Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘ಭಾರತದ ವರ್ಚಸ್ಸಿಗೆ ಧಕ್ಕೆ’ : ಎಐ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಅರೆಬೆತ್ತಲೆ ಪ್ರತಿಭಟನೆಗೆ ಕೋರ್ಟ್ ಛೀಮಾರಿ

22/02/2026 2:50 PM

ಪದೇ ಪದೇ ‘ದೆಹಲಿ ಪ್ರವಾಸ’ದ ಬಗ್ಗೆ ‘ಡಿಸಿಎಂ ಡಿ.ಕೆ ಶಿವಕುಮಾರ್’ ಹೇಳಿದ್ದೇನು ಗೊತ್ತಾ?

22/02/2026 2:47 PM

ಹಿಂದೆ, ಇಂದು, ಮುಂದೆ ‘JDS ಪಕ್ಷ’ದ ತುತ್ತತುದಿಯ ನಾಯಕರು ‘ಗೌಡರ ಕುಟುಂಬ’ದವರೇ ಆಗಿರುತ್ತಾರೆ: ಸಿಎಂ ಸಿದ್ಧರಾಮಯ್ಯ ಭವಿಷ್ಯ

22/02/2026 2:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಳೆ ಹಾನಿ ಪರಿಹಾರಕ್ಕಾಗಿ ಶೀಘ್ರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ : ಸಚಿವ ಸಂತೋಷ ಲಾಡ್
KARNATAKA

ಬೆಳೆ ಹಾನಿ ಪರಿಹಾರಕ್ಕಾಗಿ ಶೀಘ್ರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ : ಸಚಿವ ಸಂತೋಷ ಲಾಡ್

By kannadanewsnow5723/08/2025 7:47 PM

ಧಾರವಾಡ : ನವಲಗುಂದ, ಧಾರವಾಡ, ಅಣ್ಣಿಗೇರಿ, ಹುಬ್ಬಳ್ಳಿ, ಕುಂದಗೋಳ, ಕಲಘಟಗಿ ತಾಲೂಕುಗಳ ವ್ಯಾಪ್ತಿಯಲ್ಲಿ ಹೆಸರು, ಉದ್ದು, ಮೆಕ್ಕೆಜೋಳ, ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆಗಳ ಹಾನಿಯಾಗಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಬೆಳೆ ಹಾನಿ ಅಂದಾಜಿಸಿ 93,547 ಹೆಕ್ಟೆರ್ ಕೃಷಿ ಬೆಳೆಗಳು ಹಾಗೂ 4,065 ಹೆಕ್ಟೆರ್ ತೋಟಗಾರಿಕಾ ಬೆಳೆಗಳು ಸೇರಿ ಒಟ್ಟು 97,612 ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತಕ್ಕೆ ಪ್ರಾಥಮಿಕ ಸಮೀಕ್ಷಾ ವರದಿಯನ್ನು ಸಲ್ಲಿಸಿದ್ದು, ಶೀಘ್ರದಲ್ಲಿ ಸರ್ಕಾರಕ್ಕೆ ಈ ವರದಿ ಸಲ್ಲಿಸಿ, ಪರಿಹಾರ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು.

 ಅವರು ಇಂದು (ಆ.23) ಬೆಳಿಗ್ಗೆ ನವಲಗುಂದ ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಆಗಿರುವ ಮನೆ ಹಾನಿ, ಬೆಳೆಹಾನಿ,  ತಡಹಾಳ  ಸೇತುವೆ ಹಾನಿ ಪರಿಶೀಲಿಸಿ, ಮಾತನಾಡಿದರು. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಉಪವಿಭಾಗಾಧಿಕಾರಿ, ತಹಶೀಲ್ದಾರರು, ಕೃಷಿ ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಕಳೆದ 4 ದಿನಗಳಿಂದ ಬೆಳಹಾನಿಯ ಸಮಿಕ್ಷೆಯನ್ನು ತಂಡಗಳನ್ನು ರಚಿಸಿಕೊಂಡು ತಾಲೂಕಾವರು ಸಮೀಕ್ಷೆಯನ್ನು ನಡೆಸಿದ್ದಾರೆ. ಅಂದಾಜು 80 ಸಾವಿರ ಹೆಕ್ಟರ್ ರಿಂದ 1 ಲಕ್ಷ ಹೆಕ್ಟರ್ ಹೆಸರು ಹಾಳಾಗಿದೆ. ಬೆಳೆ ಹಾನಿ ಕುರಿತು ರೈತರಿಗೆ ಪರಿಹಾರಧನ ಬಿಡುಗಡೆ ಮಾಡಲು ಕೃಷಿ ಸಚಿವರಿಗೆ ವರದಿಯನ್ನು ಸಲ್ಲಿಸಿದ್ದೇವೆ. ಮತ್ತು ಬೆಳೆ ಹಾನಿಯ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ತಲುಪಿಸಲಾಗಿದೆ ಎಂದು ಹೇಳಿದರು.

