Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `GPF’ ನಿಯಮಗಳಿಗೆ ತಿದ್ದುಪಡಿ, ಇನ್ಮುಂದೆ ಆಧಾರ್, ಕೆಜಿಐಡಿ ಸಂಖ್ಯೆ ಕಡ್ಡಾಯ !

20/03/2026 5:00 AM

ಸಾರ್ವಜನಿಕರೇ ಗಮನಿಸಿ : ಗುಡುಗು-ಸಿಡಿಲಿನಿಂದ ಪಾರಾಗಲು ಈ ಮುಂಜಾಗೃತಾ ಕ್ರಮ ಪಾಲಿಸಿ | WATCH VIDEO

20/03/2026 4:45 AM

BIG NEWS : ರಾಜ್ಯದಲ್ಲಿ 50 ವರ್ಷ ದಾಟಿದ ಶಾಲಾ ಶಿಕ್ಷಕಿಯರಿಗೆ `ಜನಗಣತಿ’ ಕಾರ್ಯದಿಂದ ವಿನಾಯಿತಿ : ಸರ್ಕಾರದಿಂದ ಮಹತ್ವದ ಆದೇಶ

20/03/2026 4:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರೇ ಗಮನಿಸಿ : ಗುಡುಗು-ಸಿಡಿಲಿನಿಂದ ಪಾರಾಗಲು ಈ ಮುಂಜಾಗೃತಾ ಕ್ರಮ ಪಾಲಿಸಿ | WATCH VIDEO
KARNATAKA

ಸಾರ್ವಜನಿಕರೇ ಗಮನಿಸಿ : ಗುಡುಗು-ಸಿಡಿಲಿನಿಂದ ಪಾರಾಗಲು ಈ ಮುಂಜಾಗೃತಾ ಕ್ರಮ ಪಾಲಿಸಿ | WATCH VIDEO

By kannadanewsnow5720/03/2026 4:45 AM

ಬೆಂಗಳೂರು : ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಪ್ರಾಧಿಕಾರದಿಂದ ಗುಡುಗು ಮತ್ತು ಸಿಡಿಲು ಬಡಿತ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸಾರ್ವಜನಿಕರು ಅವುಗಳನ್ನು ಕಡ್ಡಾಯವಾಗಿ ಪಾಲಿಸಿ, ನೈಸರ್ಗಿಕ ಅವಘಡಗಳಿಂದ ಆಗುವ ಹಾನಿಯಿಂದಾಗಿ ತಪ್ಪಿಸಿಕೊಳ್ಳಬಹುದಾಗಿದೆ.ಹಾಗಾದ್ರೇ ಗುಡುಗು ಸಹಿತ ಮಳೆ ಬರುವಾಗ ಸಿಡಿಲಿನಿಂದ ರಕ್ಷಿಸಲು ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ.

1. ಹೊರಾಂಗಣದಲ್ಲಿದ್ದಾಗ (Outdoor) ಮಾಡಬೇಕಾದ್ದು:

  • ಸುರಕ್ಷಿತ ಆಶ್ರಯ ಪಡೆಯಿರಿ: ಗುಡುಗು ಕೇಳಿಸಿದ ತಕ್ಷಣ ಹತ್ತಿರದ ಸುಸಜ್ಜಿತ ಕಟ್ಟಡ ಅಥವಾ ಕಾರ್, ಬಸ್‌ನಂತಹ ವಾಹನಗಳ ಒಳಗೆ ಆಶ್ರಯ ಪಡೆಯಿರಿ.

  • ಮರದ ಕೆಳಗೆ ನಿಲ್ಲಬೇಡಿ: ಇದು ಅತ್ಯಂತ ಮುಖ್ಯ. ಸಿಡಿಲು ಯಾವಾಗಲೂ ಎತ್ತರದ ವಸ್ತುಗಳನ್ನು ಮೊದಲು ಅಪ್ಪಳಿಸುತ್ತದೆ. ಒಂಟಿ ಮರದ ಕೆಳಗೆ ನಿಲ್ಲುವುದು ಪ್ರಾಣಾಪಾಯಕ್ಕೆ ಆಹ್ವಾನ ನೀಡಿದಂತೆ.

  • ಎತ್ತರದ ಪ್ರದೇಶಗಳಿಂದ ದೂರವಿರಿ: ಬೆಟ್ಟದ ತುದಿ, ಬಯಲು ಪ್ರದೇಶ ಅಥವಾ ಎತ್ತರದ ಕಟ್ಟಡಗಳ ಮೇಲೆ ಇರಬೇಡಿ. ತಗ್ಗು ಪ್ರದೇಶಕ್ಕೆ ಧಾವಿಸಿ.

