ಬೆಂಗಳೂರು: ನಟ ದರ್ಶನ್ ಗೆ ಮತ್ತೆ ಮತ್ತೆ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಇದೀಗ ಮಹಿಳೆಯೊಬ್ಬರು ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಈ ಮೂಲಕ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾದಂತೆ ಆಗಿದೆ.
ಬೆಂಗಳೂರಿನ 37ನೇ ಎಸಿಎಂಎಂ ಕೋರ್ಟ್ ನಲ್ಲಿ ರೇಣುಕಮ್ಮ ಎಂಬುವರು ನಟ ದರ್ಶನ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 295(ಎ), 509, 504 ಅಡಿಯಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಇಂದು ಈ ಖಾಸಗಿ ದೂರಿನ ವಿಚಾರಣೆಯನ್ನು ಬೆಂಗಳೂರಿನ 37ನೇ ಎಸಿಎಂಎಂ ಕೋರ್ಟ್ ನಲ್ಲಿ ನಡೆಸಲಾಯಿತು. ದೂರುದಾರೆ ರೇಣುಕಮ್ಮ ಪರವಾಗಿ ವಕೀಲ ರಂಗನಾಥ್ ವಾದ ಮಂಡಿಸಿದರು. ವಾದವನ್ನು ಆಲಿಸಿದಂತ ನ್ಯಾಯಾಲಯವು ಅರ್ಜಿಯ ಮುಂದಿನ ವಿಚಾರಣೆಯನ್ನು ಮಾರ್ಚ್.1ಕ್ಕೆ ಮುಂದೂಡಲಾಗಿದೆ.
ಅಂದಹಾಗೇ ನಟ ದರ್ಶನ್ ವಿರುದ್ಧ ಐಪಿಸಿ ಸೆಕ್ಷನ್ 295ಎ ಅಡಿಯಲ್ಲಿ ಉದ್ದೇಶಪೂರ್ವಕವಾಗಿ ಹೇಳಿಕೆ ನೀಡುವುದು. 509ರಡಿ ಮಹಿಳೆಯರನ್ನು ಅವಮಾನಿಸುವ ಉದಗ್ದೇಶ. 298 ಧಾರ್ಮಿಕ ಭಾನೆಗಳಿಗೆ ಧಕ್ಕೆ ತುರುವುದು. 504 ಶಾಂತಿ ಭಂಗಕ್ಕೆ ಪ್ರಚೋದನೆ ನೀಡುವುದು ಆಗಿದೆ.
BREAKING: ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದ ರಾಯಭಾರಿಯಾಗಿ ‘ನಟ ಡಾಲಿ ಧನಂಜಯ್’ ನೇಮಕ