ಧಾರವಾಡ: ಜಿಲ್ಲೆಯಲ್ಲಿನ ಕೇಂದ್ರ ಕಾರಾಗೃಹ ಜೈಲಿನಲ್ಲೇ ಕೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಂತ ಆರೋಪಿ, ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಧಾರವಾಡದಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಂತ ಕೈದಿ ಬಸವರಾಜ ಹೊಸೂರ(47) ಎಂಬಾತ ನೇಣಿಗೆ ಶರಣಾಗಿದ್ದಾನೆ. ಕಾರಾಗೃಹದಲ್ಲಿನ ಕಿಟಗಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.
ಬಸವರಾಜ ಹೊಸೂರ ಅವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಂತ ಕೈದಿಯಾಗಿದ್ದನು. ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸಂದಿಗವಾಡ ನಿವಾಸಿಯಾಗಿದ್ದರು. ಡಬ್ಬಲ್ ಮರ್ಡರ್ ಕೇಸಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಂತ ಕೈದಿ, ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಡಿ.ಕೆ.ಶಿವಕುಮಾರ್ ಅವರೇ.. ನಿಮ್ಮ ಹಾಗೆ ಕಂಡ ಕಂಡಿದ್ದೆಲ್ಲವನ್ನೂ ಲೂಟಿ ಹೊಡೆದಿಲ್ಲ: HD ಕುಮಾರಸ್ವಾಮಿ ಕಿಡಿ