  • ಲೋಹದ ವಸ್ತುಗಳಿಂದ ದೂರವಿರಿ: ಸೈಕಲ್, ಟ್ರ್ಯಾಕ್ಟರ್, ಕಬ್ಬಿಣದ ಕಂಬ, ತಂತಿ ಬೇಲಿ ಅಥವಾ ಕೃಷಿ ಉಪಕರಣಗಳನ್ನು ಮುಟ್ಟಬೇಡಿ. ಇವು ವಿದ್ಯುತ್ ವಾಹಕಗಳಾಗಿ ಕೆಲಸ ಮಾಡುತ್ತವೆ.

  • ನೀರಿನಿಂದ ದೂರವಿರಿ: ಕೆರೆ, ನದಿ ಅಥವಾ ಈಜುಕೊಳದಲ್ಲಿದ್ದರೆ ತಕ್ಷಣ ಹೊರಬನ್ನಿ. ನೀರು ವಿದ್ಯುತ್ ಅನ್ನು ವೇಗವಾಗಿ ಹರಿಸುತ್ತದೆ.

2. ಮನೆಯ ಒಳಗಿದ್ದಾಗ (Indoor) ವಹಿಸಬೇಕಾದ ಜಾಗರೂಕತೆ:

  • ವಿದ್ಯುತ್ ಉಪಕರಣಗಳ ಬಳಕೆ ಬೇಡ: ಟಿವಿ, ಫ್ರಿಡ್ಜ್, ಕಂಪ್ಯೂಟರ್ ಅಥವಾ ಮೊಬೈಲ್ ಚಾರ್ಜರ್ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಇರುತ್ತದೆ. ಇವುಗಳ ಪ್ಲಗ್‌ಗಳನ್ನು ಸಾಕೆಟ್‌ನಿಂದ ತೆಗೆಯಿರಿ.

  • ಲ್ಯಾಂಡ್‌ಲೈನ್ ಫೋನ್ ಬಳಸಬೇಡಿ: ತಂತಿ ಮೂಲಕ ಬರುವ ಫೋನ್‌ಗಳಿಗಿಂತ ಮೊಬೈಲ್ ಫೋನ್ ಬಳಸುವುದು ಹೆಚ್ಚು ಸುರಕ್ಷಿತ.

  • ನೀರಿನ ಸಂಪರ್ಕ ತಪ್ಪಿಸಿ: ಗುಡುಗು ಇರುವಾಗ ಸ್ನಾನ ಮಾಡುವುದು ಅಥವಾ ಪಾತ್ರೆ ತೊಳೆಯುವುದು ಬೇಡ. ಪೈಪ್‌ಗಳ ಮೂಲಕ ಸಿಡಿಲಿನ ವಿದ್ಯುತ್ ಪ್ರವಹಿಸುವ ಸಾಧ್ಯತೆ ಇರುತ್ತದೆ.

  • ಕಿಟಕಿ ಮತ್ತು ಬಾಗಿಲುಗಳಿಂದ ದೂರವಿರಿ: ಗಾಜಿನ ಕಿಟಕಿ ಅಥವಾ ಲೋಹದ ಚೌಕಟ್ಟು ಇರುವ ಬಾಗಿಲುಗಳ ಹತ್ತಿರ ನಿಲ್ಲಬೇಡಿ.

3. ಬಯಲು ಪ್ರದೇಶದಲ್ಲಿ ಸಿಲುಕಿಕೊಂಡರೆ ಏನು ಮಾಡಬೇಕು?

ಒಂದು ವೇಳೆ ನೀವು ಬಯಲು ಪ್ರದೇಶದಲ್ಲಿದ್ದು, ಯಾವುದೇ ಆಶ್ರಯ ಸಿಗದಿದ್ದರೆ:

  • ಸಿಡಿಲಿನ ಭಂಗಿ (Lightning Crouch): ನೆಲದ ಮೇಲೆ ಮಲಗಬೇಡಿ. ಬದಲಾಗಿ, ಕಾಲಿನ ಹಿಮ್ಮಡಿಗಳನ್ನು ಒಂದಕ್ಕೊಂದು ತಾಗಿಸಿ, ಪಾದಗಳ ಮೇಲೆ ಕುಳಿತುಕೊಳ್ಳಿ. ತಲೆಯನ್ನು ಮೊಣಕಾಲುಗಳ ಮಧ್ಯೆ ಬಗ್ಗಿಸಿ, ಕಿವಿಯನ್ನು ಕೈಗಳಿಂದ ಮುಚ್ಚಿಕೊಳ್ಳಿ. ಇದು ನಿಮ್ಮ ದೇಹ ನೆಲಕ್ಕೆ ತಾಗುವ ವಿಸ್ತೀರ್ಣವನ್ನು ಕಡಿಮೆ ಮಾಡುತ್ತದೆ.

