Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕ್ಲಾಸ್ ರೂಮಿನಲ್ಲೇ ವಿದ್ಯಾರ್ಥಿನಿಗೆ ಲವ್ ಪ್ರಪೋಸ್ ಮಾಡಿದ್ದ ಕಾಮುಕ ಪೊಫೆಸರ್ ಅರೆಸ್ಟ್

26/03/2026 9:30 PM

ಕಚ್ಚಾ ತೈಲ ಬೆಲೆ $150 ತಲುಪಿದ್ರೆ, ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗುತ್ತದೆ : ಬ್ಲ್ಯಾಕ್ರಾಕ್ ಎಚ್ಚರಿಕೆ

26/03/2026 9:27 PM

ನನ್ನದೊಂದೇ ನಿಜವಾದ ಧರ್ಮ ಎಂದು ಹೇಳುವುದು ತಪ್ಪು: ಅಲಹಾಬಾದ್ ಹೈಕೋರ್ಟ್!

26/03/2026 9:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರೇ ಗಮನಿಸಿ : ಬೇಸಿಗೆಯಲ್ಲಿ `ಆರೋಗ್ಯ’ ಕಾಪಾಡಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರದಿಂದ ‘ಸಲಹಾ ಕೈಪಿಡಿ’ ಬಿಡುಗಡೆ.!
KARNATAKA

ಸಾರ್ವಜನಿಕರೇ ಗಮನಿಸಿ : ಬೇಸಿಗೆಯಲ್ಲಿ `ಆರೋಗ್ಯ’ ಕಾಪಾಡಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರದಿಂದ ‘ಸಲಹಾ ಕೈಪಿಡಿ’ ಬಿಡುಗಡೆ.!

By kannadanewsnow5706/03/2025 7:18 AM

ಬೆಂಗಳೂರು : ರಾಜ್ಯದಲ್ಲಿ ಗರಿಷ್ಠ ತಾಪಮಾನ, ಉಷ್ಣ ವಾತಾವರಣ, ಬಿಸಿಗಾಳಿ ಎಂದೆಲ್ಲಾ ಕರೆಸಿಕೊಳ್ಳುವ ಕಾಲ ಆರಂಭವಾಗಿದೆ. ಸಾಮಾನ್ಯ ಪ್ರದೇಶದಲ್ಲಿ ವಿಪರೀತ ಶಾಖದ ಮಟ್ಟವು ಹೆಚ್ಚಾಗಿ, ಸಾಮಾನ್ಯ ಉಷ್ಣಾಂಶವು ಗರಿಷ್ಠತೆಗೆ ತಲುಪಿ ತೇವಾಂಶ ಇಲ್ಲದಂತೆ ಮಾಡುವ ವಿಪರೀತ ಪರಿಸ್ಥಿತಿ ವಾತಾವರಣದಲ್ಲಿ ಉಂಟಾದಾಗ ಅದನ್ನು ಬಿಸಿಗಾಳಿ, ಉಷ್ಣಗಾಳಿ, ಬೇಸಿಗೆಯ ಝುಳ, ಉಷ್ಣವಾತಾವರಣ ಅಥವಾ ಸಾಮಾನ್ಯ ಭಾಷೆಯಲ್ಲಿ ಬೇಸಿಗೆ ಎಂದು ಕರೆಸಿಕೊಳ್ಳುತ್ತದೆ.

ಈ ಬೇಸಿಗೆ ವಾತಾವರಣದಲ್ಲಿ ಬಹುತೇಕ ಎಲ್ಲಾ ಜೀವ ಜಂತುಗಳಿಗೆ ಕಷ್ಟವಾಗುತ್ತದೆ. ಅದರಲ್ಲಿಯೂ ಶಿಶುಗಳಿಗೆ, ವಯಸ್ಸಾದವರಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ, ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ, ಬಿಸಿಲಲ್ಲಿ ಕೂಲಿ ಕೆಲಸ ಮಾಡುವ ಬಡ ಮತ್ತು ಸಾಮಾನ್ಯ ವರ್ಗದವರಿಗೆ, ವಿಶೇಷ ಚೇತನ ವ್ಯಕ್ತಿಗಳಿಗೆ, ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈ ಬಿಸಿಲಿನ ಝಳವು ಸಾಕಷ್ಟು ಕಾಡುತ್ತದೆ.

