ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಅದ್ರಂತೆ, ಪ್ರಿಯಾಂಕಾ ಗಾಂಧಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದಾರೆ ಎನ್ನಲಾಗ್ತಿದೆ.
ರಾಯ್ ಬರೇಲಿ ಕ್ಷೇತ್ರದ ಹಾಲಿ ಸಂಸದೆಯಾಗಿದ್ದ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ ನಂತರ ಅವರು ರಾಯ್ ಬರೇಲಿಯಲ್ಲಿ ಬಿಜೆಪಿಯನ್ನ ಎದುರಿಸಲಿದ್ದಾರೆ ಎಂಬ ಊಹಾಪೋಹಗಳು ಇದ್ದವು.
ರಾಯ್ ಬರೇಲಿಯ ಜನರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಸೋನಿಯಾ ಗಾಂಧಿ, “ರಾಯ್ ಬರೇಲಿಯಲ್ಲಿ ನಮ್ಮ ಕುಟುಂಬದ ಬೇರುಗಳು ತುಂಬಾ ಆಳವಾಗಿವೆ. ಹಿಂದಿನಂತೆ ಭವಿಷ್ಯದಲ್ಲಿಯೂ ನೀವು ನನ್ನೊಂದಿಗೆ ಮತ್ತು ನನ್ನ ಕುಟುಂಬದೊಂದಿಗೆ ನಿಲ್ಲುತ್ತೀರಿ ಎಂದು ನನಗೆ ತಿಳಿದಿದೆ” ಎಂದಿದ್ದಾರೆ.
ಮುಂಬರುವ ಚುನಾವಣೆಗೆ ಅಭ್ಯರ್ಥಿಗಳನ್ನ ನಿರ್ಧರಿಸಲು ಪಕ್ಷವು ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿದ್ದರಿಂದ ಗುರುವಾರ ಸಂಜೆಯವರೆಗೆ ಅವರ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ.
ಹೀಗಿದೆ ಇಂದಿನ ‘ಸಚಿವ ರಾಮಲಿಂಗಾರೆಡ್ಡಿ’ ನೇತೃತ್ವದಲ್ಲಿ ನಡೆದ ’11 ಕಾರ್ಮಿಕ ಸಂಘಟನೆ’ ಮುಖಂಡರ ಸಭೆಯ ಹೈಲೈಟ್ಸ್
BREAKING : ರಷ್ಯಾ-ಉಕ್ರೇನ್ ಯುದ್ಧ ವಲಯಕ್ಕೆ ಭಾರತೀಯರ ಕಳ್ಳಸಾಗಣೆ ಮಾಡುತ್ತಿದ್ದ ‘ಜಾಲ’ ಪತ್ತೆ ಹಚ್ಚಿದ ‘CBI’