ಕಲಬುರ್ಗಿ : ಇಡೀ ದೇಶವೇ ಬೆಚ್ಚಿ ಬೆರಗಾಗಿಸಿದ್ದ 545 PSI ನೇಮಕದಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತನಿಖೆಯು ತೀವ್ರವಾಗಿ ಚುರುಕುಗೊಂಡಿದ್ದು, ಈಗ ಸಿಐಡಿ ಅಧಿಕಾರಿಗಳು ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ನ ಮೂವರು ಸಹಚರರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

‘ಉದ್ಯೋಗಾಕಾಂಕ್ಷಿ’ಗಳಿಗೆ ಭರ್ಜರಿ ಗುಡ್ ನ್ಯೂಸ್: ಶೀಘ್ರದಲ್ಲೇ ‘1000 ಗ್ರಾಮ ಲೆಕ್ಕಿಗ ನೇಮಕಾತಿ ಅಧಿಸೂಚನೆ

ಬಂಧಿತ ಆರೋಪಿಗಳು ಅಭ್ಯರ್ಥಿಗಳಿಗೆ ಬ್ಲೂಟೂಥ್ ಮೂಲಕ ಉತ್ತರ ಹೇಳಿ ಕೊಟ್ಟಿದ್ದಕ್ಕೆ ಸಂಬಂಧಿಸಿದಂತೆ ಕಲಬುರಗಿ ಅಶೋಕ್ ನಗರದಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಈಗ ಸಿಐಡಿ ಬಂಧಿಸಿದೆ.

‘ಉದ್ಯೋಗಾಕಾಂಕ್ಷಿ’ಗಳಿಗೆ ಭರ್ಜರಿ ಗುಡ್ ನ್ಯೂಸ್: ಶೀಘ್ರದಲ್ಲೇ ‘1000 ಗ್ರಾಮ ಲೆಕ್ಕಿಗ ನೇಮಕಾತಿ ಅಧಿಸೂಚನೆ

ಬಂಧಿತ ಆರೋಪಿಗಳೆಲ್ಲರೂ ಪಿಎಸ್‌ಐ ಪರಿಕ್ಷಾ ಹಗರಣ ಮತ್ತು ಕೆಇಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್‌ ಆರ್ ಡಿ ಪಾಟೀಲ್ ಜೊತೆ ಸಂಪರ್ಕವಿದ್ದವರಾಗಿದ್ದಾರೆ. ಬಂಧಿತ ಚಂದ್ರಕಾಂತ್ ಪ್ಯಾಟಿ ಆರೋಗ್ಯ ಇಲಾಖೆ ಶಹದಾಬಾದ್ ನಲ್ಲಿ ಎಫ್ ಡಿಎ ಅಧಿಕಾರಿಯಾಗಿದ್ದಾನೆ. ಮತ್ತೋರ್ವ ಬಂಧಿತ ಬಸವರಾಜನ್ ಸಿದ್ದರಾಮಪ್ಪ ಅಫ್ಜಲ್‌ಪುರದ ಬಿಸಿಎಂ ವಸತಿ ನಿಲಯದ ಸೂಪರಿಂಟೆಂಡೆಂಟ್‌ ಆಗಿದ್ದಾನೆ. ಮೂರನೇ ಬಂಧಿತ ಆರೋಪಿ ಶಶಿಧರ್ ಬಿಕಾಂ ವಿದ್ಯಾರ್ಥಿಯಾಗಿದ್ದಾನೆ.

ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ ರಿಪಬ್ಲಿಕ್ ಟಿವಿ ಪತ್ರಕರ್ತನ ಬಂಧನ

ಆರ್ ಡಿ ಪಾಟೀಲ್ ನ ಕೆಲ ಸಂಪರ್ಕಿತರ ಮೂಲಕ ಸಿಕ್ಕ ಸಾಕ್ಷ್ಯ ಹಾಗೂ ಬಂಧಿತ ಆರೋಪಿ ಸಿದ್ದುಗೌಡ ಮತ್ತು ಅಭ್ಯರ್ಥಿಗಳು ಕೊಟ್ಟ ಮಾಹಿತಿ ಆಧರಿಸಿ ಈ ಮೂವರ ಬಂಧನವಾಗಿದೆ.ಸದ್ಯ ಮೂವರು ಆರೋಪಿಗಳನ್ನ ಸಿಐಡಿ ಸಂಜೆ ಕಲ್ಬುರ್ಗಿಯ ಕೋರ್ಟ್ ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದು ಬೆಂಗಳೂರಿಗೆ ಕರೇತರಲಾಗುತ್ತಿದೆ.

BREAKING: ಜಮ್ಮು ಮತ್ತು ಕಾಶ್ಮೀರದಲ್ಲಿ 5.5 ತೀವ್ರತೆಯ ಭೂಕಂಪ | Earthquake in Jammu And Kashmir

Share.
Exit mobile version