ಬೆಳೆ ವಿಮೆ ಎನ್ನುವುದು ರೈತರಿಗೆ ಒಂದು ಸುರಕ್ಷಾ ಕವಚವಿದ್ದಂತೆ. ಅನಿರೀಕ್ಷಿತ ಮಳೆಯಿಂದಾಗಿ ವೈಪರೀತ್ಯಗಳಿಂದಾಗುವ ನಷ್ಟವನ್ನು ಇದು ಸರಿದೂಗಿಸುತ್ತದೆ. ಇನ್ನೂ ಹೆಚ್ಚಿನ ರೈತರು ಈ ಯೋಜನೆಯಡಿ ನೋಂದಾಯಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ನವಲಗುಂದ ಪಟ್ಟಣದ ಭೋವಿ ಓಣಿಯಲ್ಲಿರುವ ದ್ಯಾಮವ್ವ ಬಣ್ಣೆನವರ ಮನೆ ನಿರಂತರ ಮಳೆಯಿಂದಾಗಿ ಮನೆಯ ಒಂದು ಬದಿಯ ಗೊಡೆಯು ಸಂಪೂರ್ಣವಾಗಿ ಕುಸಿದಿದೆ. ಮತ್ತು ಅಲ್ಲೆ ಪಕ್ಕದಲ್ಲಿರುವ ಬೇರೊಬ್ಬರ ಜಾಗದಲ್ಲಿ ಸಣ್ಣದೊಂದು ಶೆಡ್ ನಿರ್ಮಿಸಿಕೊಂಡು  ಇಬ್ಬರು ಗಂಡು ಮಕ್ಕಳು ಸೊಸೆಯಂದಿರು ಹಾಗೂ ನಾಲ್ಕು ಜನ ಮೊಮ್ಮಕ್ಕಳು ವಾಸಿಸುತ್ತಿದ್ದಾರೆ. ಈ ಕುರಿತು ಪರಿಶೀಲಿಸಿದ ಸಚಿವರು ತಕ್ಷಣ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗುತ್ತದೆ ಮತ್ತು ಅಲ್ಲಿಯವರೆಗೆ ಖರ್ಚಿಗಾಗಿ ತಮ್ಮ ವೈಯಕ್ತಿ ರೂ. 25 ಸಾವಿರ  ಧನ ಸಹಾಯ ಮಾಡಿದರು. ಸರ್ಕಾರದ ಮೂಲಕ  1.20 ಲಕ್ಷ ನೀಡುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋμï ಲಾಡ್ ಅವರು ನೀಡಿದರು.

ಮಳೆಗಾಲ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಈ ಮನೆಯಲ್ಲಿ ವಾಸ ಮಾಡಬಾರದು. ಕುಟುಂಬದವರು ಸುರಕ್ಷಿತ ಸ್ಥಳದಲ್ಲಿ ತಾತ್ಕಾಲಿಕವಾಗಿ ವಾಸಿಸಬೇಕು ಎಂದು ಕುಟುಂಬಕ್ಕೆ ತಿಳಿಸಿದರು.

