ಯಾದಗಿರಿ: ಜಿಲ್ಲೆಯಲ್ಲಿ ರೌಡಿ ಶೀಟರ್ ಜೊತೆ ಕೇಕ್ ಕಟ್ ಮಾಡಿದಂತ ಪಿಎಸ್ಐ ಒಪ್ಪರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಠಾಣೆಯ ಪಿಎಸ್ಐ ರಾಜಶೇಖರ್ ರಾಠೋಡ್ ಅವರು ರೌಡಿ ಶೀಟರ್ ಜೊತೆಗೆ ಸಬ್ ಇನ್ಸ್ ಪೆಕ್ಟರ್ ಆಗಿ 10 ವರ್ಷ ಪೂರ್ಣಗೊಳಿಸಿದ್ದಕ್ಕೆ ಕೇಕ್ ಕತ್ತರಿಸಿದ್ದರು.
ರೌಡಿ ಶೀಟರ್ ಶೀಟರ್ ನಾಗರಾಜ್ ಜೊತೆಗೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ 10 ವರ್ಷ ಪೂರ್ಣಗೊಳಿಸಿದ್ದಕ್ಕೆ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ್ದ ಪೋಟೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದವು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದಂತ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಅವರು ನಾರಾಯಣಪುರ ಠಾಣೆಯ ಪಿಎಸ್ಐ ರಾಜಶೇಖರ ರಾಠೋಡ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ರೂ.300 ಊಟ ಕೊಟ್ಟು, 300 ಕೋಟಿ ಸಿಎಂ ಸಿದ್ಧರಾಮಯ್ಯ ವಸೂಲಿ: ಆರ್.ಅಶೋಕ್ ಆರೋಪ
BREAKING : ‘ಬಿಹಾರ ವಿಧಾನಸಭಾ ಚುನಾವಣೆ’ಗೆ BJP ಮೊದಲ ಪಟ್ಟಿ ಬಿಡುಗಡೆ: ’71 ಅಭ್ಯರ್ಥಿ’ಗಳ ಹೆಸರು ಘೋಷಣೆ