  • ಗುಂಪುಗೂಡಬೇಡಿ: ನೀವು ತಂಡದಲ್ಲಿದ್ದರೆ ಒಬ್ಬರಿಗೊಬ್ಬರು ಕನಿಷ್ಠ 15-20 ಅಡಿ ಅಂತರ ಕಾಪಾಡಿಕೊಳ್ಳಿ.

4. ಇತರ ಪ್ರಮುಖ ಮಾಹಿತಿ:

  • 30-30 ನಿಯಮ: ಮಿಂಚು ಕಂಡ ನಂತರ 30 ಸೆಕೆಂಡ್ ಒಳಗಾಗಿ ಗುಡುಗು ಕೇಳಿಸಿದರೆ ಅಪಾಯ ಹತ್ತಿರದಲ್ಲಿದೆ ಎಂದರ್ಥ. ಕೊನೆಯ ಗುಡುಗು ಕೇಳಿಸಿದ ನಂತರ ಕನಿಷ್ಠ  30 ನಿಮಿಷಗಳ ಕಾಲ ಸುರಕ್ಷಿತ ಸ್ಥಳದಲ್ಲೇ ಇರಿ.

  • ಕುರಿಗಾಯಿಗಳು ಮತ್ತು ರೈತರಿಗೆ: ಮಳೆ ಶುರುವಾಗುವ ಲಕ್ಷಣ ಕಂಡ ತಕ್ಷಣ ಜಾನುವಾರುಗಳನ್ನು ಸುರಕ್ಷಿತ ಶೆಡ್‌ಗಳಿಗೆ ಕರೆದೊಯ್ಯಿರಿ. ಬಯಲಿನಲ್ಲಿ ಮರದ ಕೆಳಗೆ ಆಶ್ರಯ ಪಡೆಯುವ ತಪ್ಪು ಮಾಡಬೇಡಿ.

ಸೋ ಗುಡುಗು ಕೇಳಿಸಿದರೆ ಸಾಕು, ನೀವು ಅಪಾಯದ ವಲಯದಲ್ಲಿದ್ದೀರಿ ಎಂದರ್ಥ. ತಕ್ಷಣ ಸುರಕ್ಷಿತ ಸ್ಥಳಕ್ಕೆ ಧಾವಿಸುವುದೇ ಜಾಣತನ. ಸೋ ಈ ಮುನ್ನೆಚ್ಚರಿಕೆ ಕ್ರಮ ವಹಿಸಿ, ತಪ್ಪದೇ ಸಿಡಿಲಿನ ಆಘಾತದಿಂದ ಪ್ರಾಣಾಪಾಯವನ್ನು ತಪ್ಪಿಸಿ.

ಗುಡುಗು & ಸಿಡಿಲಿನಿಂದ ಎಚ್ಚರ! ಈ ಸಾರ್ವಜನಿಕ ಜಾಗೃತಿ ವಿಡಿಯೋವನ್ನು ವೀಕ್ಷಿಸಿ, ಸುರಕ್ಷತಾ ಕ್ರಮಗಳನ್ನು ತಿಳಿಯಿರಿ. #ಮಿಂಚು_ಎಚ್ಚರಿಕೆ@KarnatakaVarthe #KSNDMC
Watch this public awareness video to ensure your safety and others during #Lightning & #Thunderstorm #ThunderstormAwareness #LightningSafety pic.twitter.com/BLUPHTt1WR

— Karnataka State Natural Disaster Monitoring Centre (@KarnatakaSNDMC) March 16, 2026

Public note: Follow these precautionary measures to avoid thunderstorms | WATCH VIDEO
Share. Facebook Twitter LinkedIn WhatsApp Email

Related Posts

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `GPF’ ನಿಯಮಗಳಿಗೆ ತಿದ್ದುಪಡಿ, ಇನ್ಮುಂದೆ ಆಧಾರ್, ಕೆಜಿಐಡಿ ಸಂಖ್ಯೆ ಕಡ್ಡಾಯ !