ಭೋವಿ ಓಣಿಯಲ್ಲಿ ಇರುವ ಜನರ ಯೋಗಕ್ಷೇಮ ವಿಚಾರಿಸಿದ ಸಚಿವರು, ಯಂಕವ್ವ ಮಾರುತೆಪ್ಪ ಭೋವಿ ಅವರ ಮನೆಯಲ್ಲಿ ತಯಾರಿಸಿದ್ದ ಕಡಬು, ಚುರುಮರಿ ಸೇರಿದಂತೆ ಸಿಹಿ ತಿನಿಸುಗಳನ್ನು ಅವರೊಂದಿಗೆ ಸವಿದರು.

ನಂತರ ನಾಯಕನೂರು ಗ್ರಾಮದಲ್ಲಿನ ಬಸವನಗೌಡ ಅಕ್ಕಿ ಅವರ ಜಮೀನಿಗೆ ಭೇಟಿ ನೀಡಿ, ಆರು ಎಕರೆ ಭೂಮಿಯಲ್ಲಿ ಬೆಳೆದಿದ್ದ ಉಳ್ಳಾಗಡ್ಡಿ ಬೆಳೆ ಎಲ್ಲವೂ ಮಳೆಯಿಂದ ಕೊಳೆತು ಹೋಗಿರುವುದನ್ನ ವೀಕ್ಷಿಸಿದರು. ಮತ್ತು ಅಲ್ಲೇ ಪಕ್ಕದಲ್ಲಿ ಇರುವ ಶಶಿಕಾಂತ ಜಾವೂರ ಅವರ ಜಮೀನುಗಳಿಗೆ ಭೇಟಿ ನೀಡಿ, ಮೂರು ಎಕರೆ ಹದಿಮೂರು ಗುಂಟೆಯಲ್ಲಿ ಹೆಸರು ಮತ್ತು ಗೋವಿಜೋಳ ಬೆಳೆಯನ್ನು  ವೀಕ್ಷಿಸಿದರು.

ಗದಗ-ನರಗುಂದ ರಸ್ತೆಯ ತಡಹಾಳ ಗ್ರಾಮದ ಹತ್ತಿರ ಇರುವ ಬೆಣ್ಣೆ ಹಳ್ಳಕ್ಕೆ ಕೊಚ್ಚಿಹೋದ ತಡಹಾಳ ಸೇತುವೆ ವೀಕ್ಷಣೆ ಮಾಡಿದರು.

ತಡಹಾಳ ಸೇತುವೆ ಹಳೆಯದಾಗಿದ್ದು, ಮರು ನಿರ್ಮಾಣದ ಅಗತ್ಯವಿದೆ. ಈ ಕುರಿತು ಲೋಕೋಪಯೋಗಿ ಇಲಾಖೆ ಸಚಿವರಿಗೆ ಕ್ರೀಯಾ ಯೋಜನೆ ಸಲ್ಲಿಸಿ, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲಿಯ ವರೆಗೆ ಸಂಚಾರಕ್ಕೆ ಅನುಕೂಲವಾಗುವಂತೆ ಸೇತುವೆ ದುರಸ್ಥಿಗೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ನವಲಗುಂದ ಶಾಸಕ ಎನ್.ಹೆಚ್.ಕೋನರೆಡ್ಡಿ ಅವರು ಮಾತನಾಡಿ, ಮುಂಗಾರು ಮಳೆ ಅತಿ ಹೆಚ್ಚು ಆಗಿರುವುದರಿಂದ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ ಸಂತೋμï ಲಾಡ್ ಅವರು ಭೇಟಿ ನೀಡಿ ಸ್ಥಳ ಪರಿಶೀಲಿಸುತ್ತಿದ್ದಾರೆ. ಬೆಳೆ ಹಾನಿ ಆಗಿರುವುದಕ್ಕೆ ವಿಮಾ ಕಂಪನಿಯಿಂದ ಹೆಚ್ಚು ಪರಿಹಾರ ಕೊಡಿಸುವುದಕ್ಕೆ ಹಾಗೂ ಬೆಳೆ ಪರಿಹಾರಕ್ಕೆ  ಸರಕಾರಕ್ಕೆ ವರದಿಯನ್ನು ಸಲ್ಲಿಸಲಾಗುತ್ತದ ಎಂದು ಶಾಸಕರು ಹೇಳಿದರು.