ಬಿಸಿಲಿನ ತಾಪದಿಂದ ಮನುಷ್ಯರ ಮೇಲಾಗುವ ಪರಿಣಾಮಗಳು
ಈ ಲಕ್ಷಣಗಳನ್ನು ಗಮನಿಸಿ
ಶಾಖಾ ಸೆಳೆತ (ಹೀಟ್ ಕ್ರಾಂಪ್) ಜ್ವರ (102 ಡಿಗ್ರಿ ಗಿಂತ ಕಡಿಮೆ) ಹಾಗೂ ಮೈಯಲ್ಲಿ ಊತ ಕಾಣಿಸಿಕೊಳ್ಳುವುದು.
ಇವುಗಳನ್ನು ಮಾಡಿ
ದೈಹಿಕ ಚಟುವಟಿಕೆಗಳನ್ನು ನಿಲ್ಲಿಸಿ ಹಾಗು ತಂಪಾದ ಜಾಗಗಳಿಗೆ ಹೋಗಿ.
ತಂಪಾದ, ಶುದ್ಧವಾದ ನೀರು ಕುಡಿಯುವುದು ಹಾಗೂ ಓ.ಆರ್.ಎಸ್ ಮತ್ತು ಗ್ಲಕೋಸ್ ಅನ್ನು ಬಳಸುವುದು.
ಹೃದ್ರೋಗ ಸಮಸ್ಯೆ ಇದ್ದರೆ ಅಥವಾ ಇತರೆ ಯಾವುದೇ ರೋಗ ಲಕ್ಷಣಗಳಿದ್ದರೆ ಸಕಾಲಕ್ಕೆ ವೈದ್ಯಕೀಯ ಸಹಾಯ ಪಡೆದುಕೊಳ್ಳಿ

ಈ ಲಕ್ಷಣಗಳನ್ನು ಗಮನಿಸಿ

ಶಾಖದ ಹೊಡೆತ (ಹೀಟ್ ಎನ್ಸಾಷನ್) ವಿಪರೀತ ಬೆವರುವಿಕೆ, ನಿಶ್ಯಕ್ತಿ, ಸುಸ್ತು, ತಲೆ ಸುತ್ತು, ತಲೆ ನೋವು, ವಾಕರಿಕೆ, ವಾಂತಿ, ಸ್ನಾಯುಗಳ ಸೆಳೆತ.

ಇವುಗಳನ್ನು ಮಾಡಿ

ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಿ.
ಧರಿಸಿದ ಉಡುಪುಗಳು ಬಿಗಿಯಾಗಿದ್ದರೆ ಸಡಿಲಗೊಳಿಸಿ.
ದೇಹದ ಉಷ್ಣಾಂಶವನ್ನು ನಿಯಂತ್ರಿಸಲು ಮೈ ಮೇಲೆ ತಂಪಾದ, ಒದ್ದೆ ಬಟ್ಟೆಗಳನ್ನು ಹಾಕಿ.

ಈ ಲಕ್ಷಣಗಳನ್ನು ಗಮನಿಸಿ
ಶಾಖಾಘಾತ (ಹೀಟ್ ಸ್ಟೋಕ್)
ದೇಹದ ಉಷ್ಣಾಂಶ ಅತಿಯಾಗಿ ಹೆಚ್ಚಾಗುವುದು(104 °F ಅಥವಾ ಅದಕ್ಕಿಂತ ಹೆಚ್ಚಾಗಿ), ಮನಸ್ಸಿನಲ್ಲಿ ಗೊಂದಲ, ಮೂರ್ಧೆ ರೋಗ ಹಾಗು ವ್ಯಕ್ತಿಯು ಕೋಮಾ ಸ್ಥಿತಿಗೆ ಹೋಗಬಹುದು.

* ಚರ್ಮ ಸುಡುವುದು ಅಥವಾ ಕೆಂಪಾದ ಚರ್ಮ
* ತಲೆ ನೋವು
* ವಾಕರಿಕೆ ಹಾಗು ವಾಂತಿ
* ಅತಿಯಾದ ನಾಡಿ ಮಿಡಿತ
* ಪ್ರಜ್ಞೆ ತಪ್ಪುವಿಕೆನಾಡಿಮಿಡಿತ.

