ನವದೆಹಲಿ : ಭಾರತೀಯ ಸೇನೆಗೆ ಸಾಹಸಗಳು ಹೊಸದಲ್ಲ. ಯಾವುದೇ ಸವಾಲುಗಳನ್ನೂ ಸೇನೆ ಸುಲಭವಾಗಿ ಜಯಿಸಬಹುದು. ಹಾಗಾಗಿ ಪ್ರತಿಬಾರಿಯೂ ಜೈ ಜವಾನ್ ಅನ್ನೋ ಘೋಷಣೆ ಮೊಳಗುತ್ತೆ. ಇದೀಗ ನಮ್ಮ ಸೈನಿಕರು ಮತ್ತೊಮ್ಮೆ ಅಂಥದ್ದೊಂದು ಸಾಹಸ ಮಾಡಿ ರಿಯಲ್ ಹೀರೋ ಎಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಎಲ್ಲಾ ರಸ್ತೆಗಳನ್ನ ಮುಚ್ಚಿಹೋಗಿವೆ. ಹೀಗಿರುವಾಗ ಕುಪ್ವಾರದಲ್ಲಿ ಗರ್ಭಿಣಿ ಮಹಿಳೆ ನೋವಿನಿಂದ ಬಳಲುತ್ತಿದ್ದು, ಕುಟುಂಬಸ್ಥರು ಏನು ಮಾಡಬೇಕೆಂದು ತೋಚದೆ ರಾತ್ರಿ 11 ಗಂಟೆಗೆ ಸಮೀಪದ ವಿಲ್ಗಾಮ್ ಸೇನಾ ಶಿಬಿರಕ್ಕೆ ಕರೆ ಮಾಡಿ ಸಹಾಯ ಕೇಳಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದ್ದು ಕೂಡಲೇ ಬಂದು ರಕ್ಷಿಸುವಂತೆ ಮನವಿ ಮಾಡಿದರು. ಕೂಡಲೇ ಎಚ್ಚೆತ್ತ ಸೇನೆ ನೆರವಿಗೆ ಧಾವಿಸಿತು. ಆದ್ರೆ, ಇಡೀ ರಸ್ತೆಯೂ ಎರಡು ದಿನಗಳಿಂದ ಬೀಳುತ್ತಿರುವ ಹಿಮದಿಂದ ಆವೃತವಾಗಿದೆ. ವಾಹನಗಳು ಹೋಗಲು ದಾರಿಯೇ ಇಲ್ಲ. ಆದರೂ ಜವಾನರು ಹಿಂದೆ ಸರಿಯದೆ ಆಕೆಯನ್ನ ರಕ್ಷಿಸಲು ಮುಂದಾದರು. ಆಕೆಯನ್ನ ಸ್ಟ್ರೆಚರ್ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿದರು.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲರೂ ಭಾರತೀಯ ಸೇನೆಗೆ ಸೆಲ್ಯೂಟ್ ಎಂದು ಕಮೆಂಟ್ ಹಾಕುತ್ತಿದ್ದಾರೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಆಕೆಯನ್ನ ರಕ್ಷಿಸಿದ್ದಾರೆ ಎಂದು ಶ್ಲಾಘಿಸುತ್ತಿದ್ದಾರೆ.
#WATCH | Kupwara, J&K: Vilgam Army Camp on Saturday rescued a pregnant woman amid heavy snowfall from Khanbal to PHC Vilgam of North Kashmir’s Kupwara District.
(Video source: Indian Army) pic.twitter.com/uiYbwbLyZm
— ANI (@ANI) February 4, 2024
‘ವ್ಯಭಿಚಾರಿ’ ಸಂಗಾತಿಯು ಅಸಮರ್ಥ ಪೋಷಕರಿಗೆ ಸಮಾನರಲ್ಲ, ಮಕ್ಕಳ ಪಾಲನೆಯನ್ನು ನಿರಾಕರಿಸಲಾಗುವುದಿಲ್ಲ: ಹೈಕೋರ್ಟ್
ಬೆಂಗಳೂರಲ್ಲಿ ಬಿಜೆಪಿ ಹೈಡ್ರಾಮಾ : ಸಂಸದ ಡಿ.ಕೆ.ಸುರೇಶ್ ಮನೆಗೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ ಯತ್ನ
BIG NEWS:ತೆಲಂಗಾಣದಲ್ಲಿ ವಿಮಾನ ರಿಪೇರಿ ವೇಳೆ ಅಪಘಾತ: ಏರ್ ಫೋರ್ಸ್ ಅಧಿಕಾರಿ ಸಾವು