ನವಲಗುಂದ ತಾಲೂಕಿನಲ್ಲಿ ಹೆಸರು 23,150 ಹೆಕ್ಟೇರ್, ಉದ್ದು 320 ಹೆಕ್ಟೇರ್, ಮೆಕ್ಕೆಜೋಳ 50 ಹೆಕ್ಟೇರ್, ಕೆಂಪು ಮೆಣಸಿನಕಾಯಿ 350 ಹೆಕ್ಟೇರ್,  ಈರುಳ್ಳಿ 2050 ಹೆಕ್ಟೇರ್ ಒಟ್ಟು  25,920 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತಕ್ಕೆ ಪ್ರಾಥಮಿಕ ವರದಿ ಸಲ್ಲಿಕೆಯಾಗಿದೆ. ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿಯೇ ಅತಿ ಹೆಚ್ಚು ಹಾನಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಪರಿಹಾರಕ್ಕಾಗಿ ಮನವಿಯನ್ನು ಸಹ ಸಲ್ಲಿಸುತ್ತೇನೆ ಎಂದರು.

ನವಲಗುಂದ ಮತ್ತು ನರಗುಂದ ನಡುವೆ ಇರುವ ಸೇತುವೆಯನ್ನು ಎರಡರಿಂದ ಮೂರು ಬಾರಿ ದುರಸ್ತಿ ಮಾಡಿಸಿದ್ದೇವೆ ಆದರೂ ಅದು ನೀರಿನ ಮಟ್ಟ ಹೆಚ್ಚಾಗಿದೆ. ಅದರಿಂದ ಹೊಸ ಸೇತುವೆ ನಿರ್ಮಾಣಕ್ಕೆ ಅಂದಾಜು 70 ಕೋಟಿ ಬೇಕಾಗುತ್ತದೆ ಹೊಸ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಮಾಡಬೇಕು ಎಂದು ಅಂದುಕೊಂಡಿದ್ದೇವೆ ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ,  ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಉಪ ನಿರ್ದೇಶಕ ಸಂದೀಪ, ನವಲಗುಂದ ತಹಶೀಲ್ದಾರ ಸುಧೀರ ಸಾಹುಕಾರ, ಅಣ್ಣಿಗೇರಿ ತಹಶೀಲ್ದಾರ ಎಂ.ಜಿ.ದಾಸಪ್ಪನವರ, ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ ಅಜಯ ಎನ್. ತಾಲೂಕ ಪಂಚಾಯತ ಇಓ, ತಾಲೂಕಾ ಪಂಚಾಯತ ಅಧಿಕಾರಿಗಳು, ನವಲಗುಂದ ಪುರಸಭೆಯ ಮುಖ್ಯ ಅಧಿಕಾರಿ ಶರಣು ಪೂಜಾರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತರು, ವಿವಿಧ ಮುಖಂಡರು, ಕೃಷಿಕ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Proposal to be submitted to government soon for crop damage compensation: Minister Santosh Lad
Share. Facebook Twitter LinkedIn WhatsApp Email

Related Posts

ಪದೇ ಪದೇ ‘ದೆಹಲಿ ಪ್ರವಾಸ’ದ ಬಗ್ಗೆ ‘ಡಿಸಿಎಂ ಡಿ.ಕೆ ಶಿವಕುಮಾರ್’ ಹೇಳಿದ್ದೇನು ಗೊತ್ತಾ?

22/02/2026 2:47 PM2 Mins Read

ಹಿಂದೆ, ಇಂದು, ಮುಂದೆ ‘JDS ಪಕ್ಷ’ದ ತುತ್ತತುದಿಯ ನಾಯಕರು ‘ಗೌಡರ ಕುಟುಂಬ’ದವರೇ ಆಗಿರುತ್ತಾರೆ: ಸಿಎಂ ಸಿದ್ಧರಾಮಯ್ಯ ಭವಿಷ್ಯ

