ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಮನೆಯಲ್ಲೇ ಕುಳಿತು ಆನ್ ಲೈನ್ ನಲ್ಲಿ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಆಸ್ತಿ ಮಾಲೀಕರಿಗೆ ಇ-ಖಾತೆ ಪಡೆಯುವುದನ್ನು ಸರ್ಕಾರ ಸರಳೀಕರಿಸಿದ್ದು, ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ಮುಖಾಂತರ ಈ ಕೆಳಕಂಡ ಅಗತ್ಯ ದಾಖಲಾತಿಗಳಾದ ಮಾಲೀಕರ ಭಾವಚಿತ್ರ, ಆಸ್ತಿಯ ಕಟ್ಟಡ/ನಿವೇಶನದ ಜಿ.ಪಿ.ಎಸ್. ಛಾಯಾಚಿತ್ರ, ಪ್ರಸ್ತುತ ಸಾಲಿನವರೆಗೆ ಪಾವತಿಸಿರುವ ಆಸ್ತಿ, ನೀರಿನ, ಯು.ಜಿ.ಡಿ, ಘನತ್ಯಾಜ್ಯ ಹಾಗೂ ಇತರೆ ಚಲನ್ ಪ್ರತಿಗಳು, ವಿದ್ಯುತ್ ಆರ್.ಆರ್.ಸಂಖ್ಯೆ, ಸ್ವತ್ತಿನ ನೋಂದಾಯಿತ ದಾಖಲಾತಿಗಳು ಇ.ಸಿ, ನಮೂನೆ-15 ಮತ್ತು 16, ಮಾಲೀಕರ ಆಧಾರ್ ಕಾರ್ಡ್, ಪಾನ್ಕಾಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಮಾಲೀಕರ ದೂರವಾಣಿ ಸಂಖ್ಯೆ, ಆಸ್ತಿಯ ಭೂಪರಿವರ್ತನಾ ಆದೇಶ, ಅನುಮೋದಿತ ಲೇಔಟ್ ನಕ್ಷೆ ಪ್ರತಿ, ಕಟ್ಟಡ ಪರವಾನಗಿ ಪ್ರತಿ ಹಾಗೂ ಸ್ವತ್ತಿಗೆ ಸಂಬAದಿಸಿದ ಇತರ ಪೂರಕ ದಾಖಲಾತಿಗಳನ್ನು ಆನ್ಲೈನ್ನಲ್ಲಿ ಹಾಜರುಪಡಿಸಿ ಸದರಿ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಆನ್ಲೈನ್ನಲ್ಲಿ ಇ-ಖಾತೆ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ www.eaasthi.karnataka.gov.in ಸಹಾಯವಾಣಿ ಸಂಖ್ಯೆ:7259585959 ರ ಮೂಲಕ ಸಂಪರ್ಕಿಸಬಹುದಾಗಿದೆ. ಸದರಿ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕಾಗಿ ಮಹಾನಗರಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.