ಇವುಗಳನ್ನು ಮಾಡಿ
ತುರ್ತು ವೈದ್ಯಕೀಯ ಸಹಾಯವಾಣಿ 104 ಕ್ಕೆ ಕರೆ ಮಾಡಿ ವೈದ್ಯಕೀಯ ಸಹಾಯ ಪಡೆದುಕೊಳ್ಳಿ.
ಧರಿಸಿದ ಉಡುಪುಗಳು ಬಿಗಿಯಾಗಿದ್ದರೆ ಸಡಿಲಗೊಳಿಸಿ.
ವ್ಯಕ್ತಿಯನ್ನು ಹೆಚ್ಚು ಗಾಳಿಯಾಡುವಂತಹ ತಂಪಾದ ಜಾಗಕ್ಕೆ ಸ್ಥಳಾಂತರಿಸಿ.
ವ್ಯಕ್ತಿಗೆ ಉಸಿರಾಟದ ಶ್ವಾಸನಾಳದ ತೊಂದರೆಗಳಿದ್ದು ಆತ ಅಶಕ್ತನಾದರೆ ತಕ್ಷಣ ಕುಡಿಯಲು ಏನನ್ನೂ ನೀಡಬಾರದು
ಮೈ ಮೇಲೆ ತಂಪಾದ, ಒದ್ದೆ ಬಟ್ಟೆಗಳನ್ನು ಹಾಕಿ ದೇಹದ ಉಷ್ಣಾಂಶವನ್ನು ನಿಯಂತ್ರಿಸಿ. (ಮುಖ್ಯವಾಗಿ ತಲೆ, ಕತ್ತು, ಕಂಕುಳು, ಮತ್ತು ತೊಡೆಸಂದುಗಳಲ್ಲಿ)

ಹೇಗೆ ತಪ್ಪಿಸಬೇಕು:ಏನನ್ನು ತಿನ್ನಬೇಕು?

ಪ್ರಾಚೀನ ಭಾರತೀಯರ ನಂಬಿಕೆ ಪ್ರಕಾರ ನೀವು ತಿನ್ನುವ ಆಹಾರವು ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ, ನೀವು ದೇಹದಲ್ಲಿ ನೀರಿನ ಅಂಶ ಉಳಿಸಿಕೊಳ್ಳುವಂತಹ ಆಹಾರವನ್ನೇ ಹೆಚ್ಚಾಗಿ ಸೇವಿಸಬೇಕು.

ಅವುಗಳೆಂದರೆ:-
ತರಕಾರಿಗಳು- ಸ್ಥಳೀಯವಾಗಿ ಲಭ್ಯವಿರುವ ಹಸಿ ತರಕಾರಿಗಳಾದ ಸೌತೆಕಾಯಿ, ಹಾಗಲಕಾಯಿ, ಸೋರೆಕಾಯಿ, ಪಡವಲಕಾಯಿ, ಕುಂಬಳಕಾಯಿ ಹಾಗು ಗೆಡ್ಡೆಗಳಾದ ಬೀಟ್ ರೂಟ್, ಕ್ಯಾರೆಟ್, ಮೂಲಂಗಿ ಮತ್ತು ಹಸಿರು ಸೊಪ್ಪುಗಳು ಇತ್ಯಾದಿಗಳನ್ನು ಬಳಸಬೇಕು.

* ಹಣ್ಣುಗಳು- ನೆಲ್ಲಿಕಾಯಿ/ಬೆಟ್ಟದ ನೆಲ್ಲಿಕಾಯಿ, ಬಾಳೆ ಹಣ್ಣು, ಕಲ್ಲಂಗಡಿ, ಮಾವು, ಮೂಸಂಬಿ, ಕಿತ್ತಳೆ ಹಣ್ಣು ಇತ್ಯಾದಿ.

*ರಾಗಿಹಿಟ್ಟು ಹಾಗೂ ಹೆಸರು ಬೇಳೆಗಳನ್ನು ಆಹಾರದಲ್ಲಿ ಬಳಸಿದರೆ ಉತ್ತಮ.
* ದೇಹವನ್ನು ತಂಪಾಗಿಸುವ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಶುಂಠಿ ಹಾಗೂ ಕರಿಬೇವಿನಂತಹ ಮೂಲಿಕೆಗಳನ್ನು ಮೊಸರಿನಲ್ಲಿ ಬೆರಸಿ ಮಾಡಲಾಗುವ ತಂಬುಳಿ, ಅಂಬಲಿ, ನೀರು ಪದಾರ್ಥಗಳು ಅಥವಾ ಸ್ಥಳೀಯ ದ್ರವ ಆಹಾರಗಳನ್ನು ಸೇವಿಸಬೇಕು.
* ಕನಿಷ್ಠ ಒಂದು ಹೊತ್ತಿನ ಊಟದಲ್ಲಾದರೂ ತುಪ್ಪವನ್ನು ಬಳಸುವುದು ಉತ್ತಮ.
* ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಖಾರದ ಮತ್ತು ಅಧಿಕ ಉಪ್ಪಿನ ಅಂಶವಿರುವ ಪದಾರ್ಥಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು.
* ಸಕ್ಕರೆಯ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು.
ದೇಹವನ್ನು ತಂಪಾಗಿಡಲು ಸ್ಥಳೀಯವಾಗಿ ಸಿಗುವ ಯಾವ ತಿನಿಸುಗಳನ್ನು ನೀವು ತಯಾರಿಸುತ್ತೀರಿ ಮತ್ತು ನೀವು ಅದಕ್ಕೆ ಯಾವ ಅಂಶಗಳನ್ನು ಬಳಸುತ್ತೀರಿ?