22/02/2026 2:42 PM3 Mins Read

ನಾನು ‘ನಟೇಶ್ ಬಡ್ತಿ ವಿಚಾರ’ದಲ್ಲಿ ಸುಳ್ಳು ಆರೋಪ ಮಾಡಿದ್ದೇನೆಂದು ಕ್ಷಮೆ ಕೋರಿರುವುದಿಲ್ಲ: ಸ್ನೇಹಮಯಿ ಕೃಷ್ಣ

22/02/2026 2:35 PM2 Mins Read
Recent News

BREAKING : ‘ಭಾರತದ ವರ್ಚಸ್ಸಿಗೆ ಧಕ್ಕೆ’ : ಎಐ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಅರೆಬೆತ್ತಲೆ ಪ್ರತಿಭಟನೆಗೆ ಕೋರ್ಟ್ ಛೀಮಾರಿ

22/02/2026 2:50 PM

ಪದೇ ಪದೇ ‘ದೆಹಲಿ ಪ್ರವಾಸ’ದ ಬಗ್ಗೆ ‘ಡಿಸಿಎಂ ಡಿ.ಕೆ ಶಿವಕುಮಾರ್’ ಹೇಳಿದ್ದೇನು ಗೊತ್ತಾ?

22/02/2026 2:47 PM

ಹಿಂದೆ, ಇಂದು, ಮುಂದೆ ‘JDS ಪಕ್ಷ’ದ ತುತ್ತತುದಿಯ ನಾಯಕರು ‘ಗೌಡರ ಕುಟುಂಬ’ದವರೇ ಆಗಿರುತ್ತಾರೆ: ಸಿಎಂ ಸಿದ್ಧರಾಮಯ್ಯ ಭವಿಷ್ಯ

22/02/2026 2:42 PM

ನಾನು ‘ನಟೇಶ್ ಬಡ್ತಿ ವಿಚಾರ’ದಲ್ಲಿ ಸುಳ್ಳು ಆರೋಪ ಮಾಡಿದ್ದೇನೆಂದು ಕ್ಷಮೆ ಕೋರಿರುವುದಿಲ್ಲ: ಸ್ನೇಹಮಯಿ ಕೃಷ್ಣ

22/02/2026 2:35 PM
State News
KARNATAKA

ಪದೇ ಪದೇ ‘ದೆಹಲಿ ಪ್ರವಾಸ’ದ ಬಗ್ಗೆ ‘ಡಿಸಿಎಂ ಡಿ.ಕೆ ಶಿವಕುಮಾರ್’ ಹೇಳಿದ್ದೇನು ಗೊತ್ತಾ?

By kannadanewsnow0922/02/2026 2:47 PM KARNATAKA 2 Mins Read

ಬೆಂಗಳೂರು : “ನಾನು ದೆಹಲಿಗೆ ಹೋಗುವುದು ಬರುವುದು ಇದ್ದೇ ಇರುತ್ತದೆ. ನಾನು ಹೋಗದೆ ಮತ್ಯಾರು ಹೋಗುತ್ತಾರೆ? ಅವರು ಯಾವಾಗ ಕರೆಯುತ್ತಾರೋ ಆಗೆಲ್ಲಾ…

ಹಿಂದೆ, ಇಂದು, ಮುಂದೆ ‘JDS ಪಕ್ಷ’ದ ತುತ್ತತುದಿಯ ನಾಯಕರು ‘ಗೌಡರ ಕುಟುಂಬ’ದವರೇ ಆಗಿರುತ್ತಾರೆ: ಸಿಎಂ ಸಿದ್ಧರಾಮಯ್ಯ ಭವಿಷ್ಯ

22/02/2026 2:42 PM

ನಾನು ‘ನಟೇಶ್ ಬಡ್ತಿ ವಿಚಾರ’ದಲ್ಲಿ ಸುಳ್ಳು ಆರೋಪ ಮಾಡಿದ್ದೇನೆಂದು ಕ್ಷಮೆ ಕೋರಿರುವುದಿಲ್ಲ: ಸ್ನೇಹಮಯಿ ಕೃಷ್ಣ

22/02/2026 2:35 PM

BREAKING: ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ನ್ಯಾಯಾಂಗ ಬಂಧನ, ಜೈಲುಪಾಲು

22/02/2026 2:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.