ಮೈಸೂರು: ನೈರುತ್ಯ ರೈಲ್ವೆ, ಮೈಸೂರು ವಿಭಾಗವು ಮೈಸೂರು ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ನಂ. 2ರಲ್ಲಿ “ಪ್ರಾಜೆಕ್ಟ್ ಆಯುಷ್ಮಾನ್ ನರ್ಸಿಂಗ್ ರೂಮ್” ಅನ್ನು ಲೆಡೀಸ್ ಸರ್ಕಲ್ ಇಂಡಿಯಾ, ಎಂಎಎಲ್ ಸಿ 108ರ ಸಹಯೋಗದಲ್ಲಿ ಉದ್ಘಾಟಿಸಿದೆ.
ಈ ಯೋಜನೆಯ ಉದ್ದೇಶ ತಾಯಂದಿರು ಮತ್ತು ಮಕ್ಕಳಿಗೆ ಆರಾಮದಾಯಕ ಮತ್ತು ಖಾಸಗಿ ಸ್ಥಳವನ್ನು ಒದಗಿಸುವುದು, ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸುವುದಾಗಿದೆ.

ಈ ಸೌಲಭ್ಯವನ್ನು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ವಡಿಯಾರ್, ಮುದಿತ್ ಮಿತ್ತಾಲ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮೈಸೂರು, ಶಮ್ಮಾಸ್ ಹಮೀದ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮೈಸೂರು, ನಿಷಾ ದರ್ಶನ್, ಅಧ್ಯಕ್ಷೆ, ಎಂಎಎಲ್ ಸಿ 108 ಲೇಡೀಸ್ ಸರ್ಕಲ್ ಇಂಡಿಯಾ, ಹಾಗೂ ಇತರ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.
ಈ ಕಾರ್ಯವು ಮೈಸೂರು ವಿಭಾಗದ ಪ್ರಯಾಣಿಕ ಸೌಲಭ್ಯಗಳ ಸುಧಾರಣೆಯ ನಿರಂತರ ಪ್ರಯತ್ನಗಳನ್ನು ತೋರಿಸುತ್ತದೆ. ಉದ್ಘಾಟಿತ ನರ್ಸಿಂಗ್ ರೂಮ್ ತಾಯಂದಿರು ತಮ್ಮ ಶಿಶುಗಳನ್ನು ಸುರಕ್ಷಿತ, ಸ್ವಚ್ಛ ಮತ್ತು ಆರಾಮದಾಯಕ ವಾತಾವರಣದಲ್ಲಿ ನೋಡಿಕೊಳ್ಳಲು ಅವಕಾಶ ಒದಗಿಸುತ್ತದೆ.
ಈ ಸಂದರ್ಭವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು ಇದರಿಂದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕ ಸ್ನೇಹಿ ವಾತಾವರಣ ಒದಗಿಸಿದಂತಾಯಿತು.