ಕಾಲಕ್ಕೆ ತಕ್ಕಂತೆ, ಸುಲಭವಾಗಿ ಲಭ್ಯ ಇರುವ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ. ಕೆಲವು ಆಹಾರಗಳು ನಿಮಗೆ ಹೆಚ್ಚು ದುಬಾರಿಯಾಗಿದ್ದರೆ ಅಥವಾ ಆ ಸಮಯದ್ದಲಿ ದೊರಕದಿದ್ದರೆ, ಪರ್ಯಾಯವಾಗಿರುವ ಉತ್ತಮ ಆಹಾರಗಳನ್ನು ಬಳಸುವುದು ಸೂಕ್ತ.

ಏನೇನು ಕುಡಿಯಬಹುದು…?

* ದೇಹಕ್ಕೆ ದಾಹ ಎನಿಸದಿದ್ದಾಗಲೂ ಸಹ ನೀರಿನ ಬಳಕೆ ನಿರಂತರವಾಗಿರಲಿ. ಅದಕ್ಕೆ ಮಣ್ಣಿನ ಮಡಕೆಯಲ್ಲಿ ಶೇಖರಿಸಿದ ತಂಪಾದ ನೀರನ್ನು ಆಗಾಗ ಕುಡಿಯುತ್ತಿರಿ.
* ರಾತ್ರಿ ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದು ಕುಡಿಯಿರಿ. ದೇಹ ಇನ್ನಷ್ಟು ತಂಪಾಗಿರುವುದು.
ನಿಮಗೆ ತಿಳಿದಿರುವ ನೀರು ಶುದ್ದೀಕರಣ ಹಾಗು ಶೇಖರಣಾ ವಿಧಾನಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳಿ.
* ತೀರಾ ತಂಪಾದ/ಕೊರೆಯುವ ನೀರನ್ನು ಕುಡಿಯಬೇಡಿ. ಅದರಿಂದ ಹೊಟ್ಟೆಯ ಸ್ನಾಯುಸೆಳೆತ ಹಾಗೂ ಅಜೀರ್ಣ ಉಂಟಾಗಬಹುದು.
* ಮದ್ಯ, ಚಹಾ, ಕಾಫಿ, ತಂಪಾದ ಪಾನೀಯಗಳು, ಸೋಡಾ ಹಾಗು ಇತರ ಕಾರ್ಬೊನೇಟೆಡ್ ಪಾನೀಯಗಳಿಂದ ದೂರ ಇರಬೇಕು. ಇದು ದೇಹದ ತಾಪವನ್ನು ಹೆಚ್ಚಿಸುತ್ತದೆ ಹಾಗು ನಿರ್ಜಲೀಕರಣ(ಡಿ ಹೈಡೇಶನ್) ಉಂಟುಮಾಡುವುದು.
* ಎಳನೀರು, ಕಬ್ಬಿನ ಹಾಲು, ಮಜ್ಜಿಗೆ, ಹಣ್ಣಿನ ರಸದಂತಹ ಪಾನೀಯಗಳನ್ನು ಹೆಚ್ಚಾಗಿ ಸೇವಿಸಿ.
* ಇತರ ಸ್ಥಳೀಯ ಪೇಯಗಳಾದ ಮನೆಯಲ್ಲೇ ಸಿದ್ದಪಡಿಸಿದ ಲಸ್ಸಿ, ತೋರಣಿ (ಅಕ್ಕಿ ಗಂಜಿ), ಉಶೀರಾ ರಸ ಬಳಸುವುದು ಸೂಕ್ತ.
* ಓ. ಆರ್. ಎಸ್. ಹಾಗು ಗ್ಲಕೋಸ್ ಮಿಶ್ರಿತ ನೀರನ್ನು ಹೊರಾಂಗಣದಲ್ಲಿದ್ದಾಗ ಹೆಚ್ಚಾಗಿ ಸೇವಿಸಿ.

