ಬೆಂಗಳೂರು: ಆರ್ ಎಸ್ ಎಸ್ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಅದರಿಂದ ಯಾವುದೇ ಸಮಸ್ಯೆಗಳು ಆಗುತ್ತಿರಲಿಲ್ಲ. ಆದರೇ ಬಿಜೆಪಿ ಪುಡಾರಿಗಳು ಚೆಡ್ಡಿ ಹಾಕಲು ಶುರುವಾದ ಮೇಲೆ ಸಮಸ್ಯೆಗಳು ಹೆಚ್ಚಾಗಿವೆ. ಈ ವಿಷಯವಾಗಿ ಆರ್ ಎಸ್ ಎಸ್ ನವರೇ ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾಗಿ ಸಾಗರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಇಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ದೀಪಾವಳಿ ಹಬ್ಬದ ಶುಭಾಶಯ ಕೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಆರ್ ಎಸ್ ಎಸ್ ನಿಂದ ಯಾವುದೇ ಸಮಸ್ಯೆಗಳಾಗುತ್ತಿರಲಿಲ್ಲ. ಬಿಜೆಪಿ ಪುಡಾರಿಗಳು ಗಣವೇಷ ಹಾಕಿದ ಬಳಿಕ ಸಂಘಕ್ಕೆ ಕೆಟ್ಟ ಹೆಸರು ಬಂದಿದೆ ಎಂದರು.
ಆರ್ ಎಸ್ ಎಸ್ ಪಥ ಸಂಚಲನ ನಮ್ಮ ಸಾಗರ ತಾಲ್ಲೂಕಿನಲ್ಲೂ ನಡೆಯಿತು. ಅದಕ್ಕೆ ಅನುಮತಿಯನ್ನು ನೀಡಲಾಗಿತ್ತು. ಮಸೀದಿ ಬಳಿ ಮೆರವಣಿಗೆ ಹೋಗಬೇಕು ಎಂದಿದ್ದರು. ಅದಕ್ಕೂ ಅವಕಾಶ ಮಾಡಿಕೊಡಲಾಗಿತ್ತು ಎಂದು ಹೇಳಿದರು.
ಸಂಘ ಪರಿವಾರ ಇರಲಿ ಅಥವಾ ಯಾವುದೇ ಸಂಘಟನೆ ಇರಲಿ ಅನುಮತಿ ಪಡೆದು ಕಾರ್ಯಕ್ರಮ ಮಾಡಿದರೇ ಅಭ್ಯಂತರವಿಲ್ಲ. ವಿರೋಧ ಮಾಡುವುದು ವೈಯಕ್ತಿಕ ಅಭಿಪ್ರಾಯ. ನಾನು ಅದರ ಬಗ್ಗೆ ಚರ್ಚೆ ಮಾಡಲು ಹೋಗೋದಿಲ್ಲ. ಸಂಘ ಪರಿವಾರದವರು ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುವಂತೆ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ಮಾಡುವುದು ಸರಿಯಲ್ಲ ಎಂಬುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಪುಟ ಪುನರಚನೆಯಾದರೇ ಸಚಿವ ಸ್ಥಾನ ನಿರೀಕ್ಷಿಸುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದಂತ ಅವರು ನಾನು ಬಂಗಾರಪ್ಪ ಅವರ ಶಿಷ್ಯನಾಗಿದ್ದೇನೆ. ಮೂರು ಬಾರಿ ಶಾಸಕನಾಗಿಯೂ ಆಯ್ಕೆಯಾಗಿದ್ದೇನೆ. ಅವಕಾಶ ಕೊಡಿ ಎಂದು ಕೇಳುವುದು ತಪ್ಪಲ್ಲ ಎನ್ನುತ್ತಲೇ ಸಚಿವ ಸ್ಥಾನದ ಆಕಾಂಕ್ಷೆಯನ್ನು ಸಾಗರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಬಿಚ್ಚಿಟ್ಟರು.
ಕೇಂದ್ರ ಸರ್ಕಾರವು ಜಿಎಸ್ಟಿ ಕಡಿತದಿಂದ ಎಲ್ಲಾ ರಾಜ್ಯ ಸರ್ಕಾರಗಳಿಗೂ ನಷ್ಟವಾಗುತ್ತಿದೆ. ಇದರಿಂದಾಗಿ ಕರ್ನಾಟಕಕ್ಕೆ 15,000 ಕೋಟಿ ನಷ್ಟವಾಗಿದೆ. ನಬಾರ್ಡ್ ಯೋಜನೆಯ ಹಣ ಬಂದಿಲ್ಲ. ನೆರೆ ಹಾವಳಿಗೂ ಸರಿಯಾದ ಪರಿಹಾರ ನೀಡಿಲ್ಲ ಎಂಬುದಾಗಿ ಆಕ್ರೋಶ ಹೊರ ಹಾಕಿರದು.
‘ಹಾಸನಾಂಬಾ ದೇವಿ’ ಭಕ್ತರ ಗಮನಕ್ಕೆ: ಅ.22ರ ಸಂಜೆ 7ರವರೆಗೆ ಮಾತ್ರವೇ ‘ದರ್ಶನ’ಕ್ಕೆ ಅವಕಾಶ
GOOD NEWS : ಕರ್ನಾಟಕದಲ್ಲಿ `18 ಸಾವಿರ ಶಿಕ್ಷಕರ ನೇಮಕಾತಿ’ : ‘TET ಪರೀಕ್ಷೆ’ಗೆ ಅರ್ಜಿ ಆಹ್ವಾನ | TET Exam 2025