕಟವಾಗಿದೆ. ದೇಶಾದ್ಯಂತ 7 ಹಂತಗಳಲ್ಲಿ ಚುನಾವಣೆ ನಡೆದು, ಜೂನ್.4ರಂದು ಫಲಿತಾಂಶ ಪ್ರಕಟವಾಗಲಿದೆ. ಸೋ ನೀವು ಮತದಾನಕ್ಕೆ ರೆಡಿಯಾಗಿದ್ದರೇ ನಿಮ್ಮ ಹೆಸರು ವೋಟರ್ ಲೀಸ್ಟ್ ನಲ್ಲಿ ( Voter List ) ಇದ್ಯಾ ಅಂತ ಒಂದೇ ಒಂದು ನಿಮಿಷದಲ್ಲಿ ಈ ವೆಬ್ ಸೈಟ್ ಗೆ ಭೇಟಿ ನೀಡಿ, ಚೆಕ್ ಮಾಡಬಹುದಾಗಿದೆ.
ಚುನಾವಣಾ ಆಯೋಗದಿಂದ ( Election Commission ) ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಲೋಕಸಭಾ ಚುನಾವಣೆ ಘೋಷಣೆಯ ನಂತ್ರವೂ ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ಯಾ ಅಂತ ಸರ್ಚ್ ಮಾಡೋದಕ್ಕೆ https://electoralsearch.eci.gov.in/ ಗೆ ಭೇಟಿ ನೀಡಿ, ಹೆಸರು, ನಿಮ್ಮ ಜಿಲ್ಲೆ, ತಾಲೂಕು, ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪರಿಶೀಲಿಸಬಹುದಾಗಿದೆ.
ಈ ಮೇಲ್ಕಂಡ ವೆಬ್ ಸೈಟ್ ನಲ್ಲಿ ಒಂದೇ ಒಂದು ನಿಮಿಷದಲ್ಲಿ ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಅಂತ ಚೆಕ್ ಮಾಡಬಹುದಾಗಿದೆ. ಒಂದು ವೇಳೆ ನಿಮ್ಮ ಹೆಸರು ಬಿಟ್ಟು ಹೋಗಿದ್ದರೇ, ಸೇರಿಸಲು ನೀವು https://voterportal.eci.gov.in/ ಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಕ್ಕಾಗಿ ವಿಳಾಸ ಪುರಾವೇ, ಪೋಟೋ ಸೇರಿದಂತೆ ಕೆಲ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.