ಮೈಸೂರು: ನಾಳೆಯಿಂದ ಹೊಸ ವರ್ಷ ಶುರುವಾಗಲಿದ್ದು, 2025 ನೇ ಹೊಸ ವರ್ಷ ಸ್ವಾಗತಕ್ಕೆ ಎಲ್ಲರೂ ಸಿದ್ಧತೆ ನಡೆಸಿದ್ದು, ಈ ನಡುವೆ ಪೊಲೀಸರು ಸಾರ್ವಜನಿಕರಿಗೆ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ದಯವಿಟ್ಟು ಶುಭಾಷಯಗಳ ಪಠ್ಯ ಸಂದೇಶವನ್ನು ಮಾತ್ರ ಹಂಚಿಕೊಳ್ಳಿ. ತೆರೆಯಲು ಮತ್ತು ಪರಿಶೀಲಿಸಲು ಕೇಳುವ ಚಿತ್ರಗಳು, ಲಿಂಕ್ ಗಳನ್ನು ಹಂಚಿಕೊಳ್ಳಬೇಡಿ ಮತ್ತು ತೆರೆಯಬೇಡಿ, ಇತ್ತೀಚಿನ ಸೈಬರ್ ಕ್ರೈಂ ಗಳು ಆತಂಕಕಾರಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸ ವರ್ಷವನ್ನು ಆನಂದದಿಂದ ಆಚರಿಸಿ ಎಂದು ಸೈಬರ್ ವಂಚಕರು ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಅಪ್, ಫೇಸ್ ಬುಕ್, ಟೆಲಿಗ್ರಾಮ್ ಇನ್ನೀತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಲಿಂಕ್ಗಳು ಗ್ರೀಟಿಂಗ್ಸ್ ಗಳನ್ನು ಕಳುಹಿಸಿ ಸೈಬರ್ ವಂಚನೆಗೆ ಒಳಗಾಗುವಂತೆ ಮಾಡುತ್ತಾರೆ.ಅಪರಿಚಿತ ಅನುಮಾನಾಸ್ಪದ ಅಂಕ್ ಗಳ ಮೇಲೆ ಕ್ಲಿಕ್ ಮಾಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಸಾರ್ವಜನಿಕರು ನಿಮ್ಮ ಮೊಬೈಲ್ ಗಳಿಗೆ ಬರುವ ಯಾವುದೇ ಅಂಕ್ ಅಥವಾ ಚಿತ್ರವನ್ನು ಲಿಂಕ್ ಗಳೊಂದಿಗೆ ತೆರೆಯುವಾಗ ಜಾಗರೂಕರಾಗಿರಿ. ಯಾರದರೂ ನಿಮಗೆ ಕಳುಹಿಸಿದ ಶುಭಾಷಯಗಳನ್ನು ಅಥವಾ ಅಂಕ್ ಗಳನ್ನು ಇತರೆ ಗುಂಪುಗಳಲ್ಲಿ ಎಂದಿಗೂ ಹಂಚಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಹೊಸ ವರ್ಷದ ಗ್ರೀಟಿಂಗ್ ಹೆಸರಿನಲ್ಲಿ ಸೈಬರ್ ವಂಚನೆ ಎಚ್ಚರ!!! @DgpKarnataka @Rangepol_SR @KarnatakaCops @AddlSPCrimeMys #CyberSecurity pic.twitter.com/1yzf9TE9OP
— SP Mysuru District (@SPmysuru) December 29, 2024
GOOD NEWS: ರಾಜ್ಯದ ‘ವಿಕಲಚೇತನ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ಜ.4ರಂದು ‘ಸಾಂದರ್ಭಿಕ ರಜೆ’ ಮಂಜೂರು
BREAKING: ರಾಜ್ಯ ಸರ್ಕಾರದಿಂದ ಸಾರಿಗೆ ಸಂಸ್ಥೆಗಳ ನೌಕರರ PF, ಇಂಧನ ಬಾಕಿ ಪಾವತಿಗೆ ಸಾಲ ಪಡೆಯಲು ಅನುಮೋದನೆ