ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ರಾತ್ರಿ ಲಘು ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 5.5 ರಷ್ಟಿತ್ತು ಎಂದು ಕಾಶ್ಮೀರ ಹವಾಮಾನ ಇಲಾಖೆ ತಿಳಿಸಿದೆ.

ಭೂಕಂಪದ ಆಳ 10 ಕಿ.ಮೀ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ 9ಎನ್ಸಿಎಸ್ ಪ್ರಕಾರ, ಭೂಕಂಪದ ಕೇಂದ್ರಬಿಂದು ಲಡಾಖ್ನ ಕಾರ್ಗಿಲ್ನ ವಾಯುವ್ಯಕ್ಕೆ 148 ಕಿ.ಮೀ ದೂರದಲ್ಲಿದೆ.

ಶ್ರೀನಗರದಲ್ಲೂ ಭೂಕಂಪದ ಅನುಭವವಾಗಿದೆ. ಭೂಕಂಪನದ ನಂತರ ಈ ಪ್ರದೇಶವನ್ನು ಭೀತಿ ಆವರಿಸಿದೆ. ಭೂಕಂಪದಿಂದಾಗಿ ಯಾವುದೇ ಗಾಯಗಳು ಅಥವಾ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Share.
Exit mobile version