 

 

 

 

 

 

 

Public attention: State government releases 'advice manual' on maintaining 'health' during summer!
Share. Facebook Twitter LinkedIn WhatsApp Email

Related Posts

ಕ್ಲಾಸ್ ರೂಮಿನಲ್ಲೇ ವಿದ್ಯಾರ್ಥಿನಿಗೆ ಲವ್ ಪ್ರಪೋಸ್ ಮಾಡಿದ್ದ ಕಾಮುಕ ಪೊಫೆಸರ್ ಅರೆಸ್ಟ್

26/03/2026 9:30 PM1 Min Read

BREAKING: ಮಾದರಿ ನೀತಿ ಸಂಹಿತೆ ಹಿನ್ನಲೆ: ನಾಳೆಗೆ ಒಳಮೀಸಲಾತಿ ಸಂಬಂಧದ ವಿಶೇಷ ಸಂಪುಟ ಸಭೆ ಮುಂದೂಡಿಕೆ

26/03/2026 9:14 PM1 Min Read

BREAKING: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಸುಭಾನ್ ಸಾಬ್ ಪಕ್ಷದಿಂದ ಉಚ್ಚಾಟನೆ

26/03/2026 8:20 PM1 Min Read
Recent News

ಕ್ಲಾಸ್ ರೂಮಿನಲ್ಲೇ ವಿದ್ಯಾರ್ಥಿನಿಗೆ ಲವ್ ಪ್ರಪೋಸ್ ಮಾಡಿದ್ದ ಕಾಮುಕ ಪೊಫೆಸರ್ ಅರೆಸ್ಟ್

26/03/2026 9:30 PM

ಕಚ್ಚಾ ತೈಲ ಬೆಲೆ $150 ತಲುಪಿದ್ರೆ, ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗುತ್ತದೆ : ಬ್ಲ್ಯಾಕ್ರಾಕ್ ಎಚ್ಚರಿಕೆ

26/03/2026 9:27 PM

ನನ್ನದೊಂದೇ ನಿಜವಾದ ಧರ್ಮ ಎಂದು ಹೇಳುವುದು ತಪ್ಪು: ಅಲಹಾಬಾದ್ ಹೈಕೋರ್ಟ್!

26/03/2026 9:26 PM

ಅಲಿಯಾನ್ಜ್‌ ಜಿಯೊ ರಿಇನ್ಷೂರೆನ್ಸ್ ಸೇವೆ ಆರಂಭ‌

26/03/2026 9:18 PM
State News
KARNATAKA

ಕ್ಲಾಸ್ ರೂಮಿನಲ್ಲೇ ವಿದ್ಯಾರ್ಥಿನಿಗೆ ಲವ್ ಪ್ರಪೋಸ್ ಮಾಡಿದ್ದ ಕಾಮುಕ ಪೊಫೆಸರ್ ಅರೆಸ್ಟ್

By kannadanewsnow0926/03/2026 9:30 PM KARNATAKA 1 Min Read

ಬೆಂಗಳೂರು ಗ್ರಾಮಾಂತರ: ತರಗತಿಯಲ್ಲೇ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮ ನಿವೇದನೆ ಮಾಡಿ ಅಸಭ್ಯವಾಗಿ ವರ್ತಿಸಿದ ಸಹಾಯಕ ಪ್ರಾಧ್ಯಾಪಕನಿಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಕ್ಕ…

BREAKING: ಮಾದರಿ ನೀತಿ ಸಂಹಿತೆ ಹಿನ್ನಲೆ: ನಾಳೆಗೆ ಒಳಮೀಸಲಾತಿ ಸಂಬಂಧದ ವಿಶೇಷ ಸಂಪುಟ ಸಭೆ ಮುಂದೂಡಿಕೆ

26/03/2026 9:14 PM

BREAKING: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಸುಭಾನ್ ಸಾಬ್ ಪಕ್ಷದಿಂದ ಉಚ್ಚಾಟನೆ

26/03/2026 8:20 PM

ALERT : `ಲೈಂಗಿಕ ಆಸಕ್ತಿ’ ಕಡಿಮೆಯಾಗಲು ಕಾರಣಗಳೇನು? ಇಲ್ಲಿವೆ ಪುರುಷರು ತಿಳಿದುಕೊಳ್ಳಲೇಬೇಕಾದ ಅಂಶಗಳು !

26/03/2026 8:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.