ಬೆಂಗಳೂರು : ಹಿಂದು ತಳವಾರ ಜಾತಿಯನ್ನು ಪರಿಶಿಷ್ಟ ಪಂಗಡದ ಸಿಬ್ಬಂದಿಗಳಿಗೆ ಮುಂಬಡ್ತಿ ನೀಡುವ ಬಗ್ಗೆ ಸ್ಪಷ್ಟಿಕರಣ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಉಲ್ಲೇಖಿತ ಸರ್ಕಾರದ ಪತ್ರದಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ 1990 ಮತ್ತು ನಿಯಮಗಳು 1992ರನ್ವಯ ಹಿಂದುಳಿದ ಪ್ರವರ್ಗ-1ರಡಿ ನೇಮಕಾತಿ ಹೊಂದಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪರಿಶಿಷ್ಟ ಪಂಗಡದ ಮುಂಬಡ್ತಿ ನೀಡುವ ಸಂಬಂಧ ತಹಶೀಲ್ದಾರರು ನೀಡುವ ಪರಿಶಿಷ್ಟ ಪಂಗಡದ ಉಲ್ಲೇಖಿತ ಸುತ್ತೋಲೆಯನ್ವಯ ನಾಯಕ ಪರ್ಯಾಯ (Synonym) ಪದವಾದ ಪರಿವಾರ ಮತ್ತು ತಳವಾರ ಜಾತಿಗಳಿಗೆ ಜಾತಿ ಪ್ರಮಾಣ ಪತ್ರದ ನೈಜತೆಯನ್ನು ಪಡೆದು ನೇಮಕಾತಿ ಪ್ರಾಧಿಕಾರವು ಸಂಬಂಧಪಟ್ಟ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಿಂದ ಸಿಂಧುತ್ವ ಪ್ರಮಾಣ ಪತ್ರವನ್ನು ಪಡೆದು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಈ ಮೂಲಕ ತಿಳಿಸಲಾಗಿದೆ.
ಪ್ರವರ್ಗ-1 ಸಿಂಧುತ್ವದ ಆಧಾರದ ಮೇಲೆ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಈಗ ಪರಿವಾರ ಮತ್ತು ತಳವಾರ ಜಾತಿಯ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿ, ಸದರಿ ಪರಿಶಿಷ್ಟ ಪಂಗಡದಲ್ಲಿ ಮುಂಬಡ್ತಿಗೆ ಪರಿಗಣಿಸಲು ಕೋರಿರುತ್ತಾರೆ. ಆದರೆ ಅವರುಗಳು ಮೂಲತ: ಪ್ರವರ್ಗ-1 ರಡಿಯಲ್ಲಿ ನೇಮಕಗೊಂಡಿರುಣಿ ಸಲು ಸೇರ್ಪಡೆಗೊಂಡ ಪರಿಶಿಷ್ಟ ಪಂಗಡದ ಸಿಂಧುತ್ವ ಪ್ರಮಾಣ ಪತ್ರ ಇರುವುದರಿಂದ ಅವರು ಸಲ್ಲಿಸಿರುವ ಪರಿಶಿಷ್ಟ ಪ್ರಮಾಣ ಪತ್ರದ ಆಧಾರದ ಮೇಲೆಯೇ ಮುಂಬಡ್ತಿಗೆ ಪರಿಗಣಿಸಬೇಕೆ ಅಥವಾ ನೇಮಕಾತಿ ಸಂದರ್ಭದಲ್ಲಿ ನೀಡಿದ ಪ್ರವರ್ಗ-1 ರ ಸಿಂಧುತ್ವ ಪ್ರಮಾಣ ಪತ್ರದ ಬದಲಾಗಿ ಈಗ ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದ ನಂತರದ ಸಿಂಧುತ್ವ ಪ್ರಮಾಣ ಪತ್ರ ಪಡೆದು ಅದರ ಆಧಾರದ ಮೇಲೆ ಮುಂಬಡ್ತಿಗೆ ಪರಿಗಣಿಸಬೇಕೇ ಎಂಬ ಕುರಿತು ಸೂಕ್ತ ಆದೇಶ ನೀಡುವಂತೆ ಕೋರಲಾಗಿದೆ.
ಅನುಸೂಚಿತ ಜಾತಿಗಳು ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ ನೇಮಕಾತಿ ಮುಂತಾದವುಗಳ ಮೀಸಲಾತಿ ನಿಯಮ 1990 ಮತ್ತು ನಿಯಮಗಳು 1992ರನ್ವಯ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವ ಪ್ರಾಧಿಕಾರವಾಗಿರುವ ಆಯಾ ತಾಲ್ಲೂಕಿನ ತಹಶೀಲ್ದಾರರು ಜಾತಿ ಪ್ರಮಾಣ ಪತ್ರ ನೀಡುವಾಗ ಪಾಲಿಸಬೇಕಾಗಿರುವ ಕಾರ್ಯವಿಧಾನವನ್ನು ಕಡ್ಡಾಯವಾಗಿ ಪಾಲಿಸಿ ನಿಯಮಾನುಸಾರ ನೈಜವಾದ ಪರಿಶಿಷ್ಟ ವಂಗಡದ Naikda, Nayaka ಸಮುದಾಯದ ಪರ್ಯಾಯ ಪದ (Synonym) ಜಾತಿಗಳಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ನಿಗಧಿತ ಅವಧಿಯೊಳಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಕ್ರಮವಹಿಸಬೇಕಾಗಿದೆ. ಆದ್ದರಿಂದ Naikda, Nayaka ಜಾತಿಯ ಪರ್ಯಾಯ ಪದ (Synonym) ಜಾತಿಗಳಾದ ತಳವಾರ ಹಾಗೂ ಪರಿವಾರ ಜಾತಿಗಳಿಗೆ ಮಾತ್ರ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಗಳನ್ನು ನೀಡತಕ್ಕದ್ದು ಎಂದು ಸ್ಪಷ್ಟಪಡಿಸಿದೆ.








