ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣದರ ಖಂಡಿಸಿ ಪ್ರಯಾಣಿಕರು ಪ್ರಯಾಣಿಸುತ್ತಲೇ ಮೆಟ್ರೋ ಒಳಗಡೆ ಪ್ರತಿಭಟನೆ ನಡೆಸಿದಂತ ಘಟನೆ ಇಂದು ನಡೆದಿದೆ.
ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಖಂಡಿಸಿ, ಇಂದು ಮೆಟ್ರೋ ಪ್ರಯಾಣಿಕರು, ಬೆಂಗಳೂರು ನಾಗರೀಕರ ವೇದಿಕೆಯಿಂದ ಮೆಟ್ರೋ ಒಳಗಡೆಯೇ ಪ್ರತಿಭಟನೆ ನಡೆಸಲಾಗಿದೆ.
ಬೆಂಗಳೂರಿನ ಜ್ಞಾನ ಭಾರತಿ ಮೆಟ್ರೋ ನಿಲ್ದಾಣದಿಂದ ಎಂ.ಜಿ ರಸ್ತೆಯವರೆಗೆ ನಮ್ಮ ಮೆಟ್ರೋ ಪ್ರಯಾಣಿಕರು, ಬೆಂಗಳೂರು ನಾಗರೀಕರ ಸಂಘವು ಮೆಟ್ರೋ ದರ ಹೆಚ್ಚಳ ವಿರೋಧಿಸಿ ಭಿತ್ತಿ ಪತ್ರವನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿತು.
ನಮ್ಮ ಮೆಟ್ರೋ ಪ್ರಯಾಣದ ದರವನ್ನು ಈ ಮೊದಲು ಎಷ್ಟು ಇತ್ತೋ ಅಷ್ಟೇ ದರವನ್ನು ಪರಿಷ್ಕರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಪ್ರಯಾಣ ದರ ಇಳಿಕೆ ಮಾಡದೇ ಇದ್ದರೇ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಬಂಪರ್: ಹೆಣ್ಣು ಜನಿಸಿದ್ರೆ 50,000, ಗಂಡು ಜನಿಸಿದ್ರೆ ಹಸು ಗಿಫ್ಟ್!
BIG NEWS : ದೇಶಾದ್ಯಂತ `ತಾಪಮಾನ’ ಹೆಚ್ಚಳ : ಹೃದಯ, ಶ್ವಾಸಕೋಶ, ಮೆದುಳಿಗೆ ಹಾನಿಕಾರಕ.!
ಎರಡು ರಾಜ್ಯಗಳಲ್ಲಿ ಇಸ್ರೋದಿಂದ ಎರಡು ಹೊಸ ಉಡಾವಣಾ ಪ್ಯಾಡ್ ಗಳು, ಚಂದ್ರಯಾನ -4 ಸಿದ್ಧ | Chandrayaan-4