ನವದೆಹಲಿ: ಅನಧಿಕೃತವಾಗಿ ಗೂಡ್ಸ್ ರೈಲು ಗಾಡಿಗಳಲ್ಲಿ ಪ್ರಯಾಣ ತಪ್ಪು. ಸಾರ್ವಜನಿಕರು ಗೂಡ್ಸ್ ರೈಲಿನಲ್ಲಿ ಪ್ರಾಯಣ ಮಾಡಬಾರದು. ಇದು ನಿಷೇಧ ಕೂಡ. ಒಂದು ವೇಳೆ ಈ ನಿಯಮ ಮೀರಿ ಪ್ರಯಾಣ ಮಾಡಿದರೇ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭಾರತೀಯ ರೈಲ್ವೆ ಎಚ್ಚರಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ದೂಧಸಾಗರ್ ಮತ್ತು ಕುಲೆಂ ನಿಲ್ದಾಣಗಳ ನಡುವೆ ಸರಕು ರೈಲು (Goods Train) ಗಾಡಿಯಲ್ಲಿ ಅನಧಿಕೃತವಾಗಿ ಪ್ರಯಾಣ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೈಋತ್ಯ ರೈಲ್ವೆಯ ರೈಲ್ವೆ ಸುರಕ್ಷತಾ ಪಡೆ (RPF) ಗಂಭೀರವಾಗಿ ಪರಿಗಣಿಸಿ, ವಿಡಿಯೋ ಶೂಟ್ ಮಾಡಿ ಹರಡಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದೆ.
ತನಿಖೆಯ ವೇಳೆ, ದೂಧಸಾಗರ್ ಜಲಪಾತ ಪ್ರದೇಶ ಪ್ರವೇಶ ನಿರ್ಬಂಧಿತವಾಗಿದ್ದರೂ, ಕೆಲ ಪ್ರವಾಸಿಗರು ಸ್ಥಳೀಯ ಏಜೆಂಟ್‌ಗಳ ಮೂಲಕ ದೂಧಸಾಗರದಿಂದ – ಕುಲೆಂ ವರೆಗೆ ಕುಳಿತು ವಿಡಿಯೋ ಮಾಡಿರುವುದು ಬಹಿರಂಗವಾಗಿದೆ. ಇದು ಅನಧಿಕೃತ ಮತ್ತು ಅಪಾಯಕಾರಿಯಾಗಿದೆ, ಏಕೆಂದರೆ ಸರಕು ಗಾಡಿಗಳಲ್ಲಿ ಪ್ರಯಾಣ ಮಾಡಲು ನಿರ್ಬಂಧ ಇದೆ ಮತ್ತು ಅದು ಶಿಕ್ಷಾರ್ಹವಾಗಿದೆ. ಇಂತಹ ಕಾನೂನುಬಾಹ್ಯ ಕ್ರಮಗಳು ಪ್ರವಾಸಿಗರ ಪ್ರಾಣವನ್ನೇ ಅಪಾಯಕ್ಕೆ ಒಳಪಡಿಸುತ್ತವೆ ಮತ್ತು ದಂಡನೀಯ ಕೃತ್ಯಗಳಾಗಿವೆ. ಈ ವಿಷಯವನ್ನು ರೈಲ್ವೆ ಆಡಳಿತವು ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.
ಸಾರ್ವಜನಿಕ ಹಾಗೂ ಪ್ರವಾಸಿಗರಿಗೆ ಈ ಮೂಲಕ ವಿನಂತಿಸುವದೇನೆಂದರೆ, ಗೂಡ್ಸ್ ರೈಲು ಗಾಡಿಗಳಲ್ಲಿ ಪ್ರಯಾಣ ಮಾಡುವುದು ಸಂಪೂರ್ಣವಾಗಿ ನಿಷಿದ್ಧ ಮತ್ತು ರೈಲ್ವೆ ಕಾಯ್ದೆಯಡಿಯಲ್ಲಿ ಶಿಕ್ಷಾರ್ಹವಾಗಿದೆ. ಹಾಗೂ ನಿರ್ಬಂಧಿತ ಪ್ರದೇಶಗಳಿಗೆ ಪ್ರವೇಶಿಸಲು ಯತ್ನಿಸದಿರಿ ಎಂದು ತಿಳಿಸಿದೆ.
ರಾಜ್ಯಾಧ್ಯಂತ ‘2 ದಿನ ಐದು ಎಸ್ಕಾಂ’ಗಳ ವ್ಯಾಪ್ತಿಯಲ್ಲಿ ಈ ‘ಆನ್ ಲೈನ್ ಸೇವೆ’ ಅಲಭ್ಯ