20/03/2026 5:00 AM1 Min Read

BIG NEWS : ರಾಜ್ಯದಲ್ಲಿ 50 ವರ್ಷ ದಾಟಿದ ಶಾಲಾ ಶಿಕ್ಷಕಿಯರಿಗೆ `ಜನಗಣತಿ’ ಕಾರ್ಯದಿಂದ ವಿನಾಯಿತಿ : ಸರ್ಕಾರದಿಂದ ಮಹತ್ವದ ಆದೇಶ

20/03/2026 4:40 AM1 Min Read

BREAKING:ರಂಜಾನ್ ಹಬ್ಬ ಆಚರಣೆ ಹಿನ್ನಲೆ: ನಾಳೆ ದಕ್ಷಿಣ ಕನ್ನಡದ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ

19/03/2026 10:12 PM1 Min Read
Recent News

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `GPF’ ನಿಯಮಗಳಿಗೆ ತಿದ್ದುಪಡಿ, ಇನ್ಮುಂದೆ ಆಧಾರ್, ಕೆಜಿಐಡಿ ಸಂಖ್ಯೆ ಕಡ್ಡಾಯ !

20/03/2026 5:00 AM

ಸಾರ್ವಜನಿಕರೇ ಗಮನಿಸಿ : ಗುಡುಗು-ಸಿಡಿಲಿನಿಂದ ಪಾರಾಗಲು ಈ ಮುಂಜಾಗೃತಾ ಕ್ರಮ ಪಾಲಿಸಿ | WATCH VIDEO

20/03/2026 4:45 AM

BIG NEWS : ರಾಜ್ಯದಲ್ಲಿ 50 ವರ್ಷ ದಾಟಿದ ಶಾಲಾ ಶಿಕ್ಷಕಿಯರಿಗೆ `ಜನಗಣತಿ’ ಕಾರ್ಯದಿಂದ ವಿನಾಯಿತಿ : ಸರ್ಕಾರದಿಂದ ಮಹತ್ವದ ಆದೇಶ

20/03/2026 4:40 AM

‘ನೋವು ನಿವಾರಕ’ಗಳ ಅತಿಯಾದ ಬಳಕೆ ನಿಮ್ಮ ಕಿಡ್ನಿಗೆ ಕಂಟಕ ; ಮೌನವಾಗಿ ಹಾನಿ ಮಾಡುತ್ತೆ! ವೈದ್ಯರ ಎಚ್ಚರಿಕೆ

19/03/2026 10:14 PM
State News
KARNATAKA

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `GPF’ ನಿಯಮಗಳಿಗೆ ತಿದ್ದುಪಡಿ, ಇನ್ಮುಂದೆ ಆಧಾರ್, ಕೆಜಿಐಡಿ ಸಂಖ್ಯೆ ಕಡ್ಡಾಯ !

By kannadanewsnow5720/03/2026 5:00 AM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ಭವಿಷ್ಯ ನಿಧಿ (GPF) ನಿಯಮಗಳಿಗೆ ಸರ್ಕಾರವು ಮಹತ್ವದ ತಿದ್ದುಪಡಿ ತಂದಿದೆ. ಇನ್ಮುಂದೆ ಜಿಪಿಎಫ್‌ಗೆ…

ಸಾರ್ವಜನಿಕರೇ ಗಮನಿಸಿ : ಗುಡುಗು-ಸಿಡಿಲಿನಿಂದ ಪಾರಾಗಲು ಈ ಮುಂಜಾಗೃತಾ ಕ್ರಮ ಪಾಲಿಸಿ | WATCH VIDEO

20/03/2026 4:45 AM

BIG NEWS : ರಾಜ್ಯದಲ್ಲಿ 50 ವರ್ಷ ದಾಟಿದ ಶಾಲಾ ಶಿಕ್ಷಕಿಯರಿಗೆ `ಜನಗಣತಿ’ ಕಾರ್ಯದಿಂದ ವಿನಾಯಿತಿ : ಸರ್ಕಾರದಿಂದ ಮಹತ್ವದ ಆದೇಶ

20/03/2026 4:40 AM

BREAKING:ರಂಜಾನ್ ಹಬ್ಬ ಆಚರಣೆ ಹಿನ್ನಲೆ: ನಾಳೆ ದಕ್ಷಿಣ ಕನ್ನಡದ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ

19/03/2026 10:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.